HomeKarnatakaದೆಹಲಿಯಲ್ಲಿ ಬೀಡುಬಿಟ್ಟು ಮೂರು ದಿನಗಳ ಬಳಿಕ ಬೆಂಗಳೂರಿಗೆ ವಾಪಸ್ ಆದ ಕೃಷ್ಣ ಬೈರೇಗೌಡ: ಖಾತೆ ಗೊಂದಲದ...

ದೆಹಲಿಯಲ್ಲಿ ಬೀಡುಬಿಟ್ಟು ಮೂರು ದಿನಗಳ ಬಳಿಕ ಬೆಂಗಳೂರಿಗೆ ವಾಪಸ್ ಆದ ಕೃಷ್ಣ ಬೈರೇಗೌಡ: ಖಾತೆ ಗೊಂದಲದ ಬಗ್ಗೆ ಹೇಳಿದ್ದೇನು?

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ದೊರೆತರೂ ಅದರಲ್ಲಿ ಬಿಡಿಎ ಹೊರತುಪಡಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೃಷ್ಣ ಬೈರೇಗೌಡ ಪ್ರ,ಆಣವಚನ ಸ್ವೀಕಾರ ಮಾಡಿ ಹತ್ತು ದಿನಗಳು ಕಳೆದರೂ ಅಧಿಕರ ಸ್ವೀಕರಿಸದೇ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದರು. ಹೈಕಮಾಂಡ್ ನಾಯಕರ ಭೇಟಿಯಾಗಿ ಮೂರು ದಿನಗಳ ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ನಗರಾಭಿವೃದ್ಧಿಯಲ್ಲಿ ಬಿಡಿಎ ಸೇರಿಸಲು ವರಿಷ್ಠರು ಒಪ್ಪಿದ್ದಾರೆಯೇ? ಈ ಬಗ್ಗೆ ಸಿಎಂ ಡಿ..ಕೆ.ಶಿವಕುಮಾರ್ ಬಿಡಿಎ ಕೊಡಲು ಸಮ್ಮತಿಸಿದ್ದಾರೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ, ಖಾತೆ ಜವಾಬ್ದಾರಿ ತೆಗೆದುಕೊಳ್ಳುವಾಗ ಕೆಲ ಸ್ಪಷ್ಟತೆ ಇರಬೇಕು ಎಂದಿದ್ದಾರೆ.

ಖಾತೆ ವಿಚಾರಕ್ಕೆ ಕೆಲವು ಸ್ಪಷ್ಟತೆ ಬೇಕಿದೆ. ಖಾತೆ ಜವಾಬ್ದಾರಿ ತೆಗೆದುಕೊಳ್ಳುವಾಗ ಕೆಲ ಸ್ಪಷ್ಟತೆ ಇರಬೇಕು. ಜವಾಬ್ದಾರಿಗೆ ಸರಿಯಾಗಿ ನಿರ್ವಹಣೆ ಮಾಡಿ ರಿಸಲ್ಟ್ ಕೊಡಬೇಕು. ಸಿಎಂ ಅವರಿಗೆ ಯಾವ ಸ್ಪಷ್ಟತೆ ಇರಬೇಕು ಎಂದು ಮನವರಿಕೆ ಮಾಡಿದ್ದೇನೆ. ಆದಷ್ಟು ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕದ ಕಠಿಣ ಜವಾಬ್ದಾರಿಗಳಲ್ಲಿ ಬೆಂಗಳೂರು ಖಾತೆ ಕೂಡ ಒಂದು. ಸಿಎಂ ಖಾತೆ ಬಗ್ಗೆ ಸ್ಪಷ್ಟತೆ ನೀಡಿದ ನಂತರ ನಾನು ಮುಂದುವರೆಯುತ್ತೇನೆ. ಅಧಿಕಾರ ಒಂದೇ ನೋಡೋದಲ್ಲ, ಮುಂದೆ ನಾನು ಉತ್ತರ ಕೊಡಬೇಕಾಗುತ್ತದೆ. ಸ್ಪಷ್ಟತೆ ಇಲ್ಲದೇ ಕೆಲಸ ಮಾಡಲು ಹೋದರೆ ತೊಂದರೆಯಾಗುತ್ತದೆ. ಸಿಎಂ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಹೈಕಮಾಂಡ್ ನಾಯಕರ ಗಮನದಲ್ಲಿ ಈ ವಿಷಯ ಇದೆ. ಹೈಕಮಾಂಡ್ ಸಹ ಸಿಎಂ ಜೊತೆ ಸಮಾಲೋಚನೆ ಮಾಡಿದ್ದಾರೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular