HomeKarnatakaದೆಹಲಿಯಲ್ಲಿ ಪಿಎಂ ಮೋದಿ-ಸಿಎಂ ಡಿಕೆಶಿ ಬಿಗ್ ಮೀಟಿಂಗ್ :ಕರ್ನಾಟಕದ ಪರವಾಗಿ ಸಿಎಂ ಇಟ್ಟ ಆ 18...

ದೆಹಲಿಯಲ್ಲಿ ಪಿಎಂ ಮೋದಿ-ಸಿಎಂ ಡಿಕೆಶಿ ಬಿಗ್ ಮೀಟಿಂಗ್ :ಕರ್ನಾಟಕದ ಪರವಾಗಿ ಸಿಎಂ ಇಟ್ಟ ಆ 18 ಪ್ರಮುಖ ಬೇಡಿಕೆಗಳು ಯಾವುವು?

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar), ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಹಿತಾಸಕ್ತಿಯ 18 ಬಿಗ್ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ ರಾಷ್ಟ್ರಪತಿ ಭವನದಲ್ಲಿ ನಡೆದ ಈ ಹೈ-ಪ್ರೊಫೈಲ್ ಮೀಟಿಂಗ್‌ನಲ್ಲಿ, ಪ್ರಧಾನಿ ಮೋದಿಗೆ ಬಸವೇಶ್ವರರ ಪುತ್ಥಳಿ ನೀಡಿ ಸನ್ಮಾನಿಸಿದ ಡಿಕೆಶಿ, ಕರ್ನಾಟಕದ ನೀರಾವರಿ, ಮೆಟ್ರೋ ಮತ್ತು ಹೆದ್ದಾರಿ ಯೋಜನೆಗಳಿಗಾಗಿ ಕೇಂದ್ರದ ಸಂಪೂರ್ಣ ಸಹಕಾರ ಹಾಗೂ ಬಾಕಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕಠಿಣ ಹಕ್ಕೊತ್ತಾಯ ಮಂಡಿಸಿದ್ದಾರೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿ ಮಾಡಿರುವ ಸಿಎಂ, ರಾಜ್ಯಕ್ಕೆ ಬರಬೇಕಾದ ಕೋಟಿ ಕೋಟಿ ಹಣದ ಬಿಡುಗಡೆಗೆ ಬಲವಾದ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕಾವೇರಿ-ಕೃಷ್ಣಾ-ಮಹದಾಯಿ: ನೀರಾವರಿ ಯೋಜನೆಗಳ ಮಹಾ ಕದನ

ರಾಜ್ಯದ ಜೀವನಾಡಿ ನೀರಾವರಿ ಯೋಜನೆಗಳಿಗೆ ಕೇಂದ್ರದ ಅಂತಿಮ ಮುದ್ರೆ ಒತ್ತಿಸಲು ಡಿಕೆಶಿ ಸಖತ್ ಪ್ಲಾನ್ ಮುಂಡಿಟ್ಟಿದ್ದಾರೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇಕೆದಾಟು ಯೋಜನೆ: ತಮಿಳುನಾಡಿನ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕೇಂದ್ರ ಜಲ ಆಯೋಗ (CWC) ತೀರ್ಮಾನ ಕೈಗೊಳ್ಳಬೇಕಿರುವುದರಿಂದ ಕೇಂದ್ರ ಸರ್ಕಾರ ಶೀಘ್ರವೇ ಅಂತಿಮ ಅನುಮತಿ ನೀಡಬೇಕು.

ಕೃಷ್ಣಾ ಮೇಲ್ದಂಡೆ ಯೋಜನೆ (UKP-3): ನ್ಯಾಯಾಧಿಕರಣದ ಅಂತಿಮ ತೀರ್ಪು ಬಂದು ದಶಕ ಕಳೆದರೂ ಕೇಂದ್ರ ಸರ್ಕಾರ ಇನ್ನು ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದು, ತಕ್ಷಣವೇ ಗೆಜೆಟ್‌ ಹೊರಡಿಸಬೇಕು.

ಭದ್ರಾ ಮೇಲ್ದಂಡೆಗೆ ₹5,300 ಕೋಟಿ ಧೋಕಾ?:

2023-24ರ ಕೇಂದ್ರ ಬಜೆಟ್‌ನಲ್ಲಿ ₹5,300 ಕೋಟಿ ಘೋಷಣೆಯಾಗಿದ್ದರೂ 3 ವರ್ಷಗಳಿಂದ ನಯಾಪೈಸೆ ಬಿಡುಗಡೆಯಾಗಿಲ್ಲ ಮಧ್ಯ ಕರ್ನಾಟಕದ ಬರಪೀಡಿತರ ಹಿತದೃಷ್ಟಿಯಿಂದ ಪ್ರಸ್ತುತ ಪರಿಷ್ಕೃತ ವೆಚ್ಚ ₹21,167.93 ಕೋಟಿಗೆ PMKSY-AIBP ಯೋಜನೆಯಡಿ ತಕ್ಷಣ ನೆರವು ನೀಡಬೇಕು.

ಮಹದಾಯಿ (ಕಳಸಾ-ಬಂಡೂರಿ): ಕುಡಿಯುವ ನೀರಿನ ಈ ಯೋಜನೆಗೆ ಜಲಶಕ್ತಿ ಇಲಾಖೆ ಒಪ್ಪಿಗೆ ನೀಡಿದ್ದರೂ ಕೇಂದ್ರ ಅರಣ್ಯ ಮತ್ತು ವನ್ಯಜೀವಿ ಸಚಿವಾಲಯದ ಅನುಮತಿ ಬಾಕಿ ಇದ್ದು, ಅದನ್ನು ತಕ್ಷಣ ಕೊಡಿಸಬೇಕು.

₹11,122 ಕೋಟಿಯ ಇತರ ಯೋಜನೆಗಳು: ಸೊಂತಿ ಏತ ನೀರಾವರಿ, ಇಂಡಿ ಶಾಖಾ ನಾಲೆ ಆಧುನೀಕರಣ, ಬೆಣ್ಣೆಹಳ್ಳ ನದಿ ಪ್ರವಾಹ ನಿಯಂತ್ರಣ ಸೇರಿದಂತೆ ಹಲವು ಪ್ರಸ್ತಾವನೆಗಳಿಗೆ ಶೀಘ್ರವೇ ಒಪ್ಪಿಗೆ ಬೇಕು.

ನದಿ ಜೋಡಣೆಯಲ್ಲಿ 45 TMC ಪಾಲು: ಗೋದಾವರಿ-ಕಾವೇರಿ ಮತ್ತು ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ಕನಿಷ್ಠ 40 ರಿಂದ 45 ಟಿಎಂಸಿ (TMC) ನ್ಯಾಯಯುತ ಪಾಲು ಸಿಗಲೇಬೇಕು.

ಬೆಂಗಳೂರಿನ ಮೆಟ್ರೋ, ರೈಲು ಮತ್ತು ಹೆದ್ದಾರಿಗಳ ಮೆಗಾ ಪ್ಲಾನ್

ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮಾಡಲು ಮತ್ತು ಮೂಲಸೌಕರ್ಯ ಬಲಪಡಿಸಲು ಸಿಎಂ ಡಿಕೆಶಿ ಕೇಂದ್ರದ ಮುಂದೆ ಇಟ್ಟಿರುವ ಬೇಡಿಕೆಗಳಿವು:

₹26,000 ಕೋಟಿ ವಿಶೇಷ ಪ್ಯಾಕೇಜ್: ರಾಷ್ಟ್ರೀಯ ಆರ್ಥಿಕತೆಗೆ ಬೆಂಗಳೂರಿನ ಭಾರಿ ಕೊಡುಗೆಯನ್ನು ಪರಿಗಣಿಸಿ, ಸಿಟಿಯ ಇನ್ಫ್ರಾಸ್ಟ್ರಕ್ಚರ್‌ಗಾಗಿ ₹26,000 ಕೋಟಿ ವಿಶೇಷ ಅನುದಾನ ನೀಡಬೇಕು.

ಮೆಟ್ರೋ ಹಂತ-3 ಮತ್ತು ಸುರಂಗ ಮಾರ್ಗ: ₹9,700 ಕೋಟಿ ವೆಚ್ಚದ ಮೆಟ್ರೋ ಹಂತ-3ರ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆ ಹಾಗೂ ಸರ್ಜಾಪುರದಿಂದ ಹೆಬ್ಬಾಳದವರೆಗಿನ ₹25,999 ಕೋಟಿಯ ಸುರಂಗ ಮಾರ್ಗದ (Phase-3A) ಪರಿಷ್ಕೃತ ಡಿಪಿಆರ್‌ಗೆ ಶೀಘ್ರ ಒಪ್ಪಿಗೆ ನೀಡಬೇಕು. ಮೆಟ್ರೋ ಹಂತ-2 ರ ಪರಿಷ್ಕೃತ ವೆಚ್ಚದ (₹40,425.02 ಕೋಟಿ) ಹೆಚ್ಚುವರಿ ಮೊತ್ತವನ್ನೂ ಅನುಮೋದಿಸಬೇಕು.

ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR): ಪಿಪಿಪಿಎಸಿ (PPPAC) ಅನುಮತಿ ನೀಡಿದ್ದರೂ ಈ ಫೈಲ್ ಪ್ರಸ್ತುತ ಪ್ರಧಾನಿ ಕಚೇರಿಯಲ್ಲಿ (PMO) ಬಾಕಿ ಉಳಿದಿದ್ದು, ಕ್ಯಾಬಿನೆಟ್ ಅನುಮೋದನೆ ಸಿಗಬೇಕು.

ಬುಲೆಟ್ ಟ್ರೈನ್ ಮತ್ತು ಸೆಮಿ ಹೈ-ಸ್ಪೀಡ್ ರೈಲು (RRTS): ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ ವೇಗಗೊಳಿಸಬೇಕು. ಜೊತೆಗೆ ಆರ್‌ಆರ್‌ಟಿಎಸ್ (RRTS) ಮಾದರಿಯಲ್ಲಿ ಬೆಂಗಳೂರಿನಿಂದ ಮೈಸೂರು, ಕನಕಪುರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ ಜಾರಿಗೆ ತರಬೇಕು.

ಗ್ರಾಮ ಪಂಚಾಯಿತಿಗಳಿಗೆ ಹಣ, ರಾಯಚೂರಿಗೆ ಏಮ್ಸ್ ಧಮಾಕಾ

ಗ್ರಾಪಂ ಬಾಕಿ ಹಣ: ಎಲ್ಲ ಷರತ್ತು ಪೂರೈಸಿದರೂ 15ನೇ ಹಣಕಾಸು ಆಯೋಗದ ₹2,860 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಇನ್ನೂ ಬಾಕಿ ಉಳಿಸಿಕೊಂಡಿದ್ದು, ತಕ್ಷಣ ರಿಲೀಸ್ ಮಾಡಬೇಕು.

ಕಲ್ಯಾಣ ಕರ್ನಾಟಕಕ್ಕೆ ₹25,000 ಕೋಟಿ: ಸಂವಿಧಾನದ 371(ಜೆ) ವಿಧಿಯ ಆಶಯದಂತೆ ಈ ಭಾಗದ ಪ್ರಗತಿಗೆ ವಾರ್ಷಿಕವಾಗಿ ₹25,000 ಕೋಟಿ ಪ್ರತ್ಯೇಕ ಆರ್ಥಿಕ ನೆರವು ಬೇಕು.

ರಾಯಚೂರಿನಲ್ಲಿ ಏಮ್ಸ್ (AIIMS): ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಕ್ಷೇತ್ರ ಸುಧಾರಿಸಲು ರಾಯಚೂರು ಜಿಲ್ಲೆಯಲ್ಲಿ ಶೀಘ್ರವಾಗಿ ‘ಏಮ್ಸ್’ ಆಸ್ಪತ್ರೆ ಸ್ಥಾಪನೆಗೆ ಗ್ರೀನ್ ಸಿಗ್ನಲ್ ಕೊಡಬೇಕು.

ಶರಾವತಿ ಪಂಪ್ಡ್ ಸ್ಟೋರೇಜ್ (2,000 MW): ದೇಶದ ನವೀಕರಿಸಬಹುದಾದ ಇಂಧನ ಗುರಿ ತಲುಪಲು ಈ ಯೋಜನೆಗೆ ಪರಿಸರ ಇಲಾಖೆಯ ಕ್ಲಿಯರೆನ್ಸ್ ತ್ವರಿತಗೊಳಿಸಬೇಕು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular