HomeLatest News'ಬೀದಿ ಬದಿ ವ್ಯಾಪಾರಿ'ಗಳಿಗೆ ವಿವಿಧ ಯೋಜನೆಯ ಸೌಲಭ್ಯ ; ಜೂನ್ 30 ರವರೆಗೆ ವಿಶೇಷ ಅಭಿಯಾನ

‘ಬೀದಿ ಬದಿ ವ್ಯಾಪಾರಿ’ಗಳಿಗೆ ವಿವಿಧ ಯೋಜನೆಯ ಸೌಲಭ್ಯ ; ಜೂನ್ 30 ರವರೆಗೆ ವಿಶೇಷ ಅಭಿಯಾನ

ಧಾರವಾಡ : ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯನ್ನು ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ 2020 ರಲ್ಲಿ ಜಾರಿಗೊಳಿಸಿದ್ದು, ಮಾರ್ಚ-2030 ರವರೆಗೆ ಜಾರಿಯಲ್ಲಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಸ್ವ-ನಿಧಿ ಮಹೋತ್ಸವ, ನಗರ ಮಟ್ಟದಲ್ಲಿ ಲೋಕ ಕಲ್ಯಾಣ ಮೇಳ ಮತ್ತು ಜನಗಣತಿ ಪಟ್ಟಣಗಳಲ್ಲಿ ಸ್ವ-ನಿಧಿ ಮೇಳಗಳನ್ನು ಜೂನ್ 1, 2026 ರಿಂದ ಜೂನ್ 30, 2026 ರವರೆಗೆ ವಿಶೇಷ ಅಭಿಯಾನವನ್ನು ಆಯೋಜಿಸಲಾಗಿದೆ.

ಆಸಕ್ತ ಬೀದಿ ಬದಿ ವ್ಯಾಪಾರಿಗಳು ಗುರುತಿನ ಚೀಟಿ ಪಡೆಯಲು ಆಧಾರ ಕಾರ್ಡ ಪ್ರತಿ (ಕುಟುಂಬದ ಸದಸ್ಯರ ಸಹಿ), ಮತದಾರರ ಗುರುತಿನ ಚೀಟಿ ಪ್ರತಿ, ಪಡಿತರ ಚೀಟಿ ಪ್ರತಿ, ಪಾಸಪೋರ್ಟ ಸೈಜ ಫೋಟೊ-3, ಕುಟುಂಬದ ಸದಸ್ಯರುಗಳು ಹೊಂದಿದ ಪೋಟೊ-2 (ಗುಂಪು ಫೋಟೊ), ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಪಾಸ್ ಪುಸ್ತಕ ಪ್ರತಿ, ಬೀದಿ ಬದಿ ವ್ಯಾಪಾರ ಮಾಡುವ ಸ್ಥಳದ 2 ಛಾಯಾ ಚಿತ್ರಗಳನ್ನು ಸಲ್ಲಿಸಬೇಕು.

ಬೀದಿ ಬದಿ ವ್ಯಾಪಾರಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ವಿಮಾ ಸೌಲಭ್ಯವನ್ನು ವಿವಿಧ ಯೋಜನೆಯಡಿ ಪಡೆಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗಾಗಿ ಸಮುದಾಯ ಸಂಘಟನಾಧಿಕಾರಿ, ಸಮುದಾಯ ಸಂಘಟಕರು ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಡೇ-ನಲ್ಮ್ ಕಛೇರಿ ಹುಬ್ಬಳ್ಳಿ, ಧಾರವಾಡ, ಅಣ್ಣಿಗೇರಿ, ನವಲಗುಂದ, ಪುರಸಭೆ ಕಛೇರಿ, ಅಳ್ನಾವರ, ಕಲಘಟಗಿ, ಕುಂದಗೋಳ, ಪಟ್ಟಣ ಪಂಚಾಯತ ಕಛೇರಿ, ಪಟ್ಟಣ ಮಾರಾಟ ಸಮಿತಿ ಸದಸ್ಯರು, ವ್ಯವಸ್ಥಾಪಕರು, ರಾಷ್ಟ್ರೀಕೃತ ಬ್ಯಾಂಕುಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular