HomeKarnatakaBIG NEWS: ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಸ್ಯಾಂಡಲ್ ವುಡ್ ನಟ-ನಟಿಯರಿಗೂ ಎದುರಾಯ್ತು ಸಂಕಷ್ಟ

BIG NEWS: ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಸ್ಯಾಂಡಲ್ ವುಡ್ ನಟ-ನಟಿಯರಿಗೂ ಎದುರಾಯ್ತು ಸಂಕಷ್ಟ

ಬೆಳಗಾವಿ: 40,700 ಜನರಿಂದ 2,400 ಕೋಟಿ ಸಂಗ್ರಹಿಸಿ ಜನರಿಗೆ ವಂಚಿಸಿದ್ದ ಶಿವಂ ಅಸೋಸಿಯೇಟ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಯಾಂಡಲ್ ವುಡ್ ನಟ-ನಟಿಯರಿಗೂ ಸಂಕಷ್ಟ ಎದುರಾಗಿದೆ. ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್ ಪ್ರಚಾಅರಕ್ಕಾಅಗಿ ಕನ್ನಡ ಚಿತ್ರರಂಗದ ಖ್ಯಾತ ನಟ-ನಟಿಯರನ್ನು ಕೆರೆಸಿ ಅದ್ಧೂರು ಕಾರ್ಯಕ್ರಮ ಮಾಡಿದ್ದ. ಈ ಹಿನ್ನೆಲೆಯಲ್ಲಿ ಇದೀಗ ನಟ-ನಟಿಯರಿಗೆ ಆತಂಕ ಶುರುವಾಗಿದೆ.

ಕಂದಾಯ ಮತ್ತು ಸಹಕಾರ ಇಲಾಖೆಯಿಂದ ಆರಂಭವಾದ ಈ ವಂಚನೆ ಪ್ರಕರಣದ ತನಿಖೆ ಸದ್ಯ ಸಿಐಡಿ ನಡೆಸುತ್ತಿದ್ದು, ತನಿಖೆ ತೀವ್ರಗೊಳ್ಳುತ್ತಿದ್ದಂತೆ ಸಿಐಡಿ ಅಧಿಕಾರಿಗಳಿಗೆ ಹಲವಾರು ಮಹತ್ವದ ವಿಚಾರ ಲಭ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ವರ್ಷ ಡಿಸೆಂಬರ್ 27 ರಂದು ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವರ್ ನೇತೃತ್ವದಲ್ಲಿ ಬೆಳಗಾವಿ ಹಬ್ಬ ಎಂಬ ಅದ್ದೂರಿ ಉತ್ಸವ ಆಯೋಜಿಸಲಾಗಿತ್ತು. ಬೆಳಗಾವಿಯ ಕರವೇ ಜಿಲ್ಲಾಧ್ಯಕ್ಷ ಹಾಗೂ ಸಿನಿಮಾ ನಟ ಎಂದು ಹೇಳಿಕೊಳ್ಳುವ ಅಭಿಲಾಷ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಗ್ರಾಹಕರು ಮತ್ತು ಸಾರ್ವಜನಿಕರು ಶಿವಂ ಅಸೋಸಿಯೇಟ್ಸ್‌ನಲ್ಲಿ ಡೆಪಾಸಿಟ್ ಮಾಡಿದ್ದ ಕೋಟ್ಯಂತರ ರೂಪಾಯಿ ಹಣದಲ್ಲೇ ಈ ಸಾಂಸ್ಕೃತಿಕ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಭರಿಸಲಾಗಿದೆ ಎಂಬ ಅನುಮಾನ ಸಿಐಡಿಗೆ ಬಂದಿದೆ.

ಅಂದು ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ತಾರೆಯರಾದ ಡಾಲಿ ಧನಂಜಯ, ಸಪ್ತಮಿ ಗೌಡ, ನೀನಾಸಂ ಸತೀಶ್, ರಾಗಿಣಿ ದ್ವಿವೇದಿ, ದಿಗಂತ್ ಹಾಗೂ ಐಂದ್ರಿತಾ ರೈ, ವಶಿಷ್ಠ ಸಿಂಹ, ಗಾಯಕ ರಾಜೇಶ್ ಕೃಷ್ಣನ್ ಭಾಗಿಯಾಗಿದ್ದರು.

ಶಿವಾನಂದ ನೀಲಣ್ಣವರ್ ಈ ಸಿನಿಮಾ ತಾರೆಗೆ ಎಷ್ಟು ರೂಪಾಯಿ ಸಂಭಾವನೆ ನೀಡಿದ್ದಾರೆ? ಆ ಹಣದ ಸಂದಾಯ ಬ್ಯಾಂಕ್ ಅಕೌಂಟ್ ಮೂಲಕ ಆಗಿದೆಯೇ ಅಥವಾ ಚೆಕ್/ಕ್ಯಾಶ್ ಮೂಲಕ ನಡೆದಿದೆಯೇ ಎಂಬ ಸಂಪೂರ್ಣ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸಿಐಡಿ ಕಲೆ ಹಾಕುತ್ತಿದೆ. ಅಕ್ರಮ ಹಣದ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಈ ಎಲ್ಲ ಸಿನಿ ತಾರೆಯರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿಐಡಿ ಸಜ್ಜಾಗಿದೆ.

ಅಂದು ಕಾರ್ಯಕ್ರಮಕ್ಕೆ ಹಾಜರಾಗಿದ್ದ ನಟ-ನಟಿಯರಿಗೂ ಶೀಘ್ರದಲ್ಲೇ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಕೋರುತ್ತೇವೆ ಎಂದು ಕರ್ನಾಟಕ ಸಿಐಡಿಯ ಡಿಐಜಿ ಡಾ. ಭೀಮಾಶಂಕರ್ ಗುಳೇದ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟ-ನಟಿಯರುಗೂ ಸಂಕಷ್ಟ ಎದುರಾಗಿದೆ. ವಂಚಕನೊಬ್ಬ ನಡೆಸಿದ್ದ ಕಾರ್ಯಕ್ರಮಕ್ಕೆ ಅರಿವಿಲ್ಲದೆ ಬಂದು ಹೋದ ತಪ್ಪಿಗೆ ಈಗ ಸ್ಯಾಂಡಲ್‌ವುಡ್ ತಾರೆಯರಿಗೆ ವಿಚರಣೆ ಸಂಕಷ್ಟ ಶುರುವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular