HomeEntertainmentಪೆದ್ದಿ ಚಿತ್ರದಲ್ಲಿ ನಾಯಕನ ಅತಿರೇಕದ ಕಾಮುಕತೆ: ನಾಯಕಿ ಕಂಡು 'ಅವಳನ್ನು ಒಂದು ಸಾರಿಯಾದ್ರೂ...' ಎಂದು ಅಸಹ್ಯ...

ಪೆದ್ದಿ ಚಿತ್ರದಲ್ಲಿ ನಾಯಕನ ಅತಿರೇಕದ ಕಾಮುಕತೆ: ನಾಯಕಿ ಕಂಡು ‘ಅವಳನ್ನು ಒಂದು ಸಾರಿಯಾದ್ರೂ…’ ಎಂದು ಅಸಹ್ಯ ಡೈಲಾಗ್; ಕ್ಯಾಕರಿಸಿ ಉಗಿದ ಜನ!

ಇತ್ತೀಚೆಗಿನ ದಿನಗಳಲ್ಲಿ ಕೆಲ ಚಿತ್ರಗಳು ನಾಯಕಿಯರನ್ನು ಕಥೆಗಾಗಿ ಆರಿಸುವುದಕ್ಕಿಂತ ಗ್ಲಾಮರ್ ನೆಪದಲ್ಲಿ ಎಕ್ಸ್‌ಪೋಸ್ ಮಾಡಿಸಲೆಂದೇ ಹೆಚ್ಚಾಗಿ ಆರಿಸುತ್ತಾರೆ ಎಂಬ ವಾದ ಅನೇಕ ಬಾರಿ ಕೇಳಿಬಂದಿದೆ.

ಅನೇಕ ಚಿತ್ರಗಳಲ್ಲಿ ಕಥೆ ಪಾಡಿಗೆ ಕಥೆ ಸಾಗಿದರೆ ನಾಯಕಿಯ ಪಾತ್ರ ಆ ಕಥೆಯಿಂದ ದೂರವಿರಲಿದ್ದು, ಹಾಡು ಹಾಗೂ ಕೆಲವೊಂದಷ್ಟು ದೃಶ್ಯಗಳಲ್ಲಿ ಮಾತ್ರ ನಾಯಕಿಗೆ ಸ್ಥಾನ ನೀಡಲಾಗಿರುತ್ತದೆ. ಇನ್ನೂ ಅನೇಕ ಚಿತ್ರಗಳಲ್ಲಿ ಇಲ್ಲಿ ನಾಯಕಿಯ ಅಗತ್ಯವೇ ಇರಲಿಲ್ಲ ಎಂದರೂ ನಾಯಕಿ ಪಾತ್ರವನ್ನು ಬಲವಂತದಿಂದ ಸೇರಿಸಲಾಗಿದೆ ಎನಿಸಿಬಿಡುತ್ತದೆ.

ಅಷ್ಟಕ್ಕೂ ಕೇವಲ ಒಂದು ಹಾಡಿಗಾಗಿ ನಾಯಕಿಯರನ್ನು ಬಳಸುವುದೇಕೆ? ಅದರಲ್ಲೂ ಕೆಟ್ಟದಾಗಿ ಅವರನ್ನು ತೆರೆ ಮೇಲೆ ತೋರಿಸುವುದೇಕೆ? ಎಂಬ ಚರ್ಚೆಯನ್ನು ಅನೇಕ ಚಿತ್ರಗಳು ಹುಟ್ಟಹಾಕಿವೆ. ಈ ಸಾಲಿಗೆ ಇದೀಗ ಮೊನ್ನೆಯಷ್ಟೆ ಬಿಡುಗಡೆಯಾಗಿರುವ ನಿರ್ದೇಶಕ ಬುಚ್ಚಿ ಬಾಬು ಸನ ನಿರ್ದೇಶನದ ಪೆದ್ದಿ ಚಿತ್ರ ಸಹ ಸೇರ್ಪಡೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿ ಜಾನ್ವಿ ಕಪೂರ್ ನಟಿಸಿದ್ದು, ಇವರ ಹಲವಾರು ದೃಶ್ಯಗಳಲ್ಲಿ ಎಕ್ಸ್‌ಪೋಸ್‌ ಮಾಡಿಸಲಾಗಿದೆ ಎಂದು ಚಿತ್ರ ನೋಡಿ ಹೊರಬಂದ ಅನೇಕ ಸಾಮಾನ್ಯ ಪ್ರೇಕ್ಷಕರು ಕಿಡಿಕಾರಿದ್ದಾರೆ.

ಅಲ್ಲದೇ ಚಿತ್ರದಲ್ಲಿ ನಾಯಕಿಯ ಕುರಿತು ನಾಯಕ ಹೇಳುವ ಒಂದು ನಿರ್ದಿಷ್ಟ ಡೈಲಾಗ್ ಪ್ರಬುದ್ಧ ಸಿನಿಮಾ ಪ್ರೇಕ್ಷಕರನ್ನು ಭಾರೀ ದೊಡ್ಡ ಮಟ್ಟದಲ್ಲಿ ಕೆರಳಿದ್ದು, ಅನೇಕರು ಈ ಕುರಿತು ವಿಡಿಯೊ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಸಾಕು ಮಾಡಿ ನಿಮ್ಮ ಕಾಮುಕತನವನ್ನು ಎಂದು ಕಿಡಿಕಾರಿದ್ದಾರೆ.

ಈ ಜನರು ಮಾಡಿರುವ ವಿಡಿಯೊಗಳಲ್ಲಿ ನಾಯಕ ನಾಯಕಿಯನ್ನು ಕಂಡು ಆತನ ಸ್ನೇಹಿತನ ಜತೆ ‘ದೀನ್ನಿ ತಟ್ಟೆಯ್ಯಾಲಿ’ ( ಆಕೆಗೆ ಬಾರಿಸಬೇಕು ) ಎನ್ನುತ್ತಾನೆ. ಅಂತಹ ಕೆಟ್ಟ ಡೈಲಾಗ್ ಬರೆಯಲು, ಬಳಸಲು ಹೇಗಾದರೂ ಮನಸ್ಸು ಬಂತು ಎಂದು ಪ್ರಶ್ನಿಸಿದ್ದಾರೆ. ನಾಯಕನ ಈ ಡೈಲಾಗ್‌ಗೆ ಆತನ ಸ್ನೇಹಿತ ‘ತನು ಪಾಲಿಟಿಷಿಯನ್ ಕೂತುರು, ತಟ್ಟೆಯ್ಯಾಲಿ ಅಂಟಾವಾ?’ ( ಆಕೆ ರಾಜಕಾರಣಿಯ ಮಗಳು. ಆಕೆಯನ್ನೇ ಬಾರಿಸಬೇಕು ಎನ್ನುತ್ತೀಯ? ) ಎಂದು ಪ್ರಶ್ನಿಸಿ ಪ್ರತಿಕ್ರಿಯಿಸುತ್ತಾನೆ. ಇದಕ್ಕೆ ನಾಯಕ ‘ಇಂಕೊ ಸಾರಿ ಪುಡ್ತಾಮಾ ಏಂಟಿ’ ( ಇನ್ನೊಂದು ಸಾರಿ ಹುಟ್ಟುತ್ತೀವಾ? ) ಎಂದು ನಾಯಕಿಯ ಬಳಿ ಹೋಗಿ ಅಪ್ಪಿಕೊಂಡು ಮುತ್ತು ನೀಡುತ್ತಾನೆ ಎಂದು ದೃಶ್ಯ ಸಮೇತ ವಿವರಿಸಿ ಕ್ಯಾಕರಿಸಿ ಡೈಲಾಗ್ ಬರೆದವನಿಗೆ, ನಿರ್ದೇಶಕನಿಗೆ, ನಾಯಕ ನಟನಿಗೆ ಉಗಿದಿದ್ದಾರೆ.

ಸುದ್ದಿ ಬರೆಯುವುದಕ್ಕೂ ಸಹ ನಿಖರವಾದ ತರ್ಜುಮೆ ಪದ ಬಳಸಲಾಗದಷ್ಟು ಕೆಟ್ಟದಾಗಿ ಈ ಸಂಭಾಷಣೆಯಿದ್ದು, ಮಹಿಳೆಯರ ಮೇಲೆ ಇದೂ ಸಹ ಒಂದು ರೀತಿಯ ದೌರ್ಜನ್ಯದ ಲೆಕ್ಕಕ್ಕೇ ಬರಲಿದೆ. ಹೀಗಾಗಿಯೇ ಅನೇಕರು ಇದರ ವಿರುದ್ಧ ದನಿ ಎತ್ತಿದ್ದು, ಇಂತಹ ಅನಗತ್ಯ ಹಾಗೂ ಉದ್ದೇಶಪೂರ್ವಕವಾಗಿ ಕಾಮುಕತೆ ತೋರಿಸುವ ಡೈಲಾಗ್ ಮತ್ತು ದೃಶ್ಯಗಳೇಕೆ ಎಂದು ಪ್ರಶ್ನಿಸಿದ್ದಾರೆ.

link: https://www.instagram.com/reel/DZMek4DM9qE/?igsh=MXFiZzdrN3VtZXRkbQ==

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular