HomeKarnatakaBIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ ; 'KSRTC' ಬಸ್ ಪಾಸ್ ಅರ್ಜಿ ಸಲ್ಲಿಕೆಗೆ...

BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ ; ‘KSRTC’ ಬಸ್ ಪಾಸ್ ಅರ್ಜಿ ಸಲ್ಲಿಕೆಗೆ ಹೊಸ ನಮೂನೆ ಬಿಡುಗಡೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಶೈಕ್ಷಣಿಕ ವರ್ಷ 2026-27ನೇ ಸಾಲಿಗೆ ವಿದ್ಯಾರ್ಥಿಗಳ ಬಸ್ ಪಾಸ್ ಪಡೆಯಲು ಬೇಕಾದ ಅಧಿಕೃತ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಈ ಕುರಿತಂತೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ.

ಅರ್ಜಿಯಲ್ಲಿ ಭರ್ತಿಮಾಡಬೇಕಾದ ಪ್ರಮುಖ ವಿವರಗಳು

  • ವಿದ್ಯಾರ್ಥಿಯ ವೈಯಕ್ತಿಕ ಮಾಹಿತಿ: ವಿದ್ಯಾರ್ಥಿಯ ಹೆಸರು, ಹುಟ್ಟಿದ ದಿನಾಂಕ, ಲಿಂಗ, ನೋಂದಣಿ ಸಂಖ್ಯೆ (Registration No), ಕೋರ್ಸ್ ಮತ್ತು ವರ್ಷ.
  • ಶೈಕ್ಷಣಿಕ ವಿವರ: SATS/UUCMS ಐಡಿ ಹಾಗೂ ಶಿಕ್ಷಣ ಸಂಸ್ಥೆಯ ಹೆಸರು ಮತ್ತು ವಿಳಾಸ.
  • ವಿಳಾಸ ಮತ್ತು ಪ್ರಯಾಣದ ಮಾಹಿತಿ: ವಿದ್ಯಾರ್ಥಿಯ ಮನೆಯ ವಿಳಾಸ, ಪ್ರಯಾಣದ ಮಾರ್ಗ (ಎಲ್ಲಿಂದ ಎಲ್ಲಿಗೆ – From Place to To Place) ಮತ್ತು ಮಾರ್ಗ ಬದಲಾವಣೆಯ ಸ್ಥಳ (Via Place).
  • ದೃಢೀಕರಣ: ಅರ್ಜಿಯಲ್ಲಿ ನೀಡಲಾದ ಎಲ್ಲಾ ವಿವರಗಳು ಶೈಕ್ಷಣಿಕ ಸಂಸ್ಥೆಯ ದಾಖಲೆಗಳಲ್ಲಿ ಇರುವಂತೆಯೇ ಇವೆ ಎಂಬುದನ್ನು ದೃಢೀಕರಿಸುವ ಪ್ರಮಾಣಪತ್ರವನ್ನು ಶಾಲಾ/ಕಾಲೇಜು ಅಥವಾ ವಿಶ್ವವಿದ್ಯಾಲಯದ ಮುಖ್ಯಸ್ಥರು (ಪ್ರಾಂಶುಪಾಲರು/ಮುಖ್ಯೋಪಾಧ್ಯಾಯರು) ಸಹಿ ಮತ್ತು ಮುದ್ರೆಯೊಂದಿಗೆ ನೀಡಬೇಕಾಗುತ್ತದೆ.

ವಿದ್ಯಾರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರವನ್ನು ನಿಗದಿತ ಜಾಗದಲ್ಲಿ ಅಂಟಿಸಿ, ಸಂಬಂಧಪಟ್ಟ ಶಿಕ್ಷಣ ಸಂಸ್ಥೆಯ ಮುದ್ರೆ ಮತ್ತು ಪ್ರಾಂಶುಪಾಲರ ಸಹಿ ಪಡೆಯುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular