HomeLatest NewsOMG : 'ಪ್ಲಂಬರ್ ಅಕೌಂಟ್’ಗೆ ಬರೋಬ್ಬರಿ 294 ಕೋಟಿ ರೂ. ಜಮಾ ; ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕಾರ್ಮಿಕ...

OMG : ‘ಪ್ಲಂಬರ್ ಅಕೌಂಟ್’ಗೆ ಬರೋಬ್ಬರಿ 294 ಕೋಟಿ ರೂ. ಜಮಾ ; ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕಾರ್ಮಿಕ !

ಬಿಹಾರದ ಪ್ಲಂಬರ್ ಒಬ್ಬನಿಗೆ ಸಂಭವಿಸಿದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ದಿನವಹಿ ದುಡಿದರೆ ಮಾತ್ರ ಹೊಟ್ಟೆ ತುಂಬುವ ಸ್ಥಿತಿಯಲ್ಲಿರುವ ಆ ಸಾಮಾನ್ಯ ಕಾರ್ಮಿಕನ ಖಾತೆಗೆ ಅಕಸ್ಮಾತ್ತಾಗಿ ಕೋಟ್ಯಂತರ ರೂಪಾಯಿ ಜಮೆಯಾಗಿದೆ. ಈ ಘಟನೆ ಆತನನ್ನು, ಸ್ಥಳೀಯ ಪೊಲೀಸರನ್ನು ಮತ್ತು ಬ್ಯಾಂಕ್ ಅಧಿಕಾರಿಗಳನ್ನು ದಂಗಾಗಿಸಿದೆ.

ಏನಿದು ಘಟನೆ ?

ಬಿಹಾರದ ಗಯಾ ಜಿಲ್ಲೆಯ ಮಸ್ತ್‌ಪುರ ಗ್ರಾಮದ ನಿವಾಸಿ ವಿಕಾಶ್ ಕುಮಾರ್ ಎಂಬಾತ ಪ್ಲಂಬಿಂಗ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಬುಧವಾರ ತನ್ನ ಗ್ರಾಹಕರೊಬ್ಬರು ಕಳುಹಿಸಿದ 1,300 ರೂಪಾಯಿ ಹಣವನ್ನು ಎಟಿಎಂ ಮೂಲಕ ಡ್ರಾ ಮಾಡಿದ ನಂತರ, ಆತನ ಖಾತೆಯಲ್ಲಿ ಕೇವಲ 113 ರೂಪಾಯಿ ಮಾತ್ರ ಉಳಿದಿತ್ತು. ಆದರೆ, ಗುರುವಾರ ಬೆಳಗ್ಗೆ ಆತನ ಮೊಬೈಲ್‌ಗೆ ಬಂದ ಸಂದೇಶವನ್ನು ನೋಡಿ ವಿಕಾಶ್ ಶಾಕ್ ಆಗಿದ್ದಾರೆ. ಆತನ ಖಾತೆಯಲ್ಲಿ ಇದ್ದಕ್ಕಿದ್ದಂತೆ 94 ಕೋಟಿ ರೂಪಾಯಿ ಜಮೆಯಾಗಿತ್ತು. ಆ ಅಚ್ಚರಿಯಿಂದ ಹೊರಬರುವಷ್ಟರಲ್ಲೇ, ಸಂಜೆಯ ಹೊತ್ತಿಗೆ ಆ ಮೊತ್ತ ಬರೋಬ್ಬರಿ 294 ಕೋಟಿ ರೂಪಾಯಿಗೆ ಏರಿಕೆಯಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಯಭೀತರಾದ ವಿಕಾಶ್.. ಪೊಲೀಸರಿಗೆ ದೂರು!

ಸಾಮಾನ್ಯವಾಗಿ ಇಷ್ಟು ದೊಡ್ಡ ಮೊತ್ತದ ಹಣ ಖಾತೆಗೆ ಬಂದರೆ ಯಾರಾದರೂ ಸಂಭ್ರಮಿಸುತ್ತಾರೆ. ಆದರೆ ವಿಕಾಶ್ ಕುಮಾರ್ ಮಾತ್ರ ಭಯಭೀತರಾದರು. ಈ ಹಣ ಎಲ್ಲಿಂದ ಬಂತು ಎಂಬುದು ತಿಳಿಯದೆ ಆತ ಕಂಗಾಲಾದರು. ಆ ಹಣವನ್ನು ಮುಟ್ಟಲೂ ಧೈರ್ಯ ಮಾಡದ ವಿಕಾಶ್, ತಕ್ಷಣವೇ ಗ್ರಾಮದ ಮುಖಂಡರಿಗೆ ವಿಷಯ ತಿಳಿಸಿದರು. ಅವರ ಸಲಹೆಯ ಮೇರೆಗೆ ಬೋಧ್‌ಗಯ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದರು.

ತನಿಖೆ ಆರಂಭಿಸಿದ ಪೊಲೀಸರು

ಪ್ಲಂಬರ್‌ನ ದೂರಿನ ಮೇರೆಗೆ ಬೋಧ್‌ಗಯ ಪೊಲೀಸರು ಕೂಡಲೇ ಸ್ಪಂದಿಸಿದರು. ಇದು ಅತ್ಯಂತ ಸೂಕ್ಷ್ಮವಾದ ಆರ್ಥಿಕ ವಿಚಾರ ಎಂದು ಪೊಲೀಸ್ ಠಾಣೆಯ ಎಸ್‌ಎಚ್‌ಒ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ವಿಕಾಶ್ ಕುಮಾರ್ ಅವರ ಬ್ಯಾಂಕ್ ದಾಖಲೆಗಳು, ಸರ್ವರ್ ಲಾಗ್‌ಗಳು ಮತ್ತು ವಹಿವಾಟಿನ ಐಡಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಹಣ ತಾಂತ್ರಿಕ ದೋಷದಿಂದ ಬಂದಿದೆಯೇ ಅಥವಾ ಸೈಬರ್ ಅಪರಾಧಿಗಳ ಕೈವಾಡ ಇದೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular