ಬೆಂಗಳೂರು: ಕೆಲಸ ಮಗಿಸಿ ವಾಪಸ್ ಆಗುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಲಕ್ಕೆನಹಳ್ಳಿಯಲ್ಲಿ ನಡೆದಿದೆ.
ಬಾಣಸವಾಡಿ ನಿವಾಸಿ ನರಸಿಂಹ ಮೂರ್ತಿ (27) ಮೃತ ಯುವಕ. ಮಾಕಳಿಯಲ್ಲಿನ ವೇರ್ ಹೌಸ್‌ನಲ್ಲಿ ಕೆಲಸ ಮುಗಿಸಿ ಬೈಕ್‌ನಲ್ಲಿ ವಾಪಸ್ ಆಗುವಾಗ ಈ ಅಪಘಾತ ಸಂಭವಿಸಿದೆ. ಹಿಟ್ ಅಂಡ್ ರನ್‌ಗೆ ಯುವಕ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

