HomeEntertainmentರಾಜಮೌಳಿ ವಾರಾಣಸಿ ಚಿತ್ರದಲ್ಲಿ ರಾಮ ಮತ್ತು ಕುಂಭಕರ್ಣನ ಭೀಕರ ಕಾಳಗ: ಮಹೇಶ್ ಬಾಬು ಅಭಿಮಾನಿಗಳಿಗೆ ಹಬ್ಬದಂತಹ...

ರಾಜಮೌಳಿ ವಾರಾಣಸಿ ಚಿತ್ರದಲ್ಲಿ ರಾಮ ಮತ್ತು ಕುಂಭಕರ್ಣನ ಭೀಕರ ಕಾಳಗ: ಮಹೇಶ್ ಬಾಬು ಅಭಿಮಾನಿಗಳಿಗೆ ಹಬ್ಬದಂತಹ ಸುದ್ದಿ ನೀಡಿದ ಚಿತ್ರತಂಡ

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್ ನ ಮುಂಬರುವ ಬಹುನಿರೀಕ್ಷಿತ ‘ವಾರಾಣಸಿ’ ಚಿತ್ರದ ಬಗ್ಗೆ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರು ಅತ್ಯಂತ ರೋಚಕ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಚಿತ್ರದಲ್ಲಿ ರಾಮ ಮತ್ತು ಕುಂಭಕರ್ಣನ ನಡುವಿನ ಭೀಕರ ಯುದ್ಧದ ದೃಶ್ಯ ಇರಲಿದ್ದು, ಇದು ಬರೋಬ್ಬರಿ 30 ನಿಮಿಷಗಳ ಕಾಲ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಝಲಕ್ ನಲ್ಲಿ ಹನುಮಂತನ ಬಾಲ ಮತ್ತು ರಥದ ದೃಶ್ಯಗಳನ್ನು ನೀವು ಗಮನಿಸಿರಬಹುದು ಎಂದು ನೆನಪಿಸಿದ ವಿಜಯೇಂದ್ರ ಪ್ರಸಾದ್, ಈ ಭಾಗವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲಿದೆ ಎಂದಿದ್ದಾರೆ. ಆದರೆ ಈ ಸಿನಿಮಾ ಕಾಲಚಕ್ರ ಅಥವಾ ಟೈಮ್ ಟ್ರಾವೆಲ್ ಆಧಾರಿತವಾಗಿದೆಯೇ ಎಂಬ ಪ್ರಶ್ನೆಗೆ, ಚಿತ್ರದ ರಹಸ್ಯವನ್ನು ಕಾಪಾಡುವ ಸಲುವಾಗಿ ಹೆಚ್ಚು ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ.

60 ದಿನಗಳ ಕಾಲ ನಡೆದ ಚಿತ್ರೀಕರಣ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಿರ್ದೇಶಕ ರಾಜಮೌಳಿ, ಮಹೇಶ್ ಬಾಬು ಮೊದಲ ಬಾರಿಗೆ ಶ್ರೀರಾಮನ ಗೆಟಪ್ ನಲ್ಲಿ ಫೋಟೋಶೂಟ್ ಗೆ ಬಂದಾಗ ತಮಗೆ ರೋಮಾಂಚನವಾಗಿತ್ತು ಎಂದು ನೆನಪಿಸಿಕೊಂಡಿದ್ದರು. ಮಹೇಶ್ ಬಾಬು ಅವರಲ್ಲಿ ಕೃಷ್ಣನ ಚಾರ್ಮ್ ಮತ್ತು ರಾಮನ ಶಾಂತತೆ ಎರಡೂ ಇದೆ ಎಂದು ಅವರು ಹೇಳಿದ್ದರು. ಈ ರಣರಂಗದ ದೃಶ್ಯಕ್ಕಾಗಿ ಚಿತ್ರತಂಡ ಸತತ 60 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು, ಪ್ರತಿಯೊಂದು ಸಣ್ಣ ಭಾಗವನ್ನು ಹೊಸದಾಗಿ ಕಲ್ಪಿಸಿಕೊಂಡು ಶೂಟ್ ಮಾಡುವುದು ದೊಡ್ಡ ಸವಾಲಾಗಿತ್ತು ಎಂದು ರಾಜಮೌಳಿ ವಿವರಿಸಿದ್ದಾರೆ. ಇದು ಇಬ್ಬರ ವೃತ್ತಿಜೀವನದಲ್ಲೇ ಅತ್ಯಂತ ಸ್ಮರಣೀಯ ದೃಶ್ಯವಾಗಲಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಚಿತ್ರದಲ್ಲಿ ಮಹೇಶ್ ಬಾಬು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಖಚಿತವಾಗಿದ್ದು, ಕುಂಭಕರ್ಣನ ಪಾತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಲಿದ್ದಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಗ್ಲೋಬಲ್ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾದ ಮೂಲಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಭಾರತೀಯ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಭಾರಿ ನಿರೀಕ್ಷೆ ಹುಟ್ಟಿಸಿರುವ ‘ವಾರಾಣಸಿ’ ಸಿನಿಮಾ ಮುಂಬರುವ 2027 ರಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular