HomeUncategorizedಪತಿ ಪೊಲೀಸ್ ಆಗಿದ್ರೆ ಜನಸಾಮಾನ್ಯರ ಮೇಲೆ ಕಾರು ಹರಿಸಬಹುದೇ: ಗುರುಗ್ರಾಮದ ಮಹಿಳೆಯ ಅಹಂಕಾರದ ವರ್ತನೆಗೆ ನೆಟ್ಟಿಗರು...

ಪತಿ ಪೊಲೀಸ್ ಆಗಿದ್ರೆ ಜನಸಾಮಾನ್ಯರ ಮೇಲೆ ಕಾರು ಹರಿಸಬಹುದೇ: ಗುರುಗ್ರಾಮದ ಮಹಿಳೆಯ ಅಹಂಕಾರದ ವರ್ತನೆಗೆ ನೆಟ್ಟಿಗರು ಫುಲ್ ಫೈರ್

ಹರಿಯಾಣದ ಗುರುಗ್ರಾಮದ ಸೆಕ್ಟರ್ 62 ರಲ್ಲಿ ಪಾದಚಾರಿಯೊಬ್ಬರು ಹಾಗೂ ಮಹಿಳಾ ಚಾಲಕಿಯ ನಡುವೆ ನಡೆದಿರುವ ಭೀಕರ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಸುರಕ್ಷತೆ ಹಾಗೂ ಅಧಿಕಾರ ದುರ್ಬಳಕೆಯ ಬಗ್ಗೆ ಈ ಘಟನೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ವರದಿಗಳ ಪ್ರಕಾರ, ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗವಾಗಿ ಬಂದ ಮಹಿಳೆಯ ಕಾರು ಅವರ ಕಾಲಿನ ಮೇಲೆ ಹರಿದಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಲು ಹೋದಾಗ ಮಹಿಳೆಯು ಕನಿಷ್ಠ ಸೌಜನ್ಯಕ್ಕೂ ಕ್ಷಮೆ ಕೇಳದೆ, ಉಲ್ಟಾ ಜಗಳಕ್ಕೆ ನಿಂತಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಪತಿ ಪೊಲೀಸ್ ಇಲಾಖೆಯಲ್ಲಿದ್ದಾರೆ ಎಂದು ಹೇಳಿ ಆ ವ್ಯಕ್ತಿಯನ್ನು ಹೆದರಿಸಲು ಯತ್ನಿಸಿದ್ದಾರೆ.

ವಿಡಿಯೋ ಚಿತ್ರೀಕರಿಸಿದ ಪಾದಚಾರಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮಗೆ ರಸ್ತೆಯಲ್ಲಿ ಎದುರಾದ ಅನ್ಯಾಯವನ್ನು ಸಹಿಸದ ಆ ವ್ಯಕ್ತಿ, ತಕ್ಷಣವೇ ತಮ್ಮ ಮೊಬೈಲ್ ಫೋನ್ ತೆಗೆದು ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾರೆ. ಕಾರಿನ ನಂಬರ್ ಪ್ಲೇಟ್ ಸಹಿತ ಮಹಿಳೆಯ ವರ್ತನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ವೇಳೆ ವಿಡಿಯೋದಲ್ಲಿ ಮಹಿಳೆಯು ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು, ನೀನು ರಸ್ತೆ ಮಧ್ಯದಲ್ಲಿ ನಡೆಯುತ್ತಿದ್ದಕ್ಕೆ ನಿನಗೆ ಏಟು ಬಿದ್ದಿದೆ ಎಂದು ಉದ್ಧಟತನದ ಉತ್ತರ ನೀಡಿದ್ದಾರೆ.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಂತ್ರಸ್ತ ವ್ಯಕ್ತಿ, ಕ್ಯಾಮೆರಾವನ್ನು ರಸ್ತೆಯತ್ತ ತಿರುಗಿಸಿ, ಕಾರು ರಸ್ತೆ ಬದಿಗೆ ಬಂದು ಡಿಕ್ಕಿ ಹೊಡೆದಿರುವುದನ್ನು ಸಾಕ್ಷಿ ಸಮೇತ ತೋರಿಸಿದ್ದಾರೆ. ಇಬ್ಬರ ನಡುವಿನ ಮಾತಿನ ಚಕಮಕಿ ಜೋರಾದಾಗ ಮಹಿಳೆಯು ತನ್ನ ಪತಿಯ ಉದ್ಯೋಗವನ್ನು ಪ್ರಸ್ತಾಪಿಸಿ ಪ್ರಭಾವ ಬೀರಲು ಯತ್ನಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸಿದೆ.

ನೆಟ್ಟಿಗರ ತೀವ್ರ ಆಕ್ರೋಶ

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೇವಲ ಒಂದು ಸಣ್ಣ ಕ್ಷಮೆ ಕೇಳಿದ್ದರೆ ಮುಗಿಯುತ್ತಿದ್ದ ವಿಷಯಕ್ಕೆ ತನ್ನ ಅಹಂಕಾರ ಪ್ರದರ್ಶಿಸಿ ಮಹಿಳೆ ಈಗ ಸಿಕ್ಕಿಬಿದ್ದಿದ್ದಾಳೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಪತಿ ಪೊಲೀಸ್‌ನಲ್ಲಿದ್ದರೆ ರಸ್ತೆಯಲ್ಲಿ ಜನ ಸಾಮಾನ್ಯರ ಮೇಲೆ ಕಾರು ಹರಿಸಲು ಲೈಸೆನ್ಸ್ ಸಿಕ್ಕಿದಂತೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಭಾರತದ ರಸ್ತೆಗಳಲ್ಲಿ ಪ್ರಭಾವಶಾಲಿಗಳು ಕಾನೂನಿಗೆ ಬೆಲೆ ನೀಡುವುದಿಲ್ಲ ಎಂಬ ದೂರುಗಳಿಗೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular