HomeLatest Newsಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ :3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ಜರಿ...

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ :3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ ಆರಂಭ

ಬೆಂಗಳೂರು: ಖಾಕಿ ಧರಿಸಿ ನಾಡಿನ ಸೇವೆ ಮಾಡಬೇಕು ಅಂದುಕೊಂಡಿರೋ ರಾಜ್ಯದ ಸುವರ್ಣಾವಕಾಶ ಕಾಯ್ತಿದ್ದ ಯುವಜನತೆಗೆ ಕರ್ನಾಟಕ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಒಟ್ಟು 3,395 ಪೊಲೀಸ್ ಕಾನ್‌ಸ್ಟೇಬಲ್ (Police Constable) ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ಬಾರಿ ವಿಶೇಷ ಏನೆಂದರೆ, ಇಡೀ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುತ್ತಿದ್ದು, ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

https://www.instagram.com/p/DZNbSx8gRmF/?utm_source=ig_web_copy_link&igsh=NTc4MTIwNjQ2YQ==

ಯಾವ್ಯಾವ ವಿಭಾಗದಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ? ಅರ್ಜಿ ಸಲ್ಲಿಕೆ ಹೇಗೆ? ವಯೋಮಿತಿ ಸಡಿಲಿಕೆ ಏನಿದೆ?

ಹುದ್ದೆಗಳ ಸಂಪೂರ್ಣ ವರ್ಗೀಕರಣ (Vacancy Details)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಟ್ಟು 3,395 ಹುದ್ದೆಗಳನ್ನು ಪುರುಷರು, ಮಹಿಳೆಯರು, ಸೇವಾನಿರತರು ಹಾಗೂ ತೃತೀಯಲಿಂಗಿ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:

ಪುರುಷ ಅಭ್ಯರ್ಥಿಗಳು: 2,266 ಹುದ್ದೆಗಳು

ಮಹಿಳಾ ಅಭ್ಯರ್ಥಿಗಳು: 755 ಹುದ್ದೆಗಳು

ಸೇವಾನಿರತ ಪುರುಷರು (In-Service): 257 ಹುದ್ದೆಗಳು

ಸೇವಾನಿರತ ಮಹಿಳೆಯರು (In-Service): 82 ಹುದ್ದೆಗಳು

ತೃತೀಯಲಿಂಗಿ ಅಭ್ಯರ್ಥಿಗಳು (Transgender): 35 ಹುದ್ದೆಗಳು

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು (Important Dates)

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಿನಾಂಕಗಳ ಕಡೆಗೆ ವಿಶೇಷ ಗಮನ ಹರಿಸುವುದು ಮುಖ್ಯ.

ಅರ್ಜಿ ಸಲ್ಲಿಕೆ ಆರಂಭ: ಜೂನ್ 8 ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 3 ಆನ್‌ಲೈನ್‌ ಮೂಲಕ ಅಪ್ಲೈ ಮಾಡಲು ಕಡೆಯ ದಿನಾಂಕವಾಗಿದೆ.

ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನ: ಜುಲೈ 4 ರೊಳಗೆ ನಿಗದಿತ ಶುಲ್ಕವನ್ನು ಪಾವತಿಸಬೇಕಿರುತ್ತದೆ.

ವಯೋಮಿತಿ ಸಡಿಲಿಕೆ ವಿವರ (Age Limit)

ವಿವಿಧ ಕೆಟಗರಿಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

ನೇರ ನೇಮಕಾತಿ ಅಭ್ಯರ್ಥಿಗಳಿಗೆ (Direct Recruitment):
ಸಾಮಾನ್ಯ ಅರ್ಹತೆ (GM): ಗರಿಷ್ಠ 33 ವರ್ಷಗಳು

SC/ ST/ ಪ್ರವರ್ಗ-1 ಮತ್ತು 2A, 2B, 3A, 3B: ಗರಿಷ್ಠ 35 ವರ್ಷಗಳು

ಬುಡಕಟ್ಟು (Tribal) ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷಗಳ ವರೆಗೆ ಅವಕಾಶ ನೀಡಲಾಗಿದೆ.

ಸೇವಾನಿರತ (In-Service) ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ:
ಸಾಮಾನ್ಯ ಅರ್ಹತೆ (GM): ಗರಿಷ್ಠ 38 ವರ್ಷಗಳು

SC/ ST/ ಪ್ರವರ್ಗ-1 ಮತ್ತು 2A, 2B, 3A, 3B: ಗರಿಷ್ಠ 40 ವರ್ಷ ವಯೋಮಿತಿ ಇದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular