HomeKarnatakaಇಂಡಿಗೋ, ಏರ್ ಇಂಡಿಯಾದಿಂದ 250 ವಿಮಾನಗಳ ಹಾರಾಟ ಸ್ಥಗಿತ: ಬೆಂಗಳೂರಿಗೆ ಬರುವ ಹಾಗೂ ವಾಪಸ್ ಆಗುವ...

ಇಂಡಿಗೋ, ಏರ್ ಇಂಡಿಯಾದಿಂದ 250 ವಿಮಾನಗಳ ಹಾರಾಟ ಸ್ಥಗಿತ: ಬೆಂಗಳೂರಿಗೆ ಬರುವ ಹಾಗೂ ವಾಪಸ್ ಆಗುವ ವಿಮಾನಗಳ ಹಾರಾಟವೂ ಕುಸಿತ

ನವದೆಹಲಿ: ಭಾರತದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಹಾಗೂ ಇಂಡಿಗೋ 250 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಇಂಧನ ಬಿಕ್ಕಟ್ಟು ಎದುರಾದ ಹಿನ್ನೆಲೆಯಲ್ಲಿ ಹಲವು ವಿಮಾನಗಳ ಹಾರಾಟದಲ್ಲಿ ಕಡಿತವಾಗಿದೆ.

ಮಧ್ಯಪ್ರಾಚ್ಯದ ತೈಲ ಬಿಕ್ಕಟ್ಟಿನಿಂದಾಗಿ ಇಂಧನ ವೆಚ್ಚ ದುಬಾರಿಯಗುತ್ತಿದೆ. ಇತ್ತ ಪ್ರಯಾಣಿಕರ ಸಂಖ್ಯೆ ಕೂಡ ಕುಸಿಯುತ್ತಿರುವುದರಿಂದ ಕಂಪನಿಗಳ ಮೇಲೆ ಹೊರೆ ಹೆಚ್ಚಾಗುತ್ತಿದೆ. ಇದರಿಂದ ಈಗಾಗಲೇ ವಿಮಾನಯಾನದ ಪ್ರಯಾಣದರ ಕೂಡ ಹೆಚ್ಚಳ ಆಗಿದೆ. ಮುಂದಿನ ಆಗಸ್ಟ್ ವರೆಗೂ ತೈಲ ಬಿಕ್ಕಟ್ಟು ಮುಂದುವರೆಯುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಏರ್ ಇಂಡಿಯಾ ತನ್ನ ದೇಶೀಯ ವಿಮಾನ ಸಂಚಾರ ವೇಳಾಪಟ್ಟಿಯಲ್ಲಿ ಶೇ.22 ರಷ್ಟು ಕಡಿತಗೊಳಿಸಿದೆ. ಈ ಮೂಲಕ ಪ್ರತಿದಿನ ಸುಮಾರು 110 ವಿಮಾನಗಳ ಹಾರಾಟ ಕಡಿತಗೊಳಿಸಿದಂತಾಗುತ್ತದೆ. ಈ ಹಿಂದೆ ಈ ಸಂಸ್ಥೆಯಿಂದ 500 ವಿಮಾನಗಳು ದೇಶದಲ್ಲಿ ಹಾರಾಟ ನಡೆಸುತ್ತಿದ್ದವು.

ಇಂಡಿಗೋ ಸಂಸ್ಥೆಯಿಂದ ದಿನಕ್ಕೆ ಸುಮಾರು 2,200 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇದೀಗ ಇಂಡಿಗೋ ಸಂಸ್ಥೆ ಶೇ.5-7 ರಷ್ಟು ಕಡಿತಗೊಳಿಸಲು ಮುಂದಾಗಿದೆ. ಇದರ ಪರಿಣಾಮವಾಗಿ ದಿನಕ್ಕೆ 110 ವಿಮಾನಗಳು ಕಡಿಮೆಯಾಗಿವೆ. ಈ ನಡುವೆ ಏರ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆ ಮತ್ತು ಆಲ್-ಎಕಾನಮಿ ಕ್ಲಾಸ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಡಿಮೆ ವೆಚ್ಚದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌, ಸುಮಾರು 340 ರಷ್ಟು ದೈನಂದಿನ ದೇಶೀಯ ವಿಮಾನ ಹಾರಾಟದಲ್ಲಿ ಶೇ.10 ರಷ್ಟು ಕಡಿತಗೊಳಿಸಿದೆ.

ಮುಂಬೈನಿಂದ ಜೈಪುರ, ಗೋವಾ, ಬೆಂಗಳೂರು, ಹೈದರಾಬಾದ್, ಚೆನ್ನೈ, ಅಹಮದಾಬಾದ್, ನಾಗ್ಪುರ, ಪಾಟ್ನಾ ಮತ್ತು ಭೋಪಾಲ್‌ಗಳಿಗೆ ವಿಮಾನ ಸಂಚಾರ ಕಡಿಮೆಯಾಗಲಿದೆ. ದೆಹಲಿಯಿಂದ ಗೋವಾ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಅಹಮದಾಬಾದ್, ಲಕ್ನೋ, ಕೊಚ್ಚಿ ಮತ್ತು ಕೋಲ್ಕತ್ತಾಗೆ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರುತ್ತದೆ. ದಕ್ಷಿಣದ ಪ್ರಮುಖ ಕೇಂದ್ರವಾಗಿರುವ ಬೆಂಗಳೂರಿಗೆ ಬೇರೆ ಬೇರೆ ಕಡೆಯಿಂದ ವಾಪಾಸ್ ತೆರಳುವ ವಿಮಾನಗಳ ಸಂಖ್ಯೆ ಕಡಿಮೆಯಾಗಲಿವೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ವಾಯುಯಾನಕ್ಕೆ ಬಳಸುವ ಟರ್ಬೈನ್ ಇಂಧನದ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಇಂಧನದ ಬೆಲೆಯಲ್ಲಿ ದೇಶೀಯ ವಿಮಾನಯಾನಕ್ಕೆ ಶೇ.25 ರಷ್ಟು ಮತ್ತು ಅಂತಾರಾಷ್ಟಿçÃಯ ವಿಮಾನಯಾನಕ್ಕೆ ಇನ್ನೂ ಹೆಚ್ಚಾಗಿದೆ. ಒಂದು ತಿಂಗಳ ಹಿಂದೆ ಜೆಟ್ ಇಂಧನದ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಈ ಹಿನ್ನೆಲೆ ವಿಮಾನಯಾನ ಸಂಸ್ಥೆಗಳು ಸರ್ಕಾರದ ತುರ್ತು ಹಸ್ತಕ್ಷೇಪ ಕೋರಿದ್ದವು. ವಿಮಾನಯಾನದ ಬಹುಪಾಲು ವೆಚ್ಚವನ್ನು ಜೆಟ್ ಇಂಧನದ ಬಹುಪಾಲು ಜೆಟ್ ಇಂಧನದ ಬೆಲೆ ಮೇಲೆ ನಿರ್ಧರಿತ ಆಗಿದೆ. ಸಹಜವಾಗಿಯೇ ವಿಮಾನ ಟಿಕೆಟ್ ದರ ಕೂಡ ಏರಿಕೆ ಆಗಿರೋದ್ರಿಂದ ಪ್ರಯಾಣಿಕರಿಂದ ಬೇಡಿಕೆಯೂ ಕಡಿಮೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ವಿಮಾನ ಸಂಸ್ಥೆ, ಇಂಧನ ಬೆಲೆ ಏರಿಕೆಯಿಂದಾಗಿ ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಏರ್ ಇಂಡಿಯಾ ಬೇಡಿಕೆ ಮತ್ತು ಕಾರ್ಯಾಚರಣೆ ಗಮನಿಸಿ ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ ಎಂದು ತಿಳಿಸಿದೆ.

ಇಂಡಿಗೋ ಕೂಡ, ಬೇಸಿಗೆಯ ಋತುವಿನಲ್ಲಿ ವಿಮಾನ ಪ್ರಯಾಣದ ಬೇಡಿಕೆ ಕಡಿಮೆಯಾಗಿರುವುದು ಶೇ.5-7 ರಷ್ಟು ವಿಮಾನಗಳ ಕಡಿತಗೊಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular