ಬೆಂಗಳೂರು: ಕೃಷಿ ಮತ್ತು ಪಶು ವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಯನ್ನು ಹಿರಿಯೂರು ಕೇಂದ್ರದಲ್ಲಿ ಜೂನ್ 1ರಂದು ನಡೆಯಲಿದ್ದು, ಅದರ ನಂತರವೇ ಸಿಇಟಿ – 2026ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಕೃಷಿ ವಿಶ್ವವಿದ್ಯಾಲಯದವರು ಹಿರಿಯೂರು ಕೇಂದ್ರದ ಅಭ್ಯರ್ಥಿಗಳಿಗೆ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಮರು ನಿಗದಿ ಮಾಡಿರುವ ಕಾರಣದಿಂದ ಈ ನಿರ್ಧಾರ ಮಾಡಲಾಗಿದೆ.
ಒಟ್ಟು 24,250 ಮಂದಿ ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗೆ ಹಾಜರಾದವರ ಅಂಕಗಳನ್ನು ವಿಶ್ವವಿದ್ಯಾಲಯದವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಗೆ ಕೊಟ್ಟ ನಂತರವೇ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಫಲಿತಾಂಶ ಪ್ರಕಟವಾಗುವವರೆಗೆ ಅಭ್ಯರ್ಥಿಗಳು/ಪೋಷಕರು ಕೌನ್ಸೆಲಿಂಗ್ ಪ್ರಕ್ರಿಯೆ ಬಗ್ಗೆ ತಿಳಿಯುವ ಪ್ರಯತ್ನ ಮಾಡಬೇಕು. ಆಪ್ಷನ್ಸ್ ದಾಖಲಿಸುವ ಬಗ್ಗೆಯೂ ಮಾಹಿತಿ ಪಡೆಯಬಹುದು. ಸಾಧ್ಯವಾದರೆ #KEA ಸರ್ಕಾರಿ ಎಂಜಿನಿಯರಿಂಗ್/ವೈದ್ಯಕೀಯ ಕಾಲೇಜುಗಳಲ್ಲಿ ಮೇ 30ರವರೆಗೆ ಆಯೋಜಿಸಿರುವ ಸಿಇಟಿ ಸೀಟು ಹಂಚಿಕೆ ಮಂಥನದಲ್ಲಿ ಭಾಗವಹಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

