HomeLatest Newsರಾಜಸ್ಥಾನ್ ವಿರುದ್ಧ ಚೇಸ್ ಮಾಡಬಹುದಿದ್ದ ಪಂದ್ಯ ಸೋಲಿಸಿ ಟೂರ್ನಿಯಿಂದ ಪಂಜಾಬ್ ಹೊರಕಳುಹಿಸಿದ ಸೂರ್ಯ; ಕಾರಣ ಆ...

ರಾಜಸ್ಥಾನ್ ವಿರುದ್ಧ ಚೇಸ್ ಮಾಡಬಹುದಿದ್ದ ಪಂದ್ಯ ಸೋಲಿಸಿ ಟೂರ್ನಿಯಿಂದ ಪಂಜಾಬ್ ಹೊರಕಳುಹಿಸಿದ ಸೂರ್ಯ; ಕಾರಣ ಆ ಆಟಗಾರನ ಮೇಲಿನ ಹೊಟ್ಟೆಕಿಚ್ಚು!

ನಿನ್ನೆ ( ಮೇ 24 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಲೀಗ್ ಹಂತದ 69ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಹೀನಾಯ ಸೋಲನ್ನು ಕಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 206 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ 16 ಅಂಕ ಹೊಂದಿದ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದು, ಮೇ 27ರಂದು ಸನ್ ರೈಸರ್ಸ್ ವಿರುದ್ಧ ಎಲಿಮಿನೇಟರ್‌ನಲ್ಲಿ ಸೆಣಸಾಡಲಿದೆ.

ಇನ್ನು ಪಂದ್ಯದಲ್ಲಿ ರಾಜಸ್ಥಾನ್ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ವೇಗವಾಗಿ 34 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತಾದರೂ ಐದನೇ ವಿಕೆಟ್‌ಗೆ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ವಿಲ್ ಜಾಕ್ಸ್ 38 ಎಸೆತಗಳಲ್ಲಿ 63 ರನ್‌ಗಳ ಜತೆಯಾಟಟವನ್ನಾಡಿ ತಂಡಕ್ಕೆ ಆತ್ಮವಿಶ್ವಾಸ ಮೂಡಿಸಿದರು. 18 ಎಸೆತಗಳಲ್ಲಿ 33 ರನ್ ಬಾರಿಸಿದ್ದ ಜಾಕ್ಸ್ ಔಟ್ ಆದರೆ, ನಂತರ ಕಣಕ್ಕಿಳಿದ ನಾಯಕ ಪಾಂಡ್ಯ ವೇಗವಾಗಿ 15 ಎಸೆತಗಳಲ್ಲಿ 34 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬೆನ್ನಲ್ಲೇ ಕಾರ್ಬಿನ್ ಬಾಷ್ 2 ರನ್‌ಗೆ ನಿರ್ಗಮಿಸಿದರೆ, ಗೆಲುವಿಗಾಗಿ ಆಡಬೇಕಿದ್ದ ಸೂರ್ಯಕುಮಾರ್ ಯಾದವ್ 42 ಎಸೆತಗಳಲ್ಲಿ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಪಂದ್ಯದಲ್ಲಿ ಹಾಗೂ ಕ್ರಿಕೆಟ್‌ನಲ್ಲಿ ಅನುಭವ ಹೊಂದಿದ್ದ ಸೂರ್ಯಕುಮಾರ್ ಯಾದವ್ ಡೆತ್ ಓವರ್‌ನಲ್ಲಿ ಅಬ್ಬರಿಸಿ ಪಂದ್ಯ ಗೆಲ್ಲಿಸದೇ ಎಸೆತಗಳನ್ನು ವ್ಯರ್ಥ ಮಾಡಿ ನಿರಾಸೆ ಮೂಡಿಸಿದರು. ಇಂತಹ ಪಂದ್ಯದಲ್ಲಿ 142 ಸ್ಟ್ರೈಕ್ ರೇಟ್‌ನೊಂದಿಗೆ ಇನ್ನಿಂಗ್ಸ್ ಮುಗಿಸಿದ ಸೂರ್ಯಕುಮಾರ್ ಯಾದವ್ ಪಂದ್ಯ ಗೆಲ್ಲಿಸಲಿದ್ದಾರೆ ಎಂಬ ನಿರೀಕ್ಷೆ ಹಲವರಲ್ಲಿ ಇತ್ತಾದರೂ ಆ ಕೆಲಸವನ್ನು ಮಾಡದೇ ಫ್ಲಾಪ್ ಆದರು.

ಹೀಗೆ ಹಲವು ಹೊತ್ತು ಕಣದಲ್ಲಿದ್ದು, ಅರ್ಧಶತಕ ಪೂರೈಸಿದರೂ ಸಹ ಎಲ್ಲಿಯೂ ಸಿಡಿದೆದ್ದು ತಂಡವನ್ನು ಗೆಲುವಿನ ಕಡೆ ಕೊಂಡೊಯ್ಯುವ ಕೆಲಸ ಮಾಡದ ಸೂರ್ಯಕುಮಾರ್ ಯಾದವ್ ವಿರುದ್ಧ ಗಂಭೀರ ಟ್ರೋಲ್‌ಗಳು ನಡೆದಿದ್ದು, ಇದಕ್ಕೆ ಭಾರತದ ಟಿ ಟ್ವೆಂಟಿ ನಾಯಕತ್ವವೂ ಸಹ ಸೇರಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿದ್ದರೆ ಆಗ ಪಂಜಾಬ್ ಕಿಂಗ್ಸ್ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಳ್ಳುತ್ತಿತ್ತು. ಹೀಗೆ ಪಂಜಾಬ್ ಏನಾದರೂ ಪ್ಲೇಆಫ್ ತಲುಪಿದ್ದರೆ ಆಗ ಕಳೆದ ವರ್ಷದ ಹಾಗೆ ಶ್ರೇಯಸ್ ಐಯ್ಯರ್‌ಗೆ ಒಳ್ಳೆಯ ಹೆಸರು ಬರುತ್ತಿತ್ತು.

ಈಗಾಗಲೇ ಕಳಪೆಯಾಗಿರುವ ಸೂರ್ಯಕುಮಾರ್ ಯಾದವ್‌ರನ್ನು ಭಾರತ ನಾಯಕತ್ವದಿಂದ ಕೆಳಗಿಳಿಸಿ ಐಯ್ಯರ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ನೀಡಿ ಎಂದು ಕೂಗು ಕೇಳಿಬರುತ್ತಿದ್ದು, ಪಂಜಾಬ್ ಪ್ಲೇಆಫ್ ತಲುಪಿದರೆ ಈ ಹೆಸರು ಇನ್ನೂ ಹೆಚ್ಚಾಗಲಿದೆ ಎನ್ನುವ ಭಯದಿಂದಲೇ ಬೇಕಂತಲೇ ಸೂರ್ಯಕುಮಾರ್ ಯಾದವ್ ಚೇಸ್ ಮಾಡಲು ಅವಕಾಶವಿದ್ದರೂ ಪ್ರಯತ್ನಿಸಲಿಲ್ಲ ಎಂದು ಹಲವು ನೆಟ್ಟಿಗರು ಕಾಮೆಂಟ್ ಮಾಡಿ ಅನುಮಾನ ಹೊರಹಾಕಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular