HomeKarnatakaಜೂನ್ ನಿಂದ ಮಂಗಳೂರು- ಬೆಂಗಳೂರು ವಂದೇ ಭಾರತ್ ಎಕ್ಪ್ರೆಸ್ ರೈಲು ಸಂಚಾರ ಆರಂಭ: ಶಿವಮೊಗ್ಗ –ಮಂಗಳೂರು...

ಜೂನ್ ನಿಂದ ಮಂಗಳೂರು- ಬೆಂಗಳೂರು ವಂದೇ ಭಾರತ್ ಎಕ್ಪ್ರೆಸ್ ರೈಲು ಸಂಚಾರ ಆರಂಭ: ಶಿವಮೊಗ್ಗ –ಮಂಗಳೂರು ರೈಲು ಮಾರ್ಗಕ್ಕೆ ಟೆಂಡರ್

ಮಂಗಳೂರು: ಮಂಗಳೂರು -ಬೆಂಗಳೂರು ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಜೂನ್ ನಲ್ಲಿ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರು ಸೇರಿದಂತೆ ದೇಶದ ವಿವಿಧೆಡೆ ಹೊಸ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.

ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ಸಚಿವ ಸೋಮಣ್ಣ, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಅವರ ಬೇಡಿಕೆಯನ್ನು ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸಕಲೇಶಪುರ- ಕುಕ್ಕೆ ಸುಬ್ರಮಣ್ಯ ಮಾರ್ಗದ ವಿದ್ಯುದ್ದೀಕರಣ ಮುಕ್ತಾಯಗೊಂಡಿದ್ದು, ಬೆಂಗಳೂರು- ಮಂಗಳೂರು ನಡುವೆ ಪೂರ್ಣವಾಗಿ ವಿದ್ಯುದ್ದೀಕರಣವಾಗಿದೆ. ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶ ದೊರೆತಿದೆ. ಶಿವಮೊಗ್ಗ -ಶೃಂಗೇರಿ -ಮಂಗಳೂರು ಹೊಸ ರೈಲು ಮಾರ್ಗ ರಚನೆ ಬಗ್ಗೆ ಸಮೀಕ್ಷೆ ಪೂರ್ಣವಾಗಿದ್ದು, ಟೆಂಡರ್ ಬಾಕಿ ಇದೆ. ಪ್ರಸ್ತಾವಿತ ಶಿವಮೊಗ್ಗ -ಮಂಗಳೂರು ರೈಲು ಮಾರ್ಗ 332 ಕಿಲೋಮೀಟರ್ ಇರಲಿದ್ದು, 3300 ಕೋಟಿ ರೂ. ಯೋಜನಾ ವೆಚ್ಚ ಅಂದಾಜಿಸಲಾಗಿದೆ. ಫೈನಲ್ ಲೋಕೇಷನ್ ಸರ್ವೇ ನಡೆದು ಅನುಮೋದನೆಗೊಂಡಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ ರಚನೆ ಕಾರ್ಯ ಪ್ರಗತಿಯಲ್ಲಿದೆ. ಕೊಂಕಣ ನೈರುತ್ಯ ಮತ್ತು ದಕ್ಷಿಣ ರೈಲ್ವೆ ವಲಯಗಳ ವ್ಯಾಪ್ತಿಗೆ ಬರುವ ಮಂಗಳೂರನ್ನು ಒಂದೇ ವಿಭಾಗದಡಿ ತರುವ ಪ್ರಯತ್ನಗಳು ನಡೆದಿದ್ದು, ಶೀಘ್ರವೇ ಬೇಡಿಕೆ ಈಡೇರಲಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular