ತುಮಕೂರು: ಕೆಎಸ್ಆರ್ ಸಿ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಅವರು ಕೆಎಸ್ಆರ್ಟಿಸಿ ಪ್ರಯಾಣದರ ಏರಿಕೆಯ ಸುಳಿವು ನೀಡಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದೆ. ಸಹಜವಾಗಿಯೇ ಬಸ್ ಪ್ರಯಾಣ ದರ ಏರಿಕೆಯಾಗುತ್ತದೆ. ನಾವೇನು ನೀರು ಹಾಕಿ ಬಸ್ ಓಡಿಸಲು ಆಗುತ್ತಾ ಎಂದು ಅವರು ಹೇಳಿದ್ದಾರೆ.
ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳು ಡೀಸೆಲ್ ಬೆಲೆ ಹೆಚ್ಚಳದಿಂದ ಸಂಕಷ್ಟಕ್ಕೆ ಸಿಲುಕಿವೆ. ಕಳೆದ ಹತ್ತು ದಿನದಲ್ಲಿ 25 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆಯಾಗಿದೆ. ನಿಗಮಗಳ ಆರ್ಥಿಕ ಪರಿಸ್ಥಿತಿ ಮೊದಲೇ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಸಾರಿಗೆ ನೌಕರರ ವೇತನ, ಭವಿಷ್ಯ ನಿಧಿ ಪಾವತಿ ಬಾಕಿ, ಡೀಸೆಲ್ ಪೂರೈಕೆದಾರರಿಗೆ ಬಾಕಿ ಸೇರಿದಂತೆ ಕಳೆದ ಮಾರ್ಚ್ 31ರ ಅಂತ್ಯಕ್ಕೆ 7130 ಕೋಟಿ ರೂ. ಹೊಣೆಗಾರಿಕೆ ಹೊಂದಿವೆ.

