HomeIPL 2026IPL 2026: 6 ಸೋಲಿನ ಬಳಿಕ ಗೆದ್ದು ಪ್ಲೇಆಫ್ ಕನಸು ಕಾಣುತ್ತಿರುವ ಪಂಜಾಬ್; ಮಧ್ಯಾಹ್ನ ಆ...

IPL 2026: 6 ಸೋಲಿನ ಬಳಿಕ ಗೆದ್ದು ಪ್ಲೇಆಫ್ ಕನಸು ಕಾಣುತ್ತಿರುವ ಪಂಜಾಬ್; ಮಧ್ಯಾಹ್ನ ಆ ತಂಡ ಸೋತರೆ ಪಂಜಾಬ್ ಕಥೆ ಗೋವಿಂದಾ ಗೋವಿಂದ!

ನಿನ್ನೆ ( ಮೇ 23 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 68ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಸತತ ಆರು ಸೋಲುಗಳ ಬಳಿಕ ಕೊನೆಗೂ ಗೆಲುವಿನ ನಗೆ ಬೀರಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ ಜೋಶ್ ಇಂಗ್ಲಿಸ್ ಅರ್ಧಶತಕ ಹಾಗೂ ಆಯುಷ್ ಬದೋನಿ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್‌ಗೆ 197 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪ್ರಭ್‌ಸಿಮ್ರಾನ್ ಅರ್ಧಶತಕ ಹಾಗೂ ಶ್ರೇಯಸ್ ಐಯ್ಯರ್ ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಬಾರಿಸಿತು.

ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿನ ಎನ್ನ ಎಲ್ಲ ಲೀಗ್ ಹಂತದ ಪಂದ್ಯಗಳನ್ನೂ ಆಡಿ ಮುಗಿಸಿದ್ದು, 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ 15 ಅಂಕ ಹೊಂದಿರುವ ಪಂಜಾಬ್, 14 ಅಂಕ ಹೊಂದಿ ಇನ್ನೂ ಒಂದು ಪಂದ್ಯ ಆಡಬೇಕಿರುವ ರಾಜಸ್ಥಾನ್ ಹಾಗೂ 13 ಅಂಕಗಳೊಂದಿಗೆ ಇನ್ನೂ ಒಂದು ಪಂದ್ಯ ಆಡಬೇಕಿರುವ ಕೊಲ್ಕತ್ತಾ ಪ್ಲೇಆಫ್ ಹಂತಕ್ಕೇರುವ ಯೋಜನೆಯಲ್ಲಿವೆ.

ಬೆಂಗಳೂರು, ಗುಜರಾತ್ ಹಾಗೂ ಹೈದರಾಬಾದ್ ಈಗಾಗಲೇ ಪ್ಲೇಆಫ್ ತಲುಪಿರುವ ಕಾರಣ ಇನ್ನೊಂದು ಸ್ಥಾನ ಮಾತ್ರ ಬಾಕಿ ಇದ್ದು, ಪಂಜಾಬ್ ಕಿಂಗ್ಸ್ ಎಲ್ಲ ಭಾರವನ್ನೂ ಸದ್ಯ ಮುಂಬೈ ಇಂಡಿಯನ್ಸ್ ಮೇಲೆ ಹಾಕಿದೆ.

ಹೌದು, ಇಂದು ( ಮೇ 24 ) ಮಧ್ಯಾಹ್ನ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ ರಾಜಸ್ಥಾನ್ ರಾಯಲ್ಸ್ 14 ಅಂಕಗಳೊಂದಿಗೆ ಎಲಿಮಿನೇಟ್ ಆಗಲಿದೆ. ಹಾಗೂ ಸಂಜೆಯ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕೆಕೆಆರ್ ಸೋತರೆ ಪಂಜಾಬ್ ನೇರವಾಗಿ ಪ್ಲೇಆಫ್ ತಲುಪಲಿದೆ.

ಒಂದು ವೇಳೆ ಮಧ್ಯಾಹ್ನದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆದ್ದರೆ ತಂಡದ ಅಂಕ 16 ಆಗಲಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿ ಪ್ಲೇಆಫ್ ತಲುಪಲಿದೆ. ಹೀಗಾಗಿ ಪ್ಲೇಆಫ್ ಕನಸು ಕಾಣುತ್ತಿರುವ ಪಂಜಾಬ್ ಮುಂಬೈ ಮೇಲೆ ಭಾರ ಹಾಕಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular