19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹಂತದ 67ನೇ ಪಂದ್ಯ ಇಂದು ( ಮೇ 22 ) ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆರಿಸಿಕೊಂಡು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 256 ರನ್ಗಳ ಗುರಿಯನ್ನು ನೀಡಿದೆ.
ಸನ್ ರೈಸರ್ಸ್ ಹೈದರಾಬಾದ್ ಇಷ್ಟು ದೊಡ್ಡ ಮೊತ್ತದ ರನ್ಗಳ ಗುರಿಯನ್ನು ನೀಡಿದರೂ ಸಹ ಆರ್ಸಿಬಿ 90 ರನ್ ಕಡಿಮೆ ಎಂದರೆ 166 ರನ್ ಬಾರಿಸಿದರೂ ಸಹ ಗೆದ್ದೆ ಹಾಗೆಯೇ.
ಏಕೆಂದರೆ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್ಸಿಬಿ ಟಾಪ್ ಎರಡರಲ್ಲಿ ಉಳಿದುಕೊಳ್ಳಲು 166 ರನ್ ಬಾರಿಸಿದರೆ ಸಾಕು. ಒಂದುವೇಳೆ ಆರ್ಸಿಬಿ 166 ರನ್ ಬಾರಿಸುವಲ್ಲಿ ವಿಫಲವಾದರೆ ಆಗ ನೆಟ್ ರನ್ ರೇಟ್ ಕೊರತೆಯಿಂದಾಗಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಹೀಗಾಗಿ ಆರ್ಸಿಬಿ 166 ರನ್ ಬಾರಿಸಿದರೆ ಒಂದನೇ ಕ್ವಾಲಿಫಯರ್ ಆಡಲು ಅರ್ಹತೆ ಪಡೆದುಕೊಳ್ಳಲಿದೆ.

