HomeIndiaBIG NEWS: 2034 ರವರೆಗೆ ದೇಶದಲ್ಲಿ ಬಿಜೆಪಿ ಆಡಳಿತ: ನಿಖರ ಸಮೀಕ್ಷೆಗೆ ಹೆಸರಾದ ‘ಆಕ್ಸಿಸ್ ಮೈ...

BIG NEWS: 2034 ರವರೆಗೆ ದೇಶದಲ್ಲಿ ಬಿಜೆಪಿ ಆಡಳಿತ: ನಿಖರ ಸಮೀಕ್ಷೆಗೆ ಹೆಸರಾದ ‘ಆಕ್ಸಿಸ್ ಮೈ ಇಂಡಿಯಾ’ ಮುಖ್ಯಸ್ಥ ಪ್ರದೀಪ್ ಗುಪ್ತಾ

ನವದೆಹಲಿ: ದೇಶದಲ್ಲಿ 2014 ರಿಂದ ಆರಂಭವಾದ ಬಿಜೆಪಿ ಪ್ರಾಬಲ್ಯ ಸುಮಾರು 20 ವರ್ಷ ಕಾಲ ಮುಂದುವರೆಯಲಿದೆ. ಬಿಜೆಪಿಯ ರಾಜಕೀಯ ಪ್ರಾವಲ್ಯ ಸದ್ಯಕ್ಕೆ ಕುಸಿಯುವುದಿಲ್ಲ. 2014 ರಿಂದ ಆರಂಭವಾಗಿ ಕನಿಷ್ಠ 20 ವರ್ಷಗಳವರೆಗೆ ಅಂದರೆ. 2034 ರವರೆಗೆ ಈ ಪ್ರಾಬಲ್ಯ ಮುಂದುವರೆಯಲಿದೆ ಎಂದು ನಿಖರ ಚುನಾವಣೋತ್ತರ ಸಮೀಕ್ಷೆಗಳಿಗೆ ಹೆಸರಾದ ಆಕ್ಸಿಸ್ ಮೈ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಗುಪ್ತಾ ಹೇಳಿದ್ದಾರೆ.

ಸ್ವಾತಂತ್ರ್ಯ ನಂತರ ದೇಶದಲ್ಲಿ ಕಾಂಗ್ರೆಸ್ ಹೇಗೆ ದಶಕಗಳ ಕಾಲ ಏಕಸ್ವಾಮ್ಯದ ಆಡಳಿತ ನಡೆಸಿತ್ತೋ ಅದೇ ಸ್ಥಿತಿಯಲ್ಲಿ ಸದ್ಯ ಬಿಜೆಪಿ ಇದೆ. ಭಾರತದ ರಾಜಕೀಯ ಕ್ಷೇತ್ರ ಮತ್ತೊಂದು ಏಕಪಕ್ಷ ಪ್ರಾಬಲ್ಯದ ಚಕ್ರಕ್ಕೆ ಸಾಕ್ಷಿ ಆಗುತ್ತಿದೆ ಎಂದು ಪ್ರದೀಪ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಕಾಂಗ್ರೆಸ್ 1977 ರವರೆಗೆ ನಿರಂತರವಾಗಿ ಆಡಳಿತ ನಡೆಸಿತು. ನಂತರ ಆ ಪಕ್ಷ ಕಠಿಣ ಸವಾಲುಗಳನ್ನು ಎದುರಿಸಲು ಆರಂಭಿಸಿತು. ಆ ದಿನಗಳಲ್ಲಿ ನಾವು ರಾಜಕೀಯ ಪೀಳಿಗೆಯೊಂದರ ಅವಧಿ ಸುಮಾರು 20 ವರ್ಷ ಎಂದು ಮಾತನಾಡಿಕೊಳ್ಳುತ್ತಿದ್ದೆವು. ಆ 20 ವರ್ಷಗಳ ರಾಜಕೀಯ ಚಕ್ರ ಈಗಲೂ ಅನ್ವಯಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2014ರಲ್ಲಿ ಆರಂಭವಾದ ಬಿಜೆಪಿ ಪ್ರಾಬಲ್ಯ 2034 ರ ವರೆಗೂ ಇರಲಿದೆ. ಬಿಜೆಪಿ ಸರ್ಕಾರದ ಸಾಧನೆ ದುರ್ಬಲ ಆಗುವವರೆಗೂ ಅದಕ್ಕೆ ಅಧಿಕಾರ ಸಿಗಲಿದೆ. 70ರ ದಶಕದಲ್ಲಿ ಕಾಂಗ್ರೆಸ್ ಗೆ ಇದ್ದ ವರ್ಚಸ್ಸು ಈಗ ಬಿಜೆಪಿಗೆ ಇದೆ. ಆಗಿನ ಪೊಲಿಟಿಕಲ್ ಜನರೇಶನ್ ಎಂಬ ಮಾತು ಈಗಲೂ ಅನ್ವಯವಾಗಲಿದೆ. ಬಿಜೆಪಿಗೂ ರಾಜಕೀಯ ಮಿತಿ ಇದ್ದು 2034 ರವರೆಗೆ ಯಾವುದೇ ತೊಂದರೆ ಇಲ್ಲವೆಂದು ದೇಶದ ರಾಜಕೀಯದ ಕುರಿತಾಗಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular