HomeLatest NewsOMG : ಮೇಕಪ್‌ ಕಳಚಿದ ವಧು, ಬೆಚ್ಚಿಬಿದ್ದ ವರ : ಮದುವೆಯಾದ ಮೊದಲ ರಾತ್ರಿಯೇ ವಿಚ್ಛೇದನಕ್ಕೆ...

OMG : ಮೇಕಪ್‌ ಕಳಚಿದ ವಧು, ಬೆಚ್ಚಿಬಿದ್ದ ವರ : ಮದುವೆಯಾದ ಮೊದಲ ರಾತ್ರಿಯೇ ವಿಚ್ಛೇದನಕ್ಕೆ ಅರ್ಜಿ !

ಇಂದಿನ ಸಮಾಜದಲ್ಲಿ ವಿಚ್ಛೇದನಕ್ಕೆ ನಾನಾ ಕಾರಣಗಳನ್ನು ನಾವು ಕೇಳುತ್ತಿರುತ್ತೇವೆ. ಆದರೆ, ಟರ್ಕಿಯಲ್ಲಿ ನಡೆದಿರುವ ಒಂದು ವಿಚಿತ್ರ ಮತ್ತು ಆಶ್ಚರ್ಯಕರ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ಟರ್ಕಿಯ ಯುವಕ-ಯುವತಿಯೊಬ್ಬರಿಗೆ ಹಿರಿಯರು ಅದ್ಧೂರಿಯಾಗಿ ವಿವಾಹ ಮಾಡಿಸಿದ್ದರು. ನಿಶ್ಚಿತಾರ್ಥ ಮತ್ತು ಮದುವೆಯ ಸಮಾರಂಭಗಳಲ್ಲಿ ವಧು ಅತಿಯಾದ ಮೇಕಪ್ ಮಾಡಿಕೊಂಡು ಬಹಳ ಸುಂದರವಾಗಿ ಕಾಣುತ್ತಿದ್ದಳು. ಆದರೆ, ಮದುವೆಯ ಎಲ್ಲಾ ಕಾರ್ಯಕ್ರಮಗಳು ಮುಗಿದು, ರಾತ್ರಿ ಕೋಣೆಗೆ ಹೋದ ಬಳಿಕ ವಧು ತನ್ನ ಮುಖದಲ್ಲಿದ್ದ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾಳೆ. ಆ ನಂತರ ಕೋಣೆಗೆ ಬಂದ ವರ, ಮೇಕಪ್ ಇಲ್ಲದ ಆಕೆಯ ಮುಖವನ್ನು ನೋಡಿ ಶಾಕ್ ಆಗಿದ್ದಾನೆ. ತಾನು ಮದುವೆಯಾದ ಹುಡುಗಿ ಈಕೆಯಲ್ಲವೇನೋ ಎಂಬಷ್ಟು ಆಕೆಯ ರೂಪ ಬದಲಾಗಿದ್ದು, ಇದನ್ನು ಕಂಡು ವರ ತೀವ್ರ ದಿಗ್ಭ್ರಮೆಗೊಳಗಾಗಿದ್ದಾನೆ.

ಮೋಸ ಹೋದೆ ಎಂದು ಕೋರ್ಟ್‌ಗೆ: ಮೇಕಪ್ ಇಲ್ಲದ ತನ್ನ ಪತ್ನಿಯ ಮುಖವನ್ನು ಕಂಡ ವರ, ತಾನು ತೀವ್ರವಾಗಿ ಮೋಸ ಹೋಗಿದ್ದೇನೆ (Deceived) ಎಂದು ಭಾವಿಸಿದ್ದಾನೆ. ಮದುವೆಗೆ ಮುನ್ನ ಆಕೆ ತನ್ನ ನಿಜವಾದ ರೂಪವನ್ನು ಮರೆಮಾಚಿ, ಕೇವಲ ಕಾಸ್ಮೆಟಿಕ್ಸ್ ಮತ್ತು ಮೇಕಪ್ ಟ್ರಿಕ್ಸ್ ಬಳಸಿ ತನ್ನನ್ನು ನಂಬಿಸಿದ್ದಾಳೆ ಎಂದು ಆರೋಪಿಸಿದ್ದಾನೆ. ಆಕೆಯ ಅಸಲಿ ರೂಪ ಮೊದಲೇ ತಿಳಿದಿದ್ದರೆ ತಾನು ಈ ಮದುವೆಯೇ ಮಾಡಿಕೊಳ್ಳುತ್ತಿರಲಿಲ್ಲ ಎಂದು ಹೇಳುತ್ತಾ, ಮದುವೆಯಾದ ಮೊದಲ ರಾತ್ರಿಯೇ ವಿಚ್ಛೇದನ ಬೇಕೆಂದು ಪಟ್ಟು ಹಿಡಿದಿದ್ದಾನೆ. ಇದಕ್ಕಾಗಿ ಕಾನೂನುಬದ್ಧವಾಗಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಚಿತ್ರ ಕಥನ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರ ಬಗ್ಗೆ ನೆಟ್ಟಿಗರು ಭಿನ್ನ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಬಾಹ್ಯ ಸೌಂದರ್ಯ ಮತ್ತು ಮೇಕಪ್ ನೋಡಿ ಮದುವೆಯಾಗಿದ್ದರಿಂದಲೇ ಇಂತಹ ಪರಿಸ್ಥಿತಿ ಉಂಟಾಗಿದೆ ಎಂದು ಕೆಲವರು ಹೇಳುತ್ತಿದ್ದರೆ.. ಮುಖದ ಮೇಲಿರುವ ಬಣ್ಣಗಳನ್ನು ನೋಡಿ ಜೀವನ ಸಂಗಾತಿಯನ್ನು ದೂರವಿಡುವುದು ಮೂರ್ಖತನ ಎಂದು ಮತ್ತೆ ಕೆಲವರು ಟೀಕಿಸುತ್ತಿದ್ದಾರೆ. ಏನೇ ಆಗಲಿ, ಈ ಮೇಕಪ್ ವಿಚ್ಛೇದನದ ಪ್ರಕರಣ ಸದ್ಯ ನೆಟ್ಟಿಗರಲ್ಲಿ ಹಾಟ್ ಟಾಪಿಕ್ ಆಗಿದೆ.

View this post on Instagram

A post shared by Ms Telugu Facts (@mstelugufacts)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular