HomeLatest News100 ಕೋಟಿ ಬಜೆಟ್ ಸುರಿದು ಮಾಡಿದ 'ಕೆಡಿ' ಚಿತ್ರ ಗಳಿಸಿದ್ದೆಷ್ಟು? ಬಿಲ್ಡಪ್‌ ಕೊಟ್ಟಹಾಗೆ ಅಷ್ಟು ಕೋಟಿ,...

100 ಕೋಟಿ ಬಜೆಟ್ ಸುರಿದು ಮಾಡಿದ ‘ಕೆಡಿ’ ಚಿತ್ರ ಗಳಿಸಿದ್ದೆಷ್ಟು? ಬಿಲ್ಡಪ್‌ ಕೊಟ್ಟಹಾಗೆ ಅಷ್ಟು ಕೋಟಿ, ಇಷ್ಟು ಕೋಟಿ ಆಗಿಲ್ಲ ಬಿಡಿ ಎಂದು ಬೇರೇನೇ ಕಥೆ ಹೇಳ್ತಿದೆ ಈ ರಿಪೋರ್ಟ್!

ಕೆಡಿ ದಿ ಡೆವಿಲ್ ಕನ್ನಡ ಚಿತ್ರರಂಗದ ಪಾಲಿನ ಬಹು ನಿರೀಕ್ಷಿತ ಚಿತ್ರ. ಕರಿಯ, ಎಕ್ಸ್‌ಕ್ಯೂಸ್‌ಮಿ, ಜೋಗಿ ರೀತಿಯ ಎವರ್‌ಗ್ರೀನ್ ಚಿತ್ರಗಳನ್ನು ಕಟ್ಟಿಕೊಟ್ಟ ಪ್ರೇಮ್ ಬಳಿಕ ಅದೇ ಮಟ್ಟದ ಯಶಸ್ಸು ಸಾಧಿಸಲಾಗದೇ ಹಲವು ಪ್ರಯತ್ನದಲ್ಲಿ ಸೋತು ಕೆಡಿ ಮೂಲಕ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬ ನಂಬಿಕೆ ಹುಟ್ಟಿಸಿದ್ದ ಚಿತ್ರ.

ಚಿತ್ರದ ಪಾತ್ರಗಳ ಲುಕ್, ಹಳೆ ಬೆಂಗಳೂರಿನ ಕ್ಲೀನ್ ಸೆಟ್ ಎಲ್ಲವೂ ಓಹೋ ವಿಂಟೇಜ್ ಪ್ರೇಮ್ ಈಸ್ ಬ್ಯಾಕ್ ಎನ್ನಬಹುದಾ ಎನ್ನುವ ಹಾಗೆ ಮಾಡಿದ್ದ ಕೆಡಿ ದಿ ಡೆವಿಲ್ ಏಪ್ರಿಲ್ 30ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಅಬ್ಬರದ ನಡುವೆಯೇ ತೆರೆಗೆ ಅಪ್ಪಳಿಸಿತು.

ಇದೇ ಮೊದಲ ಬಾರಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳಿದ್ದ ಜೋಗಿ ಪ್ರೇಮ್ ಅಣ್ಣ – ತಮ್ಮಂದಿರ ನಡುವಿನ ಕಥೆ, ವ್ಯಥೆ, ಟ್ವಿಸ್ಟ್‌ಗಳನ್ನು ತೆರೆ ಮೇಲೆ ತಂದಿದ್ದರು. ಧ್ರುವ ಅಣ್ಣನಾಗಿ ರಮೇಶ್ ಅರವಿಂದ್ ನಟಿಸಿದ್ದರೆ, ಡಾನ್ ಆಗಿ ಸಂಜಯ್ ದತ್, ಆತನ ಪತ್ನಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ, ರಮೇಶ್ ಸ್ನೇಹಿತನಾಗಿ ರವಿಚಂದ್ರನ್ ಹಾಗೂ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರ ಬಿಡುಗಡೆಯಾದ ಮೊದಲ ದಿನದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಚಿಂದಿ, ಹಿಂದೆಂದೂ ಕಂಡಿರದ ಟ್ವಿಸ್ಟ್ ಎಂಬೆಲ್ಲ ಬರಹಗಳುಳ್ಳ ಪೋಸ್ಟ್‌ಗಳು ಹರಿದಾಡಿದವು. ಮೊದಲ ನಾಲ್ಕು ದಿನ ಹಲವೆಡೆ ಹೌಸ್‌ಫುಲ್ ಬೋರ್ಡ್ ಸಹ ಕಂಡುಬಂತು. ಆದರೆ ನಂತರದ ದಿನಗಳಲ್ಲಿ ಈ ಅಬ್ಬರ ಕಾಣಸಿಗಲಿಲ್ಲ. ಚಿತ್ರತಂಡ ಹಲವು ಊರುಗಳಲ್ಲಿ ವಿಜಯಯಾತ್ರೆಯನ್ನು ಕೈಗೊಂಡಿತಾದರೂ ಎರಡನೇ ವಾರ ಹೌಸ್‌ಫುಲ್ ರಿಪೋರ್ಟ್ ಕುರಿತ ಸುದ್ದಿ ಕೇಳಿಬರಲಿಲ್ಲ.

ಚಿತ್ರಕ್ಕೆ ಮೊದಲ ಮೂರು ದಿನ ಬಂದಿದ್ದ ಅಬ್ಬರದ ಪ್ರತಿಕ್ರಿಯೆ ಸೋಮವಾರದ ಬಳಿಕ ಮಿಶ್ರ ಪ್ರತಿಕ್ರಿಯೆಯಾಗಿ ತಿರುವು ಪಡೆದುಕೊಂಡಿತ್ತು. ಮೊದಲ ವಾರದಲ್ಲಿ ಸಾಮಾಜಿಕ ಜಾಲತಾಣ ಕೊಟ್ಟ ಬಿಲ್ಡಪ್‌ನಂತೆ ಚಿತ್ರ ಇಲ್ಲ ಎಂಬ ವಿಮರ್ಶೆಗಳೂ ಸಹ ಕೇಳಿಬಂದವು. ಒಟ್ಟಿನಲ್ಲಿ ಕೆಡಿ ಕೆಲವರಿಗೆ ಇಷ್ಟವಾದರೆ, ಇನ್ನೂ ಕೆಲವರಿಗೆ ಕಷ್ಟವಾಯಿತು.

ಇನ್ನು ಜನರ ವಿಮರ್ಶೆ ಏನೇ ಇರಲಿ ಈಗಿನ ಕಾಲದಲ್ಲಿ ಚಿತ್ರ ಗೆಲ್ತಾ ಇಲ್ವಾ ಎಂಬುದನ್ನು ಅಳೆಯುವುದು ದುಡ್ಡಿನಿಂದ. ಚಿತ್ರದ ನಿರ್ಮಾಪಕರು ಚಿತ್ರಕ್ಕೆ ಬಜೆಟ್ ಎಷ್ಟೆಂಬುದನ್ನು ಘೋಷಣೆ ಮಾಡದೇ ಇದ್ದರೂ ಮೂರು ವರ್ಷಗಳ ಹಿಂದೆ ಚಿತ್ರದ ಘೋಷಣೆ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಇಲ್ಲಿಯವರೆಗೂ ಚಿತ್ರರಂಗದ ಅತಿದೊಡ್ಡ ಬಜೆಟ್‌ನ ಚಿತ್ರವಿದು ಎಂದು ಹೇಳುವ ಮೂಲಕ ನೂರು ಕೋಟಿಯ ಕೆಜಿಎಫ್‌ಗಿಂತ ಹೆಚ್ಚಿನ ಬಜೆಟ್‌ನ ಚಿತ್ರ ಎಂದು ಪರೋಕ್ಷವಾಗಿ ತಿಳಿಸಿದ್ದರು.

ಹಾಗಾಗಿಯೇ ಈಗ ವೆಬ್‌ಸೈಟ್‌ಗಳಲ್ಲಿ ಚಿತ್ರದ ಬಜೆಟ್ ನೂರಕ್ಕೂ ಹೆಚ್ಚು ಕೋಟಿ ಎಂದು ನಮೂದಾಗಿದೆ. ಬಜೆಟ್ ಘೋಷಣೆ ಮಾಡದ ನಿರ್ಮಾಪಕರು ಚಿತ್ರದ ಗಳಿಕೆ ಬಗ್ಗೆಯೂ ಸಹ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. ಅಭಿಮಾನಿಗಳು ಎಐ ಬಳಸಿ ನಾಲ್ಕು ದಿನಕ್ಕೆ ಹತ್ತಾರು ಕೋಟಿ, ಇನ್ನೇನೂ ನೂರು ಕೋಟಿ ಗಳಿಸುತ್ತೆ ಎಂದು ಪೋಸ್ಟರ್ ಹಂಚಿಕೊಂಡು ಸಂಭ್ರಮಿಸಿದರಾದರೂ ಜನಪ್ರಿಯ ಹಾಗೂ ನಂಬುಗೆಯ ಬಾಕ್ಸ್ ಆಫೀಸ್ ವೆಬ್‌ಸೈಟ್‌ಗಳು ಬೇರೆಯದ್ದೇ ಲೆಕ್ಕವನ್ನು ಬಿಚ್ಚಿಟ್ಟಿವೆ.

ಸಿನಿಮಾ ಪ್ರೇಮಿಗಳ ನಂಬುಗೆಯ ವೆಬ್‌ಸೈಟ್ ಸ್ಯಾಕ್‌ನಿಲ್ಕ್ ಪ್ರಕಾರ ಕೆಡಿ ನಿನ್ನೆ ( ಮೇ 18 ) ಸೋಮವಾರದವರೆಗೆ ದೇಶದಾದ್ಯಂತ ಒಟ್ಟು 23 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಮಾಡಿದೆ ಎಂದು ತಿಳಿಸಿದೆ. ಇದು ಸ್ಯಾಕ್‌ನಿಲ್ಕ್ ಲೆಕ್ಕಾಚಾರವಾದರೆ ಜನಪ್ರಿಯ, ಬೃಹತ್ ವೆಬ್‌ಸೈಟ್ ಐಎಂಡಿಬಿ ಪ್ರಕಾರ ಚಿತ್ರ ಇಲ್ಲಿಯವರೆಗೆ 32 ಕೋಟಿ ಗಳಿಕೆ ಮಾಡಿದೆ.

ಈ ಎರಡೂ ರಿಪೋರ್ಟ್‌ಗಳೂ ಸಹ ನೂರು ಕೋಟಿ ಬಜೆಟ್‌ನ ಕೆಡಿ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಎಂದು ಹೇಳುತ್ತಿವೆ. ಈ ರಿಪೋರ್ಟ್‌ಗಳ ಪ್ರಕಾರ ಕೆಡಿ ಗಳಿಕೆ ಇಷ್ಟೇನಾ ಅಥವಾ ಇನ್ನೂ ಹೆಚ್ಚಾ ಎಂಬುದನ್ನು ನಿರ್ಮಾಪಕರು ಅಧಿಕೃತವಾಗಿ ಘೋಷಿಸಿ ಗೊಂದಲಕ್ಕೆ ತೆರೆ ಎಳೆದು ಅಭಿಮಾನಿಗಳಿಗೆ ಸರಿಯಾದ ಮಾಹಿತಿ ನೀಡುವ ಕೆಲಸ ಮಾಡಲಿದ್ದಾರಾ ನೋಡಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular