HomeLatest NewsSHOCKING : 3 ಕೋಟಿಯ ಆಸ್ತಿಗೆ ಬಲಿಯಾಯ್ತು ಮೂರೇ ತಿಂಗಳ ಸಂಸಾರ ; ಪತ್ನಿಯನ್ನು ಕೊಲೆಗೈದು...

SHOCKING : 3 ಕೋಟಿಯ ಆಸ್ತಿಗೆ ಬಲಿಯಾಯ್ತು ಮೂರೇ ತಿಂಗಳ ಸಂಸಾರ ; ಪತ್ನಿಯನ್ನು ಕೊಲೆಗೈದು ಶವಕ್ಕೆ ಬೆಂಕಿ ಹಚ್ಚಿದ ಪಾಪಿ ಪತಿ.!

ಮೂರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಾಗಿ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಅರೆಬರೆ ಸುಟ್ಟು ಹಾಕಿದ ಭೀಕರ ಘಟನೆ ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮೋನಿಕಾ ನಾಗರ್ (೨೨) ಎಂದು ಗುರುತಿಸಲಾಗಿದ್ದು, ಫೆಬ್ರವರಿಯಲ್ಲಿ ಪ್ರೇಮ ವಿವಾಹವಾಗಿದ್ದ ಪತಿ ಅನುಜ್ ಚೌಹಾಣ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಹತ್ಯೆಯ ನಂತರ ಸೆಗಣಿ ಬೆರಣಿಗಳ ಅಡಿಯಲ್ಲಿ ಶವವನ್ನಿಟ್ಟು ಸುಡಲು ಯತ್ನಿಸಿದ್ದ ಆರೋಪಿಗಳು, ಎಸ್‌ಯುವಿ ಕಾರಿನಲ್ಲಿ ಶವ ಸಾಗಿಸುತ್ತಿದ್ದಾಗ ಸಂಬಂಧಿಕರ ಕಣ್ಣಿಗೆ ಬಿದ್ದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಅನುಜ್ ಮತ್ತು ಆತನ ಕುಟುಂಬದ ಏಳು ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.ನ್ಯಾಯಾಲಯದಲ್ಲಿ ವಿವಾಹವಾದ ಕೇವಲ ಮೂರೇ ತಿಂಗಳಲ್ಲಿ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಸುಡಲು ಯತ್ನಿಸಿರುವ ಘಟನೆ ದಾದ್ರಿಯಲ್ಲಿ ನಡೆದಿದೆ. ಈ ಸಂಬಂಧ ಆರೋಪಿ ಅನುಜ್ ಚೌಹಾಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತರನ್ನು  ಮೋನಿಕಾ ನಾಗರ್ (22) ಎಂದು ಗುರುತಿಸಲಾಗಿದೆ.ಆರೋಪಿ  ಅನುಜ್ ಚೌಹಾಣ್ (25) ಈ ಕೃತ್ಯ ಎಸಗಿದ್ದಾನೆ.ಈ ಜೋಡಿ ಕಳೆದ ಫೆಬ್ರವರಿ ತಿಂಗಳಷ್ಟೇ ಪ್ರೇಮ ವಿವಾಹವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಡೆದಿದ್ದೇನು?

ಮೇ 7 ರಂದು ದಾದ್ರಿಯ ನಿರ್ಜನ ಪ್ರದೇಶವೊಂದರಲ್ಲಿ ಮೋನಿಕಾ ಅವರ ಅರೆಬರೆ ಸುಟ್ಟ ಸ್ಥಿತಿಯ ಶವ ಪತ್ತೆಯಾಗಿತ್ತು. ಪೊಲೀಸ್ ತನಿಖೆಯ ಪ್ರಕಾರ, ಅನುಜ್ ತನ್ನ ಪೋಷಕರು ಮತ್ತು ನೆರೆಹೊರೆಯವರ ಸಹಾಯದೊಂದಿಗೆ ಎಸ್‌ಯುವಿ (SUV) ಕಾರಿನಲ್ಲಿ ಶವವನ್ನು ಸಾಗಿಸಿ, ಸೆಗಣಿ ಬೆರಣಿಗಳ ಅಡಿಯಲ್ಲಿಟ್ಟು ಬೆಂಕಿ ಹಚ್ಚಿದ್ದ ಎನ್ನಲಾಗಿದೆ.

ಕೋಟಿ ಬೆಲೆಯ ಆಸ್ತಿಗಾಗಿ ಕಿರುಕುಳ ?

ಮೋನಿಕಾ ಅವರ ಕುಟುಂಬಸ್ಥರು ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ:ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಮೋನಿಕಾಗೆ ಆಕೆಯ ಪತಿ ಮತ್ತು ಅತ್ತೆ-ಮಾವ ಕಿರುಕುಳ ನೀಡುತ್ತಿದ್ದರು.ಕೊಲೆಯಾದ ದಿನ ಮೋನಿಕಾ ತನ್ನ ತಾಯಿಗೆ ಕರೆ ಮಾಡಿ, ತನ್ನ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಗೋಳಾಡಿದ್ದರು.ಅದೇ ಸಂಜೆ ಕಪ್ಪು ಬಣ್ಣದ ಫಾರ್ಚೂನರ್ ಕಾರಿನಲ್ಲಿ ಶವವನ್ನು ಸಾಗಿಸುವುದನ್ನು ಸಂಬಂಧಿಕರು ಗಮನಿಸಿದ್ದರು.

ಪೊಲೀಸ್ ತನಿಖೆ ಮತ್ತು ಬಂಧನ

ಪೊಲೀಸರು ಆರೋಪಿ ಅನುಜ್‌ನನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಅನುಜ್, “ತನ್ನ ತವರು ಮನೆಗೆ ಹೋಗಬೇಕೆಂದು ಮೋನಿಕಾ ಹಠ ಹಿಡಿದಾಗ ಜಗಳವಾಗಿತ್ತು. ನಂತರ ಆಕೆ ನೇಣು ಹಾಕಿಕೊಂಡಿದ್ದಾಳೆ ಎಂದು ಮನೆಯವರು ತಿಳಿಸಿದರು. ಗ್ರಾಮಸ್ಥರ ಸಲಹೆಯಂತೆ ಸಾಕ್ಷ್ಯ ನಾಶಪಡಿಸಲು ಶವವನ್ನು ಸುಡಲು ಯತ್ನಿಸಿದೆವು” ಎಂದು ಹೇಳಿಕೆ ನೀಡಿದ್ದಾನೆ. ಸದ್ಯ ಪೊಲೀಸರು ಹಂತಕ ಅನುಜ್ ಸೇರಿದಂತೆ ಅವನ ಕುಟುಂಬದ ಏಳು ಜನರ ಮೇಲೆ ಕೊಲೆ (BNS ಸೆಕ್ಷನ್ 103) ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಶವ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಸಾವಿನ ನಿಖರ ಕಾರಣ ತಿಳಿಯಲು ವಿಧಿವಿಜ್ಞಾನ (Forensic) ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular