HomeLatest NewsSHOCKING : ಬಿರುಗಾಳಿ ಅಬ್ಬರಕ್ಕೆ ತಗಡಿನ ಶೀಟ್‌ ಸಮೇತ ಆಕಾಶಕ್ಕೆ ಹಾರಿದ ಯುವಕ ; ಭಯಾನಕ...

SHOCKING : ಬಿರುಗಾಳಿ ಅಬ್ಬರಕ್ಕೆ ತಗಡಿನ ಶೀಟ್‌ ಸಮೇತ ಆಕಾಶಕ್ಕೆ ಹಾರಿದ ಯುವಕ ; ಭಯಾನಕ ವೀಡಿಯೋ ವೈರಲ್ |WATCH VIDEO

ಬರೇಲಿ: ಉತ್ತರ ಪ್ರದೇಶದಲ್ಲಿ ಕಳೆದ ಬುಧವಾರ ಸಂಭವಿಸಿದ ಭೀಕರ ಬಿರುಗಾಳಿ ಮತ್ತು ಮಳೆಯು ಸೃಷ್ಟಿಸಿದ ಅವಾಂತರಗಳು ಒಂದೆರಡಲ್ಲ. ಬರೇಲಿ ಜಿಲ್ಲೆಯಲ್ಲಿ ನಡೆದ ಒಂದು ಘಟನೆಯಂತೂ ಜನರನ್ನು ಬೆಚ್ಚಿಬೀಳಿಸಿದೆ.

ಉತ್ತರ ಪ್ರದೇಶದಲ್ಲಿ ಬೀಸಿದ ಚಂಡಮಾರುತ ಸದೃಶ ಬಿರುಗಾಳಿಯು ಭೀಕರ ಅವಾಂತರಗಳನ್ನು ಸೃಷ್ಟಿಸಿದ್ದು, ಬರೇಲಿಯಲ್ಲಿ ವ್ಯಕ್ತಿಯೊಬ್ಬರು ತಗಡಿನ ಶೆಡ್‌ನೊಂದಿಗೆ ಗಾಳಿಯಲ್ಲಿ ಹಾರಿ ಹೋದ ಘಟನೆ ಜನರನ್ನು ಆತಂಕಕ್ಕೀಡು ಮಾಡಿದೆ. ಬಿರುಗಾಳಿಯ ತೀವ್ರತೆಗೆ ತಗಡಿನ ಶೀಟ್‌ಗಳು ಕಿತ್ತುಬರುತ್ತಿದ್ದಾಗ ಅದನ್ನು ತಡೆಯಲು ಪ್ರಯತ್ನಿಸಿದ ನನ್ನೆ ಮಿಯಾನ್ ಎಂಬುವವರು ಶೆಡ್‌ನೊಂದಿಗೇ ಆಕಾಶಕ್ಕೆ ಹಾರಿದ್ದು, ನಂತರ ಹೊಲವೊಂದರಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಿರುಗಾಳಿ ಬೀಸುವಾಗ ನನ್ನೆ ಮಿಯಾನ್ ಅವರು ಮದುವೆ ಮಂಟಪವೊಂದರಲ್ಲಿ ತಗಡಿನ ಶೀಟ್‌ಗಳನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ, ಗಾಳಿಯ ವೇಗ ಎಷ್ಟಿತ್ತೆಂದರೆ ಆ ತಗಡಿನ ಶೆಡ್ ಅಪ್ಪಳಿಸಿ ವ್ಯಕ್ತಿಯ ಸಮೇತ ಗಾಳಿಯಲ್ಲಿ ಹಾರಿಹೋಗಿದೆ.ಸ್ವಲ್ಪ ದೂರದವರೆಗೆ ಗಾಳಿಯಲ್ಲಿ ತೇಲಿದ ಶೆಡ್ ಕೆಳಕ್ಕೆ ಬಿದ್ದರೆ, ನನ್ನೆ ಮಿಯಾನ್ ಅವರು ಮಾತ್ರ ಮತ್ತಷ್ಟು ದೂರದವರೆಗೆ ಹಾರಿಹೋಗಿ ಹೊಲವೊಂದರ ಮಧ್ಯೆ ಬಿದ್ದಿದ್ದಾರೆ.ಈ ಭೀಕರ ಘಟನೆಯಿಂದಾಗಿ ವ್ಯಕ್ತಿಯ ಕೈ ಮತ್ತು ಕಾಲುಗಳು ಮುರಿದಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತರ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಬಲಿ: ಕಳೆದ ಬುಧವಾರ ರಾಜ್ಯಾದ್ಯಂತ ಸಂಭವಿಸಿದ ಮಿಂಚು, ಬಿರುಗಾಳಿ ಮತ್ತು ಮಳೆಗೆ ಸುಮಾರು 70ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೃತಪಟ್ಟವರ ಕುಟುಂಬಗಳಿಗೆ ಮತ್ತು ಆಸ್ತಿಪಾಸ್ತಿ ಕಳೆದುಕೊಂಡವರಿಗೆ 24 ಗಂಟೆಯೊಳಗೆ ಪರಿಹಾರ ವಿತರಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular