HomeKarnatakaದೇಶದಲ್ಲಿ ಅಕಾಲಿಕ ಮಳೆ, ಜಲಕಂಟಕ: ಆಕಸ್ಮಿಕ ಘಟನೆಗಳಿಂದ ದೊಡ್ಡ ನಗರಗಳಿಗೆ ಆಪತ್ತು: ಕೋಡಿಮಠ ಸ್ವಾಮೀಜಿ ಭವಿಷ್ಯ

ದೇಶದಲ್ಲಿ ಅಕಾಲಿಕ ಮಳೆ, ಜಲಕಂಟಕ: ಆಕಸ್ಮಿಕ ಘಟನೆಗಳಿಂದ ದೊಡ್ಡ ನಗರಗಳಿಗೆ ಆಪತ್ತು: ಕೋಡಿಮಠ ಸ್ವಾಮೀಜಿ ಭವಿಷ್ಯ

ಶಿವಮೊಗ್ಗ: ದೇಶದಲ್ಲಿ ಅಕಾಲಿಕ ಮಳೆಯಿಂದ ಜಲಕಂಟಕಗಳು ಎದುರಾಗುತ್ತವೆ. ಗುಡುಗು, ಸಿಡಿಲು, ಮಳೆ ಆರ್ಭಟ ಹೆಚ್ಚಾಗಿ ಭೂಮಿ ತಲ್ಲಣ ಗೊಳ್ಳಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಸೋಮವಾರ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿ, ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಲಿದೆ. ಆಕಸ್ಮಿಕ ಘಟನೆಗಳು ನಡೆದು ದೊಡ್ಡ ದೊಡ್ಡ ನಗರಗಳು ಆಪತ್ತು ಎದುರಿಸುತ್ತವೆ ಎಂದು ಹೇಳಿದ್ದಾರೆ.

 ಅರಸನ ಅರಮನೆ ಕಳೆಗುಂದಿತು. ಪಟ್ಟದ ಆನೆ ಗಾಂಭೀರ್ಯ ನಡೆದೀತು ಎಂದು ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ಅಸತ್ಯ ಸಿಹಿ ಆಗಿರುತ್ತದೆ. ಜಾಗತಿಕ ಮಟ್ಟದಲ್ಲಿ ಎರಡು ತಲೆಗಳು ಉರುಳುತ್ತವೆ ಯುದ್ಧ ವಾಯು ದಾಳಿಗೆ ನಗರಗಳು ನಲುಗುತ್ತವೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದು, ಅದು ನಿಜವಾಗಿದೆ. ಹಿಂಗಾರು ಮಳೆ ಗಾಳಿ ಆರ್ಭಟ ಹೆಚ್ಚಾಗುತ್ತದೆ. ಯಾವುದೇ ಜನಜೀವನದ ಮೇಲೆ ಪರಿಣಾಮ ಬೀರುವುದಿಲ್ಲ. ಸಕಾಲಿಕ ಮಳೆಗಿಂತ ಅಕಾಲಿಕ ಮಳೆಗೆ ಹೆಚ್ಚು. ದೇಶದಲ್ಲಿ ಸಕಾಲಿಕ ಮಳೆಯಾಗದೆ ಅಕಾಲಿಕ ಮಳೆಯಾಗಲಿದ್ದು ಜಲಕಂಟಕ ಎದುರಾಗಲಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular