HomeKarnatakaBREAKING: ದೇವರಾಯನದುರ್ಗದ ಬೆಟ್ಟದಿಂದ ಜಿಗಿದು PWD ಇಲಾಖೆ ಸಹಾಯಕ ಇಂಜಿನಿಯರ್ ಆತ್ಮಹತ್ಯೆ

BREAKING: ದೇವರಾಯನದುರ್ಗದ ಬೆಟ್ಟದಿಂದ ಜಿಗಿದು PWD ಇಲಾಖೆ ಸಹಾಯಕ ಇಂಜಿನಿಯರ್ ಆತ್ಮಹತ್ಯೆ

ತುಮಕೂರು: ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜು ಪ್ರಸಾದ್ (33) ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ನಡೆದಿದೆ.

ತುಮಕೂರು ತಾಲೂಕಿನ ದೇವರಾಯನದುರ್ಗದ ಬೆಟ್ಟದಿಂದ ಜಿಗಿದು ಇಂಜಿನಿಯರ್ ಮಂಜು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುಪ್ರಸಾದ್ ಪಾವಗಡದ ಪಿಡಬ್ಲ್ಯೂ ಡಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತುಮಕೂರಿನ ಸತ್ಯಮಂಗಲದಲ್ಲಿ ವಾಸವಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದೂವರೆ ವರ್ಷದ ಹಿಂದೆ ಮಂಜು ಪ್ರಸಾದ್ ಅವರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಾಯಿ ಅಗಲಿಕೆಯಿಂದ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದರು. ಈ ಸಂಬಂಧ ಮಂಜು ಪ್ರಸಾದ್ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಇಂದು ಬೆಳಿಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದ ಮಂಜು ಪ್ರಸಾದ್ ಕೊರಟಗೆರೆಯಲ್ಲಿರುವ ಸಂಬಂಧಿಗೆ ಮೊಬೈಲ್, ಮನೆ ಕೀ ಕೊಟ್ಟು ಹೋಗಿದ್ದರು. ಮೀಟಿಂಗ್ ಇದೆ ಎಂದು ದೇವರಾಯನದುರ್ಗಕ್ಕೆ ಬಂದಿದ್ದರು. ಹೀಗೆ ಬಂದವರೇ ದೇವರಾಯನದುರ್ಗದ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಟುಂಬದವರು ಅನುಮಾನಗೊಂಡು ಪರಿಶೀಲಿಸಿದಾಗ ಮಂಜು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular