HomeLifestyleಪುಣೆಯಲ್ಲಿ ಘೋರ ದುರಂತ: ಪತಿಯೊಂದಿಗೆ ಜಗಳವಾಡಿ ಎಂಟನೇ ಮಹಡಿಯಿಂದ ಜಿಗಿದ ಮಹಿಳೆ

ಪುಣೆಯಲ್ಲಿ ಘೋರ ದುರಂತ: ಪತಿಯೊಂದಿಗೆ ಜಗಳವಾಡಿ ಎಂಟನೇ ಮಹಡಿಯಿಂದ ಜಿಗಿದ ಮಹಿಳೆ

ಸ್ಥಳೀಯ ಅರ್ಬನ್ ಲೈಫ್ ಟವರ್ ಹೌಸಿಂಗ್ ಸೊಸೈಟಿಯಲ್ಲಿ ಈ ದುರಂತ ಸಂಭವಿಸಿದ್ದು, ಮೃತ ಮಹಿಳೆಯನ್ನು ಪ್ರತಿಭಾ ಶಂಕರ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆ ನಡೆಯುವ ಕೆಲವೇ ಕ್ಷಣಗಳ ಮೊದಲು ಪ್ರತಿಭಾ ಮತ್ತು ಅವರ ಪತಿಯ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಆಕ್ರೋಶಗೊಂಡ ಮಹಿಳೆ ಫ್ಲಾಟ್‌ನ ಬಾಲ್ಕನಿಯಿಂದ ಕೆಳಕ್ಕೆ ಜಿಗಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನಕಲಕುವ ವಿಡಿಯೋ ವೈರಲ್ ಈ ಘಟನೆಯ ದೃತದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹತ್ತಿರದ ಕಟ್ಟಡದಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಚಿತ್ರೀಕರಿಸಿದ್ದು, ಮಹಿಳೆ ಬಾಲ್ಕನಿಯ ರೈಲಿಂಗ್ ಹಿಡಿದು ನೇತಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಕೆಳಗಿದ್ದ ನಿವಾಸಿಗಳು ಆಕೆಯನ್ನು ಕೆಳಕ್ಕೆ ಬೀಳದಂತೆ ಮತ್ತು ಒಳಕ್ಕೆ ಬರುವಂತೆ ಕಿರುಚುತ್ತಾ ಮನವಿ ಮಾಡುತ್ತಿದ್ದರೂ, ಕೆಲವೇ ಕ್ಷಣಗಳಲ್ಲಿ ಆಕೆಯ ಕೈಜಾರಿ ಕೆಳಕ್ಕೆ ಬಿದ್ದಿದ್ದಾರೆ.

ಘಟನೆಯ ನಂತರ ಸೊಸೈಟಿಯ ನಿವಾಸಿಗಳಲ್ಲಿ ಭೀತಿ ಉಂಟಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ದಂಪತಿಗಳ ನಡುವಿನ ಜಗಳಕ್ಕೆ ನಿಖರ ಕಾರಣವೇನು ಮತ್ತು ಈ ಆತ್ಮಹತ್ಯೆಗೆ ಯಾರಾದರೂ ಪ್ರಚೋದನೆ ನೀಡಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಅನಿರೀಕ್ಷಿತ ಘಟನೆಯಿಂದ ಇಡೀ ವಸತಿ ಸಂಕಲ್ಪದ ನಿವಾಸಿಗಳು ಆಘಾತಕ್ಕೊಳಗಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular