ಮಂಗಳೂರು: ಮುಜರಾಯಿ ಇಲಾಖೆ ಅಧೀನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯ ದೇವಾಲಯವು 2025- 26 ನೇ ಸಾಲಿನ ಆರ್ಥಿಕ ವರ್ಷದಲ್ಲಿ 167.89 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ. ಈ ಮೂಲಕ ಸತತ 15ನೇ ವರ್ಷವೂ ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ಗುತ್ತಿಗೆಗಳಿಂದ 2.53 ಕೋಟಿ ರೂ.,ಧಾನ್ಯಗಳ ಇಳುವರಿ ಮತ್ತು ತೋಟದ ಉತ್ಪನ್ನದಿಂದ 10.50 ಲಕ್ಷ ರೂ., ಕಟ್ಟಡ ಮತ್ತು ಅಂಗಡಿಗಳ ಬಾಡಿಗೆಯಿಂದ 94.46 ಲಕ್ಷ ರೂ., ಕಾಣಿಕೆಯಿಂದ 5.47 ಕೋಟಿ ರೂ.ಆದಾಯ ಬಂದಿದೆ
ಅದೇ ರೀತಿಯಾಗಿ ಇ- ಹುಂಡಿಯಿಂದ 38.01 ಲಕ್ಷ ರೂ., ಹುಂಡಿಯಿಂದ 24.69 ಕೋಟಿ ರೂ., ಹರಕೆ ಸೇವೆಗಳಿಂದ 64.08 ಕೋಟಿ ರೂಪಾಯಿ, ಅನುದಾನದಿಂದ 1.67 ಲಕ್ಷ ರೂ.ಆದಾಯ ಬಂದಿದೆ.
ಹುಂಡಿ ಹಣದ ಮೇಲಿನ ಬಡ್ಡಿ 49.11 ಲಕ್ಷ ರೂಪಾಯಿ, ಉಳಿತಾಯ ಖಾತೆ ಮತ್ತು ಇತರೆ ಬಡ್ಡಿ 41.80 ಲಕ್ಷ ರೂ., ಇತರೆ ಬಾಬ್ತುಗಳು 3.20 ಲಕ್ಷ ರೂಪಾಯಿ, ಛತ್ರ ಸಂರಕ್ಷಣಾ ವಂತಿಗೆ 6.93 ಲಕ್ಷ ರೂಪಾಯಿ, ಅನ್ನ ಸಂತರ್ಪಣೆ ನಿಧಿಯಿಂದ 9.14 ಲಕ್ಷ ರೂಪಾಯಿ, ಅಭಿವೃದ್ಧಿ ನಿಧಿ 14.17 ಲಕ್ಷ ರೂಪಾಯಿ, ಶಾಶ್ವತ ಸೇವಾ ಮೂಲದ 56.70 ಲಕ್ಷ ರೂ. ಹೀಗೆ ಒಟ್ಟು 167.89 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬಂದಿದೆ ಎಂದು ಹೇಳಲಾಗಿದೆ.

