HomeLatest Newsನಿಮ್ಮ ಮೇಲೆ FIR ಇದ್ದರೆ ಸರ್ಕಾರಿ ಕೆಲಸ ಸಿಗಲ್ವಾ? ಸುಪ್ರೀಂ ಕೋರ್ಟ್ ಮತ್ತು ಕಾನೂನು ಏನು...

ನಿಮ್ಮ ಮೇಲೆ FIR ಇದ್ದರೆ ಸರ್ಕಾರಿ ಕೆಲಸ ಸಿಗಲ್ವಾ? ಸುಪ್ರೀಂ ಕೋರ್ಟ್ ಮತ್ತು ಕಾನೂನು ಏನು ಹೇಳುತ್ತೆ?

ಬೆಂಗಳೂರು: ಸರ್ಕಾರಿ ಉದ್ಯೋಗ ಎಂಬುದು ಇಂದಿನ ಯುವಪೀಳಿಗೆಯ ಪಾಲಿನ ಚಿನ್ನದ ಜಿಂಕೆ. ಆದರೆ, ಕೆರಿಯರ್ ಕಟ್ಟಿಕೊಳ್ಳುವ ಹಂತದಲ್ಲಿ ತಿಳಿಯದೆಯೋ ಅಥವಾ ಕಿಡಿಗೇಡಿಗಳ ಸಂಚಿನಿಂದಲೋ ಅಚಾನಕ್ಕಾಗಿ ಒಬ್ಬ ಅಭ್ಯರ್ಥಿಯ ಮೇಲೆ ಎಫ್‌ಐಆರ್ (FIR) ದಾಖಲಾದರೆ ಅವರ ಭವಿಷ್ಯ ಮುಗಿದೇ ಹೋಯಿತು ಎಂದು ಅನೇಕರು ಭಾವಿಸುತ್ತಾರೆ. ಆದರೆ ನಿಜಕ್ಕೂ ಕಾನೂನು ಏನು ಹೇಳುತ್ತದೆ? FIR ದಾಖಲಾದ ತಕ್ಷಣ ಕೆಲಸದ ಹಾದಿ ಮುಚ್ಚುತ್ತದೆಯೇ? ಈ ಕುರಿತ ಸತ್ಯಾಂಶಗಳು ಇಲ್ಲಿವೆ.

FIR ದಾಖಲಾದ ತಕ್ಷಣ ನೀವು ಅಪರಾಧಿಯಲ್ಲ

ಕಾನೂನಿನ ಮೂಲಭೂತ ತತ್ವದ ಪ್ರಕಾರ, ನ್ಯಾಯಾಲಯದಲ್ಲಿ ನಿಮ್ಮ ಮೇಲಿನ ಆರೋಪ ಸಾಬೀತಾಗುವವರೆಗೂ ನೀವು ಅಪರಾಧಿಯಲ್ಲ. FIR ಎನ್ನುವುದು ಕೇವಲ ಒಂದು ಆರೋಪದ ಪ್ರಾಥಮಿಕ ದಾಖಲೆ ಮಾತ್ರ. ಕೇವಲ ಈ ದಾಖಲೆ ಇರುವುದೊಂದೇ ಕಾರಣಕ್ಕೆ ಯಾರನ್ನೂ ಉದ್ಯೋಗಕ್ಕೆ ಅಯೋಗ್ಯ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಕಾನೂನು ತಜ್ಞರು ಸ್ಪಷ್ಟಪಡಿಸುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸತ್ಯ ಮರೆಮಾಚುವುದು ಮಹಾ ಅಪಾಯ

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಪ್ರಾಮಾಣಿಕತ. ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮ ಮೇಲೆ ಯಾವುದಾದರೂ ಪ್ರಕರಣ ಅಥವಾ FIR ಇದ್ದರೆ ಅದನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.

ಒಂದು ವೇಳೆ ಮಾಹಿತಿ ಮರೆಮಾಚಿದರೆ: ಮುಂದೆ ಉದ್ಯೋಗ ಸಿಕ್ಕರೂ ಸಹ, ಈ ಸುಳ್ಳು ಮಾಹಿತಿಯ ಕಾರಣಕ್ಕೆ ನಿಮ್ಮನ್ನು ಕೆಲಸದಿಂದ ವಜಾಗೊಳಿಸುವ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ ಇರುತ್ತದೆ. FIR ಇರುವುದಕ್ಕಿಂತಲೂ ಸತ್ಯ ಮರೆಮಾಚುವುದು ನಿಮ್ಮ ನೇಮಕಾತಿ ರದ್ದತಿಗೆ ಪ್ರಬಲ ಕಾರಣವಾಗಬಹುದು.

ಪ್ರಕರಣದ ಸ್ವರೂಪ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿ

ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೆಲವು ಮಹತ್ವದ ತೀರ್ಪುಗಳನ್ನು ನೀಡಿದೆ.ಸಣ್ಣ ಪ್ರಕರಣಗಳು ಸಣ್ಣಪುಟ್ಟ ಗಲಾಟೆ, ಪ್ರತಿಭಟನೆ ಅಥವಾ ಕೌಟುಂಬಿಕ ವಿವಾದಗಳಿಗೆ ಸಂಬಂಧಿಸಿದ FIRಗಳು ಉದ್ಯೋಗದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

ಗಂಭೀರ ಅಪರಾಧಗಳು: ನೈತಿಕ ಅಧಃಪತನ (Moral Turpitude), ಭ್ರಷ್ಟಾಚಾರ, ಕೊಲೆ ಅಥವಾ ಅತ್ಯಾಚಾರದಂತಹ ಗಂಭೀರ ಪ್ರಕರಣಗಳಿದ್ದರೆ ನೇಮಕಾತಿ ಸಂಸ್ಥೆ ಉದ್ಯೋಗ ನಿರಾಕರಿಸುವ ಹಕ್ಕನ್ನು ಹೊಂದಿರುತ್ತದೆ.

ಖುಲಾಸೆಗೊಂಡರೆ (Acquittal) ಯಾವುದೇ ಭಯ ಬೇಡ

ಒಂದು ವೇಳೆ ನೀವು ಪ್ರಕರಣದಿಂದ ‘ಗೌರವಯುತವಾಗಿ ಖುಲಾಸೆ’ (Honourable Acquittal) ಗೊಂಡಿದ್ದರೆ, ಉದ್ಯೋಗ ಪಡೆಯಲು ಯಾವುದೇ ಅಡೆತಡೆ ಇರುವುದಿಲ್ಲ. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಅಥವಾ ತಾಂತ್ರಿಕ ಕಾರಣಗಳಿಂದ “ಲಾಭದಾಯಕ ಸಂಶಯ” (Benefit of Doubt) ಅಡಿ ಖುಲಾಸೆಯಾಗಿದ್ದರೆ, ನಿಮ್ಮ ನಡವಳಿಕೆಯನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲಾಖೆಗೆ ಇರುತ್ತದೆ.

ದೋಷಾರೋಪಣೆ (Conviction) ಆದರೆ ಕಷ್ಟ

ನ್ಯಾಯಾಲಯದಲ್ಲಿ ನಿಮ್ಮ ಮೇಲಿನ ಆರೋಪ ಸಾಬೀತಾಗಿ ಶಿಕ್ಷೆಯಾಗಿದ್ದರೆ ಮಾತ್ರ ಸರ್ಕಾರಿ ಉದ್ಯೋಗ ಸಿಗುವುದು ಬಹುತೇಕ ಅಸಾಧ್ಯ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular