HomeKarnatakaBREAKING: ವೈದ್ಯನ ಆತ್ಮಹತ್ಯೆ ಬೆನ್ನಲ್ಲೇ ನೇಣಿಗೆ ಶರಣಾದ ನರ್ಸ್

BREAKING: ವೈದ್ಯನ ಆತ್ಮಹತ್ಯೆ ಬೆನ್ನಲ್ಲೇ ನೇಣಿಗೆ ಶರಣಾದ ನರ್ಸ್

ಬೆಂಗಳೂರು: ಮಹದೇಶ್ವರ ಬಡಾವಣೆಯಲ್ಲಿ ವೈದ್ಯ ಡಾ.ಚೇತನ್ ಟೆಂಕರ್ ಆತ್ಮಹತ್ಯೆಗೆ ಶರಣಾಗಿದ್ದ ಬೆನ್ನಲ್ಲೇ ಇದೀಗ ನರ್ಸ್ ಕೂಡ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಮಹದೇಶ್ವರ ಬಡವಾಣೆಯಲ್ಲಿ ಈ ಘಟನೆ ನಡೆದಿದೆ. ನವೋದಯ ಆಸ್ಪತ್ರೆಯ ನರ್ಸ್ ಸರಸ್ವತಿ (45) ಆತ್ಮಹತ್ಯೆಗೆ ಶರಣಾದವರು. ಎರಡು ದಿನಗಳ ಹಿಂದೆ ನವೋದಯ ಆಸ್ಪತ್ರೆಯ ವೈದ್ಯ ಡಾ.ಚೇತನ್ ಟೆಂಕರ್ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಾವಿನ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಇದೀಗ ಅದೇ ಆಸ್ಪತ್ರೆಯ ನರ್ಸ್ ನೇಣಿಗೆ ಶರಣಾಗಿದ್ದಾರೆ.

ವೈದ್ಯ ಹಾಗೂ ನರ್ಸ್ ಸಾವಿನ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಕನಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular