ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಟಿವಿಕೆ ಸರ್ಕಾರ ರಚನೆಗೆ ಮುಂದಾಗಿದೆ. ತಮಿಳುನಾಡಿನ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಟಿವಿಕೆಗೆ ಸರ್ಕಾರ ರಚನೆಗೆ ಬೇಕಾದ ಬಹುಮತವಾದ 118 ಸ್ಥಾನಗಳು ಸಿಕ್ಕಿರಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ವಿಜಯ್ ಬೇರೆ ಪಕ್ಷಗಳ ಬೆಂಬಲ ಕೋರಿದ್ದರು. ಕಾಂಗ್ರೆಸ್ನ ಬೆಂಬಲದಿಂದ ಇಂದು ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದರು. ಆದರೆ, ತಮಿಳುನಾಡಿನ ರಾಜ್ಯಪಾಲರು ವಿಜಯ್ ನೀಡಿದ ಬಹುಮತದ ಲೆಕ್ಕಾಚಾರದಿಂದ ಸಮಾಧಾನಗೊಂಡಿಲ್ಲ. ಈ ಕಾರಣಕ್ಕೆ ಇಂದು ನಿಗದಿಯಾಗಿದ್ದ ಪ್ರಮಾಣವಚನ ಕಾರ್ಯಕ್ರಮ ಮುಂದೂಡಿಕೆಯಾಗಿದೆ.
ತಮಿಳುನಾಡಿನಲ್ಲಿ ಸರ್ಕಾರ ರಚನೆಯಾಗಲು 118 ಸ್ಥಾನಗಳ ಬಹುಮತ ಬೇಕಾಗಿದೆ. ಆದರೆ, ಟಿವಿಕೆ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಹೊಂದಿದೆ. ಹೀಗಾಗಿ, ಸರ್ಕಾರ ರಚಿಸಲು ಇನ್ನೂ 10 ಸ್ಥಾನಗಳು ಬೇಕಾಗಿದ್ದರಿಂದ ವಿಜಯ್ ಬೇರೆ ಪಕ್ಷಗಳ ಬೆಂಬಲ ಕೋರಿದ್ದರು. ಡಿಎಂಕೆ ಜೊತೆಗಿನ 55 ವರ್ಷಗಳ ಮೈತ್ರಿಯನ್ನು ಮುರಿದುಕೊಂಡಿದ್ದ ಕಾಂಗ್ರೆಸ್ ಟಿವಿಕೆಗೆ ಬೆಂಬಲ ನೀಡಲು ಒಪ್ಪಿದೆ. ಆದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಗೆದ್ದಿರುವ ಸ್ಥಾನಗಳು ಕೇವಲ 5. ಈ ಮೂಲಕ ಟಿವಿಕೆಯ ಸ್ಥಾನಗಳು 113ಕ್ಕೆ ಏರಿಕೆಯಾದರೂ ಇನ್ನೂ 5 ಸೀಟುಗಳ ಬೆಂಬಲದ ಅಗತ್ಯವಿದೆ.
ಇದುವರೆಗೂ ಕಾಂಗ್ರೆಸ್ ಮಾತ್ರ ಟಿವಿಕೆಗೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ. ಡಿಎಂಕೆ ಮೈತ್ರಿಕೂಟದಲ್ಲಿದ್ದ ಸಿಪಿಐ (2 ಸ್ಥಾನ), ಸಿಪಿಎಂ (2 ಸ್ಥಾನ) ಮತ್ತು ವಿಸಿಕೆ (2 ಸ್ಥಾನ) ಟಿವಿಕೆಗೆ ಬೆಂಬಲ ನೀಡಲಿವೆ ಎನ್ನಲಾಗುತ್ತಿದೆ. ಆದರೆ, ರಾಜ್ಯಪಾಲರಿಗೆ ವಿಜಯ್ ನೀಡಿದ ಹಕ್ಕು ಮಂಡನೆ ಪತ್ರದಲ್ಲಿ ಈ ಪಕ್ಷಗಳ ಬೆಂಬಲದ ಕುರಿತು ಸ್ಪಷ್ಟತೆಯಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಬಹುಮತ ಸಾಬೀತುಪಡಿಸದೆ ವಿಜಯ್ ಅವರಿಗೆ ಸರ್ಕಾರ ರಚಿಸಲು ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.
ವಿಜಯ್ ಪಕ್ಷಕ್ಕೆ ಕಾಂಗ್ರೆಸ್ ಮಾತ್ರ ಬಹಿರಂಗವಾಗಿ ಬೆಂಬಲ ಘೋಷಿಸಿದೆ. ಡಿಎಂಕೆ ಮೈತ್ರಿಕೂಟದಲ್ಲಿದ್ದ ಸಿಪಿಐ (2 ಸ್ಥಾನ), ಸಿಪಿಎಂ (2 ಸ್ಥಾನ) ಮತ್ತು ವಿಸಿಕೆ (2 ಸ್ಥಾನ) ಟಿವಿಕೆಗೆ ಬೆಂಬಲ ನೀಡಲಿವೆ ಎನ್ನಲಾಗುತ್ತಿದೆ. ಆದರೆ, ರಾಜ್ಯಪಾಲರಿಗೆ ವಿಜಯ್ ನೀಡಿದ ಹಕ್ಕು ಮಂಡನೆ ಪತ್ರದಲ್ಲಿ ಈ ಪಕ್ಷಗಳ ಬೆಂಬಲದ ಕುರಿತು ಸ್ಪಷ್ಟತೆಯಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಬಹುಮತ ಸಾಬೀತುಪಡಿಸದೆ ವಿಜಯ್ ಅವರಿಗೆ ಸರ್ಕಾರ ರಚಿಸಲು ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದಾರೆ.
ವಿಜಯ್ ಅವರು ಪ್ರಸ್ತುತ 118 ಜನರ ಬೆಂಬಲವನ್ನು ಹೊಂದಿದ್ದಾರೆಂದು ಮೌಖಿಕವಾಗಿ ಮಾತ್ರ ಹೇಳಿದ್ದಾರೆಯೇ ಹೊರತು ಆ ಪಕ್ಷಗಳ ಬೆಂಬಲ ಪತ್ರವನ್ನು ನೀಡಿಲ್ಲ. ಹೀಗಾಗಿ, ರಾಜ್ಯಪಾಲರು ರಾಜ್ಯ ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 118 ಶಾಸಕರ ಬೆಂಬಲವನ್ನು ಸಾಬೀತುಪಡಿಸುವ ಪತ್ರವನ್ನು ಸ್ವೀಕರಿಸಿದ ನಂತರವೇ ಮುಂದುವರಿಯುವುದು ಹೆಚ್ಚು ಸೂಕ್ತ ಎಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಟಿವಿಕೆ ನಾಯಕರಿಗೆ ಹೇಳಿ ವಾಪಾಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಇಂದು ನಿಗದಿಯಾಗಿದ್ದ ವಿಜಯ್ ಪ್ರಮಾಣವಚನ ಸಮಾರಂಭ ಮುಂದೂಡಿಕೆಯಾಗಿದೆ.
ಬಹುಮತ ಸಾಬೀತುಪಡಿಸಿದ ಬಳಿಕವೇ ನೂತನ ಸಿಎಂ ಪ್ರಮಾಣವಚನ ನಿಗದಿಯಾಗಲಿದೆ. ಇತ್ತ ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಇಂದು ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಎಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಬೃಹತ್ ವೇದಿಕೆ ಸಜ್ಜಾಗಿತ್ತು. ಬೆಳಿಗ್ಗೆಯಿಮ್ದಲೇ ವಿಜಯ್ ಅಭಿಮಾನಿಗಳು ನೆಹರು ಕ್ರೀಡಾಂಗಣದತ್ತ ದೌಡಾಯಿಸಿದ್ದರು. ಆದರೆ ವಿಜಯ್ ಪ್ರಮಾಣವಚನ ಸಮಾರಂಭ ಮುಂದೂಡಿಕೆಯಾಗಿರುವ ವಿಚಾರ ತಿಳಿದ ಮಹಿಳಾ ಅಭಿಮಾನಿಯೊಬ್ಬರು ಕಣ್ಣೀರಿಟ್ಟಿದ್ದಾರೆ. ವಿಜಯ್ ಪ್ರಮಾಣವಚನಕ್ಕೆಂದು ಬಂದಿದ್ದ ಅಭಿಮಾನಿಗೆ ತೀವ್ರ ನಿರಾಸೆಯಾಗಿದ್ದು, ಬೇಸರದಿಂದ ಕಣ್ಣೀರಿಟ್ಟಿದ್ದಾರೆ.
ನೆಹರು ಕ್ರೀಡಾಂಗಣದ ಬಳಿ ನೆರೆದಿದ ಸಾವಿರಾರು ಅಭಿಮಾನಿಗಳು ಇಂದು ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಅಕರ ಸ್ವೀಕರಿಸುವುದನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಆದರೆ ಪ್ರಮಾಣವಚನ ಕಾರ್ಯಕ್ರಮ ಮುಂದೂಡಿಕೆಯಾಗಿದ್ದಕ್ಕೆ ಎಲ್ಲರೂ ನಿರಾಶರಾಗಿದ್ದಾರೆ.

