HomeEntertainmentಬಿಡುಗಡೆಯಾದ 26 ದಿನಕ್ಕೆ ಓಟಿಟಿಗೆ ಲಗ್ಗೆ ಇಡುತ್ತಿದೆ ಲವ್ ಇನ್ಶೂರೆನ್ಸ್ ಕಂಪನಿ: ಸೈನ್ಸ್ ಫಿಕ್ಷನ್ ಕಥೆಗೆ...

ಬಿಡುಗಡೆಯಾದ 26 ದಿನಕ್ಕೆ ಓಟಿಟಿಗೆ ಲಗ್ಗೆ ಇಡುತ್ತಿದೆ ಲವ್ ಇನ್ಶೂರೆನ್ಸ್ ಕಂಪನಿ: ಸೈನ್ಸ್ ಫಿಕ್ಷನ್ ಕಥೆಗೆ ಫ್ಯಾನ್ಸ್ ಕೊಟ್ಟ ಪ್ರತಿಕ್ರಿಯೆ ಏನು?

ತಮಿಳಿನ ಯುವ ಸೆನ್ಸೇಷನ್ ಪ್ರದೀಪ್ ರಂಗನಾಥನ್, ಕೃತಿ ಶೆಟ್ಟಿ ಮತ್ತು ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಲವ್ ಇನ್ಶೂರೆನ್ಸ್ ಕಂಪನಿ’ ಚಿತ್ರವು ಏಪ್ರಿಲ್ 10 ರಂದು ಬೆಳ್ಳಿಪರದೆಯ ಮೇಲೆ ಅಪ್ಪಳಿಸಿತ್ತು. ಬಿಡುಗಡೆಯಾದ ಕೇವಲ 26 ದಿನಗಳಲ್ಲೇ ಈ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಲಗ್ಗೆ ಇಡುತ್ತಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಹಾಗೂ ಹಿಂದಿಯಲ್ಲಿ ಈ ಚಿತ್ರ ಲಭ್ಯವಿರಲಿದೆ ಎಂದು ಪ್ರೈಮ್ ವಿಡಿಯೋ ಅಧಿಕೃತವಾಗಿ ಘೋಷಿಸಿದೆ.

ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಈ ಹಿಂದೆ ‘ಲವ್ ಟುಡೇ’, ‘ಡ್ರ್ಯಾಗನ್’ ಮತ್ತು ‘ಡ್ಯೂಡ್’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಪ್ರದೀಪ್ ರಂಗನಾಥನ್ ಅವರಿಗೆ ಈ ಚಿತ್ರ ಅಷ್ಟಾಗಿ ಕೈಹಿಡಿದಿಲ್ಲ. ಈ ಮೊದಲು ಅವರ ನಟನೆಯ ಚಿತ್ರಗಳು 100 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿದ್ದವು. ಆದರೆ ‘ಲವ್ ಇನ್ಶೂರೆನ್ಸ್ ಕಂಪನಿ’ ವಿಶ್ವಾದ್ಯಂತ ಕೇವಲ 60.23 ಕೋಟಿ ರೂಪಾಯಿ ಗಳಿಸುವ ಮೂಲಕ ಪ್ರದೀಪ್ ವೃತ್ತಿಜೀವನದ ಕಡಿಮೆ ಗಳಿಕೆಯ ಸಿನಿಮಾ ಎಂಬ ಹಣೆಪಟ್ಟಿ ಪಡೆದುಕೊಂಡಿದೆ.

ಅಭಿಮಾನಿಗಳ ಆಕ್ರೋಶ ಚಿತ್ರದ ಓಟಿಟಿ ಬಿಡುಗಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಪ್ರದೀಪ್ ಅವರ ಕಟ್ಟಾ ಅಭಿಮಾನಿಗಳೇ ಈ ಸಿನಿಮಾವನ್ನು ಕಡೆಗಣಿಸುವಂತೆ ಮಾತನಾಡುತ್ತಿರುವುದು ವಿಶೇಷ. ಚಿತ್ರಕಥೆಯಲ್ಲಿನ ಗೊಂದಲ ಮತ್ತು ನಿಧಾನಗತಿಯ ಸನ್ನಿವೇಶಗಳಿಂದಾಗಿ ಸಿನಿಮಾ ಬೇಸರ ತರಿಸುತ್ತದೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಪ್ರದೀಪ್ ನಟನೆಯ ಸಿನಿಮಾವೊಂದಕ್ಕೆ ಇಷ್ಟೊಂದು ನೆಗೆಟಿವ್ ಪ್ರತಿಕ್ರಿಯೆ ಬರುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿನಿಮಾದ ಕಥಾಹಂದರ 2040 ರ ಕಾಲಘಟ್ಟದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಡೇಟಿಂಗ್ ಆಪ್‌ಗಳೇ ಜೀವನ ಸಂಗಾತಿಯನ್ನು ನಿರ್ಧರಿಸುವ ಈ ಕಾಲದಲ್ಲಿ, ನೈಸರ್ಗಿಕವಾಗಿ ಪ್ರೀತಿಯಲ್ಲಿ ಬೀಳುವ ಯುವಕನ ಹೋರಾಟದ ಕಥೆಯನ್ನು ವಿಘ್ನೇಶ್ ಶಿವನ್ ವಿಭಿನ್ನವಾಗಿ ತೋರಿಸಲು ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿ ಯೋಗಿ ಬಾಬು, ಸೀಮನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಸಿನಿಮಾ ವಿಮರ್ಶಾತ್ಮಕವಾಗಿ ಹಿನ್ನಡೆ ಅನುಭವಿಸಿದರೂ, ಓಟಿಟಿಯಲ್ಲಿ ಯಾವ ರೀತಿಯ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular