HomeLive NewsGOOD NEWS : ಮಹಿಳೆಯರಿಗೆ ಅಂಚೆ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್ : ಈ ಖಾತೆ...

GOOD NEWS : ಮಹಿಳೆಯರಿಗೆ ಅಂಚೆ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್ : ಈ ಖಾತೆ ತೆರೆದರೆ ಈ ಎಲ್ಲಾ ಸೇವೆಯೂ ಉಚಿತ.!

ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಮಹಿಳೆಯರಿಗಾಗಿ ವಿಶೇಷ ಉಳಿತಾಯ ಖಾತೆಯನ್ನು ಪರಿಚಯಿಸಿದೆ. ಸ್ವಸಹಾಯ ಸಂಘಗಳ (SHG) ಮಹಿಳೆಯರಿಗಾಗಿ ಈ ವಿಶೇಷ ಉಳಿತಾಯ ಖಾತೆಯನ್ನು ಪ್ರಾರಂಭಿಸಲಾಗಿದೆ. ಹಾಗಾದರೆ ಈ ಖಾತೆಯ ವಿಶೇಷತೆಗಳೇನು? ಇದರಿಂದ ಆಗುವ ಪ್ರಯೋಜನಗಳೇನು?

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ದೇಶದ ಜನರಿಗಾಗಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಗ್ರಾಮೀಣ ಭಾಗದ ಜನರಿಗೆ ಉತ್ತಮ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಮತ್ತೊಂದು ಹೊಸ ಉಳಿತಾಯ ಖಾತೆಯನ್ನು ಪರಿಚಯಿಸಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಸ್ವಸಹಾಯ ಸಂಘಗಳಿಗೆ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲು ಸ್ವಸಹಾಯ ಸಂಘಗಳ ಉಳಿತಾಯಖಾತೆಯನ್ನು(SHG Savings Account) ಲಭ್ಯಗೊಳಿಸಿದೆ.

ಇದರಿಂದ ಸ್ವಸಹಾಯ ಸಂಘಗಳಿಗೆ (SHG) ಸುಲಭ ಹಾಗೂ ಕೈಗೆಟುಕುವ ದರದಲ್ಲಿ ಬ್ಯಾಂಕಿಂಗ್ ಸೇವೆಗಳು ಸಿಗಲಿವೆ. ಸಣ್ಣ ವ್ಯಾಪಾರಿಗಳು ಅಥವಾ ಆರ್ಥಿಕ ವಹಿವಾಟುಗಳನ್ನು ಹೆಚ್ಚಾಗಿ ನಡೆಸುವ ಮಹಿಳೆಯರಿಗೆ ಇದು ತುಂಬಾ ಉಪಯುಕ್ತವಾಗಲಿದೆ. ಕೇವಲ ಗ್ರಾಮೀಣ ಮಹಿಳೆಯರಿಗಾಗಿಯೇ ವಿಶೇಷವಾಗಿ ಈ ಹೊಸ ಉಳಿತಾಯ ಖಾತೆಯನ್ನು ಪ್ರಾರಂಭಿಸಲಾಗಿದೆ. ಹಾಗಾದರೆ ಈ ಖಾತೆಯ ಪ್ರಯೋಜನಗಳೇನು? ಇದನ್ನು ತೆರೆಯುವುದು ಹೇಗೆ? ಎಂಬ ವಿವರಗಳನ್ನು ನೋಡೋಣ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

SHG ಉಳಿತಾಯ ಖಾತೆಯ ವಿಶೇಷತೆಗಳು

ವಿಶೇಷ ಖಾತೆ: ಗ್ರಾಮೀಣ ಮತ್ತು ನಗರ ಪ್ರದೇಶಗಳ ಸ್ವಸಹಾಯ ಸಂಘಗಳಿಗಾಗಿ ವಿಶೇಷವಾಗಿ ತರಲಾಗಿರುವ ಖಾತೆ ಇದಾಗಿದೆ.

ಬ್ಯಾಂಕಿಂಗ್ ಸೇವೆಗಳ ಸರಳೀಕರಣ : ಸ್ವಸಹಾಯ ಸಂಘಗಳಿಗೆ ಬ್ಯಾಂಕಿಂಗ್ ಸೇವೆಗಳು ಸುಲಭವಾಗಿ ಸಿಗುವಂತೆ ಮಾಡುವುದು ಮತ್ತು ಆರ್ಥಿಕ ನಿರ್ವಹಣೆಯನ್ನು ಬಲಪಡಿಸುವುದು ಇದರ ಮುಖ್ಯ ಗುರಿಯಾಗಿದೆ.

ಸರ್ಕಾರದ ಯೋಜನೆಗಳಿಗೆ ಬೆಂಬಲ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM), ನಬಾರ್ಡ್ (NABARD) ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಸೂಚಿಗೆ ಬೆಂಬಲವಾಗಿ ಈ ಖಾತೆಯನ್ನು ತರಲಾಗಿದೆ.

ಆರ್ಥಿಕ ಸಬಲೀಕರಣ: ಸ್ವಸಹಾಯ ಸಂಘಗಳಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇದು ಸಹಾಯ ಮಾಡುತ್ತದೆ.

ಎಲ್ಲವೂ ಉಚಿತ..

ಝೀರೋ ಬ್ಯಾಲೆನ್ಸ್: ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ SHG ಖಾತೆಯಲ್ಲಿ ‘ಝೀರೋ ಬ್ಯಾಲೆನ್ಸ್’ ಇದ್ದರೂ ಯಾವುದೇ ದಂಡ (ಪೆನಾಲ್ಟಿ) ಇರುವುದಿಲ್ಲ.

ಉಚಿತ ಖಾತೆ ತೆರೆಯುವಿಕೆ: ಈ ಖಾತೆಯನ್ನು ಉಚಿತವಾಗಿ ತೆರೆಯಬಹುದು. ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ (Minimum Balance) ಕಾಯ್ದುಕೊಳ್ಳುವ ಅಗತ್ಯವಿಲ್ಲ.

ಯಾವುದೇ ಶುಲ್ಕಗಳಿಲ್ಲ: ಯಾವುದೇ ರೀತಿಯ ದಂಡಗಳು ಅಥವಾ ಶುಲ್ಕಗಳು ಇರುವುದಿಲ್ಲ.

ಉಚಿತ ಡೆಪಾಸಿಟ್ ಮತ್ತು ವಿತ್‌ಡ್ರಾ : ಹಣವನ್ನು ಜಮಾ ಮಾಡಲು (Deposit) ಅಥವಾ ಹಿಂಪಡೆಯಲು (Withdraw) ಯಾವುದೇ ಸೇವಾ ಶುಲ್ಕಗಳಿರುವುದಿಲ್ಲ.

ಗರಿಷ್ಠ ಮಿತಿ: ಈ ಖಾತೆಯಲ್ಲಿ 20 ಲಕ್ಷ ರೂಪಾಯಿಗಳವರೆಗೆ ನಗದು ಉಳಿತಾಯ ಮಾಡಿಕೊಳ್ಳಬಹುದು.

ವಾರ್ಷಿಕ ಬಡ್ಡಿ: ಉಳಿತಾಯದ ಮೇಲೆ ವಾರ್ಷಿಕ ಬಡ್ಡಿ ಕೂಡ ಸಿಗಲಿದೆ.

ಉಚಿತ ಬ್ಯಾಂಕ್ ಸ್ಟೇಟ್‌ಮೆಂಟ್: ಪ್ರತಿ ತಿಂಗಳು ಒಂದು ಬಾರಿ ಉಚಿತವಾಗಿ ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯಬಹುದು.

ಖಾತೆ ಮುಚ್ಚುವಿಕೆ ಮತ್ತು ಕ್ಯೂಆರ್ ಕಾರ್ಡ್: ಖಾತೆಯನ್ನು ಕ್ಲೋಸ್ ಮಾಡಲು ಅಥವಾ ಕ್ಯೂಆರ್ ಕಾರ್ಡ್ (QR Card) ವಿತರಿಸಲು ಯಾವುದೇ ಶುಲ್ಕವಿರುವುದಿಲ್ಲ.

ಡಿಜಿಟಲ್ ಖಾತೆ ತೆರೆಯುವಿಕೆ: ಈ ಖಾತೆಯನ್ನು ನಿಮ್ಮ ಮನೆಯಲ್ಲಿಯೇ ಕುಳಿತು ಡಿಜಿಟಲ್ ಆಗಿ ತೆರೆಯಬಹುದು.

ಗ್ರಾಮೀಣ ಡಾಕ್ ಸೇವಕರ ಸಹಾಯ: ಅಂಚೆ ಕಚೇರಿಗಳು ಮತ್ತು ಗ್ರಾಮೀಣ ಡಾಕ್ ಸೇವಕರ (GDS) ಸಹಾಯದಿಂದ ಈ ಖಾತೆಯನ್ನು ತೆರೆಯಬಹುದು.

ಮನೆಯಿಂದಲೇ ನಿರ್ವಹಣೆ: ಮನೆಯಿಂದಲೇ ಡಿಜಿಟಲ್ ಸೇವೆಗಳ ಮೂಲಕ ಈ ಖಾತೆಯನ್ನು ಸುಲಭವಾಗಿ ನಿರ್ವಹಿಸಬಹುದು.

ಗ್ರಾಮೀಣ ಪ್ರದೇಶಗಳಲ್ಲೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸಲು ಅಂಚೆ ಇಲಾಖೆ ಈ ಮಹತ್ವದ ಪ್ರಯತ್ನ ಮಾಡುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular