HomeKarnatakaಲಾರಿ ಸಹಿತ 1 ಕೋಟಿಗೂ ಅಧಿಕ ಮೌಲ್ಯದ 350 ಚೀಲ ಅಡಿಕೆ ವಶಕ್ಕೆ

ಲಾರಿ ಸಹಿತ 1 ಕೋಟಿಗೂ ಅಧಿಕ ಮೌಲ್ಯದ 350 ಚೀಲ ಅಡಿಕೆ ವಶಕ್ಕೆ

ಶಿವಮೊಗ್ಗ: ಮ್ಯಾಮ್ಕೋಸ್ ನಿಂದ ಬೆಂಗಳೂರಿಗೆ ಸಾಗಿಸಬೇಕಿದ್ದ 350 ಚೀಲ ಅಡಿಕೆ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಗ್ರಾಮದ ಅರಣ್ಯ ಪ್ರದೇಶದಲ್ಲಿ ಲಾರಿ ಹಾಗೂ ಅದರಲ್ಲಿದ್ದಂತಹ ಒಟ್ಟು 1.09.36.800 ರೂ. ಬೆಲೆ ಬಾಳುವ ರಾಶಿ ಅಡಿಕೆ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಲಾರಿ ವಶಪಡಿಸಿಕೊಳ್ಳಲಾಗಿದೆ

ಹಿರಿಯ ಕಾರ್ಯನಿರ್ವಾಹಕ ಹೆಚ್. ಕೃಷ್ಣಪೂಜಾರಿ ದಿನಾಂಕ 28/03/2026 ರಂದು ಸಂಜೆ  ಠಾಣೆಗೆ ದೂರು ನೀಡಿದ್ದರು. ಶಿವಮೊಗ್ಗದ ಭಾರತ್ ಟ್ರಾನ್ಸ್ ಪೋರ್ಟ್ ನ ಪ್ರೋಪರೇಟರ್ ಮೊಹಮದ್ ಯಾಹ್ಯ @ ರಾಜೀಕ್ ಭಾಯಿ ರವರಿಗೆ ಶಿವಮೊಗ್ಗ ಮ್ಯಾಮ್ಕೋಸ್ ಗೆ ಅಡಿಕೆಯನ್ನು ತುಂಬಿಕೊಂಡು ಹೋಗಲು ಒಂದು ಲಾರಿ ಯನ್ನು ಕಳುಹಿಸಿಕೊಡಿ ಎಂದು ತಿಳಿಸಲಾಗಿತ್ತು.

ಅದರಂತೆ ಲಾರಿಯನ್ನು ಕಳುಹಿಸಿಕೊಟ್ಟಿದ್ದು ನಂತರ ಮ್ಯಾಮ್ಕೋಸ್ ನವರು ಸದರಿ ಲಾರಿಗೆ 350 ಚೀಲ ಅಡಿಕೆಯನ್ನು ಲೋಡ್ ಮಾಡಿ ಬೆಂಗಳೂರು ಯಶವಂತ ಪುರಕ್ಕೆ ತೆಗೆದುಕೊಂಡು ಹೋಗಲು ಲಾರಿ ಚಾಲಕ/ಮಾಲೀಕನಾದ ಮುಹಿಬುಲ್ಲಾ ಖಾನ್ @ ಸದ್ದಾಮ್ ರವರಿಗೆ ತಿಳಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಂತೆ ಮುಹಿಬುಲ್ಲಾ ಖಾನ್ @ ಸದ್ದಾಮ್ ದಿನಾಂಕ: 26.03.2026 ರಂದು ರಾತ್ರಿ 11 ಗಂಟೆಗೆ ಅಡಿಕೆ ತುಂಬಿದ ಲಾರಿಯನ್ನು ಬೆಂಗಳೂರು ಕಡೆಗೆ ಹೋಗಲು ಶಿವಮೊಗ್ಗದಿಂದ ಹೊರಟಿದ್ದು ನಂತರ ಸದರಿ ಲಾರಿ ಯಶವಂತಪುರಕ್ಕೆ ಹೋಗಿರಲಿಲ್ಲ.

ನಂತರ ಹುಡುಕಾಡಲಾಗಿ ಮುಹಿಬುಲ್ಲಾ ಖಾನ್ @ ಸದ್ದಾಮ್ ದಿನಾಂಕ:27.03.2026 ರಂದು ಶಿವಮೊಗ್ಗದಲ್ಲಿ ಸಿಕ್ಕಿದ್ದು ವಿಚಾರಿಸಲಾಗಿದೆ. ಶಿವಮೊಗ್ಗ ವಾಸಿ ಮೊಹಮದ್ ಗೌಸ್ ಮತ್ತು ನೌಶದ್ ರವರು ನನ್ನ ಜೊತೆ ಲಾರಿಯಲ್ಲಿ ಬಂದು ಹೊಳೆಹೊನ್ನೂರು ಕೈಮರ ಬಳಿ ಪೆಟ್ರೋಲ್ ಬಂಕ್ ಹತ್ತಿರ ರಾತ್ರಿ 12.20 ಗಂಟೆಗೆ ಬಂದು ಮೂರು ಜನರು ಸೇರಿಕೊಂಡು ಲಾರಿಯಲ್ಲಿದ್ದ ಅಡಿಕೆಯನ್ನು ನಾನು, ಮೊಹಮದ್ ಗೌಸ್, ನೌಶದ್ ರವರು ಸೇರಿಕೊಂಡು ಮಾರಾಟ ಮಾಡೋಣ. ಇದರಿಂದ ಬಂದ ಹಣವನ್ನು ಹಂಚಿಕೊಳ್ಳೋಣ ಎಂದು ಮಾತನಾಡಿಕೊಂಡು ಕೈಮರದಿಂದ ಹೊರಟಿದ್ದು ನಂತರ ಚಿತ್ರದುರ್ಗ ಹಿರಿಯೂರು ಬಳಿ ಮೊಹಮದ್ ಗೌಸ್ ಮತ್ತು ನೌಶದ್ ರವರು ನೀನು ಹೋಗು ನಾವುಗಳು ಅಡಿಕೆಯನ್ನು ಮಾರಾಟ ಮಾಡಿಕೊಂಡು ಬರುತ್ತೇವೆ. ಬಂದ ಹಣವನ್ನು ಹಂಚಿ ಕೊಳ್ಳೋಣ ಎಂದು ತಿಳಿಸಿದ್ದಾರೆ.

ನಂತರ ಲಾರಿ ಚಾಲಕ/ಮಾಲೀಕನಾದ ಸದ್ದಾಮ್, ಮೊಹಮದ್ ಗೌಸ್, ನೌಶದ್ ಸೇರಿಕೊಂಡು ಅಡಿಕೆಯನ್ನು ಲಪಟಾಯಿಸಿಕೊಂಡು ಮೋಸ ಮತ್ತು ನಂಬಿಕೆ ದ್ರೋಹ ಮಾಡಿ ಲಾರಿಯಲ್ಲಿದ್ದ ಅಡಿಕೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು 350 ಚೀಲ ಅಡಿಕೆಯನ್ನು ಪತ್ತೆ ಮಾಡಿಕೊಡಬೇಕೆಂದು ದೂರು ನೀಡಲಾಗಿದೆ.

ಪ್ರಕರಣದಲ್ಲಿ ಮಾಲು ಹಾಗೂ ಅರೋಪಿತರ ಪತ್ತೆಗಾಗಿ ಎಸ್ಪಿ ನಿಖಿಲ್ ಬಿ., ಎಎಸ್ಪಿ ಕಾರಿಯಪ್ಪ ಎ.ಜಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮೇಲ್ವಿಚಾರಣೆಯಲ್ಲಿ ಹೊಳೆಹೊನ್ನೂರು ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಸಾದ್ ಎಂ. ನೇತೃತ್ವದಲ್ಲಿ ಪಿಎಸ್ಐ ಶಾಂತಲಾ ಹಾಗೂ ಸಿಬ್ಬಂದಿಗಳಾದ ಅಣ್ಣಪ್ಪ, ಪ್ರಕಾಶ ನಾಯ್ಕ, ನಾಗರಾಜ, ಕುಬೇರನಾಯ್ಕ, ಪ್ರಶಾಂತ, ಪ್ರವೀಣ್ ಹಂಪೋಳ್ ಹಾಗೂ ವಿಶ್ವನಾಥ ಹಾಗೂ ಜಿಲ್ಲಾ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ ಮತ್ತು ಇಂದ್ರೇಶ್ ಅವರುಗಳನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.

 ದಿನಾಂಕ: 30-04-2026 ರಂದು ಬಾತ್ಮೀದಾರರ ಮಾಹಿತಿ ಮೇರೆಗೆ ಕೋಡಿಹೊಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಮೋಸ ಮಾಡಿ ತೆಗೆದುಕೊಂಡು ಹೋಗಿದ್ದ ಲಾರಿ ಹಾಗೂ ಅದರಲ್ಲಿದ್ದಂತಹ ಒಟ್ಟು 1.09.36.800/- (1 ಕೋಟಿ 9 ಲಕ್ಷದ 36 ಸಾವಿರದ 800 ರೂ ಬೆಲೆ ಬಾಳುವ ರಾಶಿ ಅಡಿಕೆ) ಮತ್ತು ಕೃತ್ಯಕ್ಕೆ ಉಪಯೋಗಿಸಿದ ಲಾರಿಯ ಅಂದಾಜು ಬೆಲೆ 20.00000/-(20ಲಕ್ಷ) ಒಟ್ಟಾರೆಯಾಗಿ 1,29,36,800/- ರೂ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular