ಬೆಂಗಳೂರು: ಪೀಣ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ಕೇಬಲ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ಅಂತಿಮ ಲೋಡ್ ಟೆಸ್ಟಿಂಗ್ ನಡೆಯುತ್ತಿರುವ ಪರಿಣಾಮ ನಾಲ್ಕು ದಿನ ಸಾರ್ವಜನಿಕ ಸಂಚಾರ ವಾಹನ ಸಂಚಾರ ನಿಷೇಧಿಸಲಾಗಿದೆ.
ಮೇ 5 ರಂದು ಬೆಳಿಗ್ಗೆ 5 ಗಂಟೆಯಿಂದ ಮೇ 8ರಂದು ಬೆಳಗ್ಗೆ 11 ಗಂಟೆಯವರೆಗೆ ಎರಡೂ ಬದಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಪರ್ಯಾಯ ಮಾರ್ಗವಾಗಿ ಫ್ಲೈಓವರ್ ನ ಕೆಳಭಾಗದ ಎನ್.ಹೆಚ್. 4 ಮತ್ತು ಸರ್ವಿಸ್ ರಸ್ತೆ ಮೂಲಕ ಎಂಟನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್.ಆರ್.ಎಸ್. ಜಂಕ್ಷನ್, ಗೊರಗುಂಟೆ ಪಾಳ್ಯಕ್ಕೆ ಸಂಚರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು 13 ರಿಂದ 17ರವರೆಗೆ ಪೀಣ್ಯ ಹೆದ್ದಾರಿ ಸಂಚಾರ ಬಂದ್ ಮಾಡುವ ಬಗ್ಗೆ ಪ್ರಕಟಣೆ ನೀಡಲಾಗಿತ್ತು. ಆದರೆ ಕಾರಣಾಂತರದಿಂದ ದುರಸ್ತಿ ಕಾಮಗಾರಿ ಪರಿಶೀಲನೆ ಮುಂದೂಡಲಾಗಿತ್ತು. ಇದೀಗ ಮೇ 5 ರಿಂದ 8 ರವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸಂಚಾರ ನಿರ್ಬಂಧ:
ದಿನಾಂಕ: 05-05-2026 ರಂದು ಬೆಳಿಗ್ಗೆ 5 ಗಂಟೆಯಿಂದ ದಿನಾಂಕ: 08-05-2026 ರಂದು ಬೆಳಿಗ್ಗೆ 11 ಗಂಟೆಯವರೆಗೆ ಪೀಣ್ಯ ಎಲಿವೇಟೆಡ್ ಫೈಓವರ್ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.
ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಫೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲೇತುವೆ) ಮೇಲೆ ಕೆನ್ನಮೆಟಲ್ ವಿಡಿಯಾ Upper ramp ಎಸ್.ಆರ್.ಎಸ್ Down ramp ವರೆಗೆ ಎರಡು ಕಡೆಯಲ್ಲಿ ಫೈಓವರ್ ಮೇಲೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
ಪರ್ಯಾಯ ಮಾರ್ಗಗಳು:
1. ನೆಲಮಂಗಲ ಬೆಂಗಳೂರು ಕಡೆಗೆ:
ಕೆನ್ನಮೆಟಲ್ ಫ್ಯಾಕ್ಟರಿ ಹತ್ತಿರ ಫೈಓವರ್ನ ಫೈಓವರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ ದಾಸರಹಳ್ಳಿ ಜಾಲಹಳ್ಳಿ ಕ್ರಾಸ್ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಎಸ್.ಆರ್.ಎಸ್ ಜಂಕ್ಷನ್ ಗೊರಗುಂಟೆಪಾಳ್ಯ
2 ಸಿಎಂಟಿಐ- ನೆಲಮಂಗಲ ಕಡೆಗೆ
ಫೈಓವರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ, ಮೂಲಕ -ಎಸ್.ಆರ್.ಎಸ್ ಜಂಕ್ಷನ್ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಜಾಲಹಳ್ಳಿ ಕ್ರಾಸ್ ದಾಸರಹಳ್ಳಿ 8ನೇ ಮೈಲಿ ಪಾರ್ಲೆ ಜಿ ಟೋಲ್.
ಪೀಣ್ಯ ಮೇಲ್ವೇತುವೆ ಮೂಲಕ ಸಾಗುವ ವಾಹನಗಳ ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಮೇಲ್ಕಂಡ ಮಾರ್ಪಾಡುಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಿದೆ.


