ನವದೆಹಲಿ : ದೆಹಲಿಯಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ತನ್ನ ಪ್ರಿಯಕರನೊಂದಿಗೆ ಹೋಟೆಲ್‌ನಿಂದ ಹೊರಬರುತ್ತಿದ್ದಾಗ ಪತಿಗೆ ಸಿಕ್ಕಿಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಕರ್ತವ್ಯದ ಹೆಸರಿನಲ್ಲಿ ಅನೈತಿಕ ಸಂಬಂಧ ಹೊಂದಿದ್ದ ದೆಹಲಿ ಪೊಲೀಸ್ ಕಾನ್‌ಸ್ಟೇಬಲ್ ಪ್ರೀತಿ ಸಿಂಗ್ ಅವರನ್ನು ಅವರ ಪತಿಯೇ ಹೋಟೆಲ್ ಮುಂಭಾಗದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಡೆದಿದೆ. “ಈಗ ಯಾಕೆ ಮುಖ ಮುಚ್ಚಿಕೊಳ್ಳುತ್ತಿದ್ದೀಯಾ?” ಎಂದು ಪತಿ ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬೆನ್ನಟ್ಟಿದ ಪತಿಯ ಮೇಲೆ ಆಕೆಯ ಪ್ರಿಯಕರ ಹಲ್ಲೆಗೆ ಮುಂದಾಗಿದ್ದು, ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಘಟನೆಯ ವಿವರ
ವೈರಲ್ ವಿಡಿಯೋದಲ್ಲಿರುವಂತೆ, ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರೀತಿ ಸಿಂಗ್ ಎಂಬಾಕೆ ತನ್ನ ಪ್ರಿಯಕರನ ಜೊತೆ ಹೋಟೆಲ್‌ನಿಂದ ಹೊರಬರುತ್ತಿರುತ್ತಾರೆ. ಈ ವೇಳೆ ಅವರನ್ನು ಹಿಂಬಾಲಿಸಿದ ಪತಿ, ವಿಡಿಯೋ ಮಾಡುತ್ತಾ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಪತಿ ವಿಡಿಯೋ ಮಾಡಲು ಮುಂದಾದಾಗ, ಆಕೆಯ ಪ್ರಿಯಕರ ಪತಿಯ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾನೆ. ನಂತರ ಸ್ಥಳದಿಂದ ಪರಾರಿಯಾಗುತ್ತಾನೆ.ಪತಿ ಪ್ರಶ್ನೆ ಮಾಡಲು ಶುರುಮಾಡಿದಾಗ, “ಈಗ ಯಾಕೆ ಮುಖ ಮುಚ್ಚಿಕೊಳ್ಳುತ್ತಿದ್ದೀಯಾ?” ಎಂದು ಆಕ್ರೋಶ ಹೊರಹಾಕಿದ್ದಾರೆ. ಪತ್ನಿ ಮೌನವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳು:
ಈ ವಿಡಿಯೋ ಎಕ್ಸ್ (X) ನಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ:
- ಒಬ್ಬ ಬಳಕೆದಾರ: “ಪತಿ ಶೀಘ್ರದಲ್ಲೇ ಜೈಲು ಸೇರಬಹುದು ಮತ್ತು ಆಕೆಗೆ ಜೀವನಾಂಶ (Alimony) ನೀಡಬೇಕಾಗಬಹುದು. ಇದು ಇಂದಿನ ಪರಿಸ್ಥಿತಿ.”
- ಇನ್ನೊಬ್ಬರು: “ಇದು ಅತ್ಯಂತ ನೋವಿನ ಸಂಗತಿ, ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಮಾಮೂಲಿಯಾಗಿವೆ.”
- ಮತ್ತೊಬ್ಬರು: “ಪೊಲೀಸ್ ಮೇಡಂ ಡ್ಯೂಟಿ ಬಿಟ್ಟು ಅಫೇರ್ ಮಾಡ್ತಿದ್ದಾರೆ. ಕಾನೂನು ರಕ್ಷಿಸಬೇಕಾದವರೇ ಕಾನೂನು ಮೀರುತ್ತಿದ್ದಾರೆ.”
- ಹತಾಶೆಯ ನುಡಿ: “ಭಾರತೀಯ ಸಮಾಜ ಹಾಳಾಗುತ್ತಿದೆ, ವಿವಾಹಿತ ಮಹಿಳೆಯರ ಅನೈತಿಕ ಸಂಬಂಧಗಳು ಸಾಮಾನ್ಯವಾಗುತ್ತಿವೆ.”

