ಧಾರವಾಡ: ರಾಜ್ಯದ 1300 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 200ಕ್ಕೂ ಹೆಚ್ಚಿನ ವೈದ್ಯರ ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸೋಮವಾರ ಸರ್ಕಾರದ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್ ಕೊರತೆ ಬಗ್ಗೆ ಉತ್ತರಿಸಿದ ಸಚಿವರು, ತಜ್ಞ ರೇಡಿಯಾಲಜಿಸ್ಟ್ ಕೊರತೆ ಮೊದಲಿನಿಂದಲೂ ಇದೆ. ಅವರಿಗೆ ಹೆಚ್ಚಿನ ಬೇಡಿಕೆ ಇದ್ದು, ಟೆಲಿ ರೇಡಿಯಾಲಜಿ ಮೂಲಕ ಈ ಕೊರತೆ ನೀಗಿಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡದೆ ಸರ್ಕಾರವೇ ಕಂಟ್ರೋಲ್ ಮಾಡಲಿದೆ. ಆಂಬುಲೆನ್ಸ್ ಗಳಿಗೆ ಟ್ಯಾಬ್ ಅಳವಡಿಸುತ್ತೇವೆ. ಸಿಬ್ಬಂದಿ ರೋಗಿಯನ್ನು ಟ್ಯಾಬ್ ಮೂಲಕ ತೋರಿಸಿ ವೈದ್ಯರ ಬಳಿ ಮಾತನಾಡಬಹುದು. ಮತ್ತು ರೋಗಿಯ ಸ್ಥಿತಿಗತಿ ವೀಕ್ಷಿಸಬಹುದಾಗಿದೆ ಎಂದು ಹೇಳಿದ್ದಾರೆ.

