HomeBusinessಮನಾಲಿಯ ಬೆಟ್ಟಗಳ ಮಧ್ಯೆ ವರ್ಕ್ ಫ್ರಮ್ ಹೋಮ್: ಅಲ್ಲಿನ ತಿಂಗಳ ಖರ್ಚು ಕೇಳಿದರೆ ನೀವು ಬೆರಗಾಗುತ್ತೀರಿ

ಮನಾಲಿಯ ಬೆಟ್ಟಗಳ ಮಧ್ಯೆ ವರ್ಕ್ ಫ್ರಮ್ ಹೋಮ್: ಅಲ್ಲಿನ ತಿಂಗಳ ಖರ್ಚು ಕೇಳಿದರೆ ನೀವು ಬೆರಗಾಗುತ್ತೀರಿ

ಹೊರಗಡೆ ಮೈ ಕೊರೆಯುವ ಚಳಿ, ಕಿಟಕಿಯಿಂದ ಇಣುಕುವ ಹಿಮಭರಿತ ಪರ್ವತಗಳು ಮತ್ತು ಕೈಯಲ್ಲಿ ಬಿಸಿ ಕಾಫಿ ಇಟ್ಟುಕೊಂಡು ಕೆಲಸ ಮಾಡುವುದು ಹಲವರ ಕನಸು. ಇಂತಹ ಕನಸನ್ನು ಮನೀಶಾ ಎಂಬ 23 ವರ್ಷದ ಯುವತಿ ನನಸು ಮಾಡಿಕೊಂಡಿದ್ದಾರೆ. ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್ ಆಗಿ ಕೆಲಸ ಮಾಡುತ್ತಿರುವ ಮನೀಶಾ, ಹಿಮಾಚಲ ಪ್ರದೇಶದ ಮನಾಲಿಗೆ ಶಿಫ್ಟ್ ಆಗಿದ್ದು, ಅಲ್ಲಿನ ಸುಂದರ ಜೀವನ ಹಾಗೂ ಪ್ರತಿ ತಿಂಗಳಾಗುವ ಖರ್ಚು ವೆಚ್ಚದ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಾಸ್ತವ್ಯ ಮತ್ತು ಸೌಲಭ್ಯಗಳು ಪರ್ವತಗಳ ನಡುವೆ ವಾಸಿಸುವುದು ಸುಂದರವಾಗಿದ್ದರೂ, ಅದಕ್ಕೆ ತಕ್ಕಂತೆ ಯೋಜನೆ ರೂಪಿಸುವುದು ಮುಖ್ಯ. ಮನೀಶಾ ಹಳೆ ಮನಾಲಿಯಲ್ಲಿ ಒಂದು ಸುಸಜ್ಜಿತವಾದ 1RK (ಒಂದು ರೂಮ್ ಮತ್ತು ಅಡುಗೆ ಮನೆ) ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಅವರಿಗೆ ತಿಂಗಳಿಗೆ 15,000 ರೂಪಾಯಿ ಬಾಡಿಗೆ ತಗಲುತ್ತದೆ. ವಿಶೇಷವೆಂದರೆ, ಇಲ್ಲಿನ ಬಹುತೇಕ ಹೋಮ್‌ಸ್ಟೇಗಳಲ್ಲಿ ಉಚಿತ ವೈಫೈ ಸೌಲಭ್ಯವಿರುವುದರಿಂದ ಇಂಟರ್ನೆಟ್ ಖರ್ಚು ಇರುವುದಿಲ್ಲ.

ಊಟ ಮತ್ತು ದಿನಸಿ ವೆಚ್ಚ ಹೊರಗಡೆ ಹೋಟೆಲ್‌ಗಳಲ್ಲಿ ತಿನ್ನುವ ಬದಲು ಮನೆಯಲ್ಲೇ ಅಡುಗೆ ಮಾಡಿಕೊಳ್ಳುವುದು ಹಣ ಉಳಿಸಲು ಉತ್ತಮ ಮಾರ್ಗ ಎನ್ನುತ್ತಾರೆ ಮನೀಶಾ. ಇಡೀ ತಿಂಗಳ ದಿನಸಿ ವಸ್ತುಗಳಿಗೆ ಅವರಿಗೆ ಸುಮಾರು 4,200 ರೂಪಾಯಿ ಖರ್ಚಾಗುತ್ತದೆ. ಇನ್ನು ವಿದ್ಯುತ್ ಮತ್ತು ಲಾಂಡ್ರಿ ಸೇವೆಗಳಿಗೆ ತಿಂಗಳಿಗೆ 2,000 ದಿಂದ 2,300 ರೂಪಾಯಿ ತಗಲುತ್ತದೆ. ಹವಾಮಾನ ವೈಪರೀತ್ಯವಿದ್ದಾಗ ಮಾತ್ರ ಇಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆ, ಅಂತಹ ಸಮಯದಲ್ಲಿ ಪವರ್ ಬ್ಯಾಕಪ್ ಇರುವ ಕೆಫೆಗಳಿಗೆ ಹೋಗಿ ಕೆಲಸ ಮಾಡಬಹುದು ಎಂಬುದು ಅವರ ಸಲಹೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತರೆ ಖರ್ಚುಗಳ ವಿವರ ಮನೀಶಾ ಹಂಚಿಕೊಂಡಿರುವ ಜನವರಿ ತಿಂಗಳ ಒಟ್ಟು ವೆಚ್ಚದ ಪಟ್ಟಿ ಹೀಗಿದೆ:

  • ಮನೋರಂಜನೆ ಮತ್ತು ಹೊರಗಿನ ಊಟ: 6,500 ರೂಪಾಯಿ
  • ಸೌಂದರ್ಯವರ್ಧಕ ಮತ್ತು ಗ್ರೂಮಿಂಗ್: 2,500 ರೂಪಾಯಿ
  • ಸಬ್‌ಸ್ಕ್ರಿಪ್ಷನ್ ಮತ್ತು ರಿಚಾರ್ಜ್: 2,000 ರೂಪಾಯಿ
  • ಖರೀದಿ (Shopping): 1,600 ರೂಪಾಯಿ
  • ಇತರೆ ವೆಚ್ಚಗಳು: 1,300 ರೂಪಾಯಿ

ಜನವರಿ ಅಂತ್ಯದಲ್ಲಿ ಅವರು ಮನಾಲಿ ಇಂದ ಕೋಲ್ಕತ್ತಾಗೆ ಪ್ರಯಾಣ ಬೆಳೆಸಿದ್ದು, ವಿಮಾನ ಪ್ರಯಾಣ ಸೇರಿದಂತೆ 7,500 ರೂಪಾಯಿ ಹೆಚ್ಚುವರಿ ಖರ್ಚಾಗಿದೆ. ಎಲ್ಲವನ್ನೂ ಸೇರಿಸಿ ಅವರು ಆ ತಿಂಗಳು ಒಟ್ಟು 42,940 ರೂಪಾಯಿ ಖರ್ಚು ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ವೈರಲ್ ಆಗಿದ್ದು, ಕೆಲವರು ಮನಾಲಿ ಜೀವನದ ಬಗ್ಗೆ ಆಸಕ್ತಿ ತೋರಿದರೆ, ಇನ್ನೂ ಕೆಲವರು ಬೆಟ್ಟದ ಮೇಲಿನ ಜೀವನ ಕೂಡ ಈಗ ತುಬಾರಿಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಆಫೀಸ್ ಕೆಲಸದ ಒತ್ತಡದ ನಡುವೆ ಪ್ರಕೃತಿಯ ಮಡಿಲಲ್ಲಿ ಬದುಕಲು ಬಯಸುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿ ಕಾಣುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular