HomeLatest NewsBIG NEWS: ಸಿದ್ದರಾಮಯ್ಯ ಹುಂಡಿಯಿಂದ ಹೊರಗೆ ಬಾ ಸಿದ್ದರಾಮಯ್ಯ: ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ...

BIG NEWS: ಸಿದ್ದರಾಮಯ್ಯ ಹುಂಡಿಯಿಂದ ಹೊರಗೆ ಬಾ ಸಿದ್ದರಾಮಯ್ಯ: ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್

ಮೈಸೂರು: ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ ಶೇ.94.1ರಷ್ಟು ಫಲಿತಾಂಶ ದಾಖಲಾಗಿರುವುದಕ್ಕೆ ಅನುಮಾನ ವ್ಯಕ್ತಪಡಿಸಿರುವ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್, ಪರೀಕ್ಷೆ ನಡೆದ ವಿಧಾನ, ಮೌಲ್ಯಮಾಪನದಲ್ಲಿ ಭಾರಿ ಗೋಲ್ ಮಲ್ ನಡೆದಿದೆ. ಎಲ್ಲರನ್ನು ಪಾಸ್ ಮಾಡಬೇಕು ಎಂಬ ಹಠಕ್ಕೆ ಬಿದ್ದು ಪಾಸ್ ಮಾಡಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಹೆಚ್.ವಿಶ್ವನಾಥ್ ಎಸ್.ಎಸ್.ಎಲ್.ಸಿ ಫಲಿತಾಂಶ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಅನ್ಡೆಸಿದ್ದಾರೆ. ಸಿದ್ದರಾಮಯ್ಯ ಈ ರಾಜ್ಯವನ್ನೇ ಅಡವಿಟ್ಟಿದ್ದಾರೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದ ಹಲವು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಆದರೂ ಶೇ.94 ಫಲಿತಾಂಶ ಬಂದಿರುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ. ಮೌಲ್ಯಮಾಪನ ಕೇಂದ್ರಕ್ಕೆ ಶಿಕ್ಷಣ ಸಚಿವರೇ ಹೋಗಿದ್ದಾರೆ. ಆಂತರಿಕ ಅಂಕಗಳನ್ನು 20ಕ್ಕೆ 20 ಕೊಡಲಾಗಿದೆ. ಉಳಿದ ಅಂಕಗಳನ್ನು ಕೊಟ್ಟು ಪಾಸ್ ಮಾಡಲು ಹೇಳಿದ್ದಾರೆ ಈ ರೀತಿ ಯಾರಾದರೂ ಮಾಡುತ್ತಾರಾ? ವಿದ್ಯಾರ್ಥಿಯ ಓದುವ ಉತ್ಸಾಹವನ್ನೇ ಕಸಿದು ಕೊಂಡಿದೆ ಈ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿದ್ದರಾಮಯ್ಯಗೆ ಶಿಕ್ಷಣ ವ್ಯವಸ್ಥೆಯೇ ಅರ್ಥವಾಗುತ್ತಿಲ್ಲ. ಸುಮ್ಮನೇ ಬೊಗಳೆ ಹೊಡೆದುಕೊಂಡು, ರೋಪ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಇನ್ನೂ ನೀನು ಸಿದ್ದರಾಮಯ್ಯ ಹುಂಡಿಯಲ್ಲಿಯೇ ಇದ್ದೀಯಾ ಸಿದ್ದರಾಮಯ್ಯ, ಹೊರಗೆ ಬಾ. ನಾನು ಸಿದ್ದರಾಮಯ್ಯನನ್ನು ಬೈಯ್ಯುತ್ತಿಲ್ಲ. ವಸ್ತುಸ್ಥಿತಿ ಹೇಳುತ್ತಿದ್ದೇನೆ. ಈಗಲಾದರೂ ತಿಳಿದುಕೊಂಡು ಬದಲಾಯಿಸಿಕೊ ಎಂದಿದ್ದಾರೆ.

ಕಳೆದ ವರ್ಷ ಎಸ್.ಎಸ್.ಎಲ್.ಸಿಯಲ್ಲಿ ಶೇ.80.4ರಷ್ಟು ಫಲಿತಾಂಶ ಬಂದಿದ್ದು, ಈಬಾರಿ ಒಮ್ಮೆಲೇ ಶೇ.94.1ರಷ್ಟು ಬರಲು ಹೇಗೆ ಸಾಧ್ಯವಾಯಿತು? ಪರೀಕ್ಷಾ ವಿಧಾನ, ಮೌಲ್ಯಮಾಪನದ ಬಗ್ಗೆ ಅನುಮಾನವಿದೆ. ಇಂತಹ ಫಲಿತಾಂಶವನ್ನು ಸೋಮಾರಿ ಶಿಕ್ಷಕರು ಸ್ವಾಗತಿಸುತ್ತಾರಷ್ಟೇ ಎಂದಿದ್ದಾರೆ.

ಇಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ. ಎಲ್ಲರೂ ಪಾಸಾಗಬೇಕು ಎಂಬ ಕಸರತ್ತು ನಡೆಸಲಾಗಿದೆ. ಹೀಗಾದರೆ ಮುಂದಿನ ದಿನಗಳಲ್ಲಿ ಅವರ ಕಥೆ ಏನು? ಪಿಯು ಹಂತದಲ್ಲಿ ಶಿಕ್ಷಣ ಮುಂದುವರೆಸುವವರ ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ಸಮಸ್ಯೆಗಳಾಗಬಹುದು ಎಂದು ತಿಳಿಸಿದ್ದಾರೆ.

20ಕ್ಕೆ 20 ಆಂತರಿಕ ಅಂಕ ಎಲ್ಲರಿಗೂ ಕೊಡಲಾಗಿದೆ. ಇನ್ನು ಪಾಸಾಗಲು ಬೇಕಿರುವುದು ಕೇವಲ 13 ಅಂಕ ಮಾತ್ರ. ಅದನ್ನೂ ಕಾಪಿ ಮಾಡಿದ್ದಾರೆ. ಇದು ನೋವಿನ ಸಂಗತಿ. ಸಿಎಂ ಸಿದ್ದರಾಮಯ್ಯ ಸರ್ಕಾರ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಹಲವಾರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಆದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಸಾಕಷ್ಟಿದೆ. ಆದರೂ ಶೇ.94.1ರಷ್ಟು ಫಲಿತಾಂಶ ಬಂದಿದ್ದು ಹೇಗೆ? ಮಾತೃ ಭಾಷೆ ಕನ್ನಡದಲ್ಲಿಯೇ ಬಹಳಷ್ಟು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ ಯಾಕೆ? ಇದ್ಯಾವ ರೀತಿ ಸಾಧನೆ? ಹಠಕ್ಕೆ ಬಿದ್ದು ಪಾಸ್ ಮಾಡಿದಂತಿದೆ ಎಂದು ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular