HomeLatest NewsSHOCKING : 'ನೀನಂದ್ರೆ ಇಷ್ಟವಿಲ್ಲ, ನಂಗೆ ನಾಲ್ಕು ಜನ ಗರ್ಲ್’ಫ್ರೆಂಡ್ಸ್ ಇದ್ದಾರೆ' ಎಂದಿದ್ದ ಭಾವಿ ಪತಿ...

SHOCKING : ‘ನೀನಂದ್ರೆ ಇಷ್ಟವಿಲ್ಲ, ನಂಗೆ ನಾಲ್ಕು ಜನ ಗರ್ಲ್’ಫ್ರೆಂಡ್ಸ್ ಇದ್ದಾರೆ’ ಎಂದಿದ್ದ ಭಾವಿ ಪತಿ ; ಮನನೊಂದು ಯುವತಿ ಆತ್ಮಹತ್ಯೆ.!

ಕಡಪ : ಭಾವಿ ಪತಿ ತನಗೆ ಬೇರೆ ಮಹಿಳೆಯರೊಂದಿಗೆ ಸಂಬಂಧವಿರುವುದಾಗಿ ಹೇಳಿದ ಬೆನ್ನಲ್ಲೇ ಮನನೊಂದ 26 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ನಡೆದಿದೆ.

ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಮದುವೆ: ಕಡಪ ನಿವಾಸಿಯಾದ ರೆಹಾನಾ ಎಂಬಾಕೆ ಎಂ.ಎಸ್ಸಿ ಪದವೀಧರೆಯಾಗಿದ್ದರು. ಇವರಿಗೂ ಮತ್ತು ಪ್ರೊದ್ದಟೂರು ಮೂಲದ ಶಾಜಹಾನ್ ಎಂಬುವವರಿಗೂ ಫೆಬ್ರವರಿ 15ರಂದು ನಿಶ್ಚಿತಾರ್ಥವಾಗಿತ್ತು. ಶಾಜಹಾನ್ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇವರಿಬ್ಬರ ಮದುವೆಯನ್ನು ಆಗಸ್ಟ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು.

ದೂರವಾದ ಭಾವಿ ಪತಿ: ನಿಶ್ಚಿತಾರ್ಥದ ನಂತರ ಇಬ್ಬರೂ ಫೋನ್ ಮತ್ತು ಮೆಸೇಜ್ ಮೂಲಕ ಸಂಪರ್ಕದಲ್ಲಿದ್ದರು. ಆದರೆ, ಮದುವೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ಶಾಜಹಾನ್ ವರ್ತನೆ ಬದಲಾಯಿತು. “ನೀನು ನನಗೆ ಇಷ್ಟವಿಲ್ಲ, ನಿನ್ನತ್ತ ನನಗೆ ಆಕರ್ಷಣೆ ಇಲ್ಲ. ನನಗೆ ಈಗಾಗಲೇ ನಾಲ್ಕು ಜನ ಗರ್ಲ್‌ಫ್ರೆಂಡ್ಸ್ ಇದ್ದಾರೆ” ಎಂದು ಶಾಜಹಾನ್ ಹೇಳಿದ್ದ ಎನ್ನಲಾಗಿದೆ. ರೆಹಾನಾ ಮೊದಲು ಇದನ್ನು ತಮಾಷೆ ಎಂದು ಭಾವಿಸಿದ್ದರು. ಆದರೆ ಆತ ಪದೇ ಪದೇ ಇದೇ ಮಾತನ್ನು ಹೇಳಲಾರಂಭಿಸಿದಾಗ ಆಕೆ ತೀವ್ರ ಖಿನ್ನತೆಗೆ ಒಳಗಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

12 ಪುಟಗಳ ಡೆತ್‌ನೋಟ್ ಪತ್ತೆ:

ರೆಹಾನಾ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರಿಗೆ 12 ಪುಟಗಳ ಆತ್ಮಹತ್ಯೆ ಪತ್ರ(Suicide Note) ಸಿಕ್ಕಿದೆ. ಇದರಲ್ಲಿ ತನ್ನ ಸಾವಿಗೆ ಕಾರಣವಾದ ಮಾನಸಿಕ ಯಾತನೆ ಮತ್ತು ಘಟನೆಗಳ ಬಗ್ಗೆ ಸುದೀರ್ಘವಾಗಿ ಬರೆದಿದ್ದಾಳೆ ಎಂದು ತಿಳಿದುಬಂದಿದೆ.

ಕುಟುಂಬದ ಗಂಭೀರ ಆರೋಪ: “ಶಾಜಹಾನ್ ಕುಡಿತದ ಚಟ ಹೊಂದಿದ್ದ ಮತ್ತು ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ. ಮನೆಯವರ ಒತ್ತಾಯಕ್ಕೆ ಮಣಿದು ಈ ಮದುವೆಗೆ ಒಪ್ಪಿಕೊಂಡಿದ್ದ ಎಂಬ ವಿಷಯ ನಮಗೆ ಮೊದಲು ತಿಳಿದಿರಲಿಲ್ಲ” ಎಂದು ರೆಹಾನಾ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಶಾಜಹಾನ್ ತಲೆಮರೆಸಿಕೊಂಡಿದ್ದು, ಚಿನ್ನ ಚೌಕ್ ಪೊಲೀಸರು ಆತನ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular