HomeLatest NewsBIG NEWS : ಡಿಜಿಟಲ್ ವಂಚನೆಗೆ 'RBI' ಬ್ರೇಕ್ : ಹೈ-ವ್ಯಾಲ್ಯೂ ಪೇಮೆಂಟ್‌ಗೆ ಬರಲಿದೆ '1...

BIG NEWS : ಡಿಜಿಟಲ್ ವಂಚನೆಗೆ ‘RBI’ ಬ್ರೇಕ್ : ಹೈ-ವ್ಯಾಲ್ಯೂ ಪೇಮೆಂಟ್‌ಗೆ ಬರಲಿದೆ ‘1 ಗಂಟೆ’ ನಿಯಮ.!

ಡಿಜಿಟಲ್ ಪಾವತಿ ವಂಚನೆಗಳಿಗೆ ಕಡಿವಾಣ ಹಾಕಲು ಆರ್ಬಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ 10,000 ರೂಪಾಯಿಗಿಂತ ಹೆಚ್ಚಿನ ಯುಪಿಐ ವರ್ಗಾವಣೆಗಳಿಗೆ ಒಂದು ಗಂಟೆಯ ‘ಕೂಲಿಂಗ್ ಪಿರಿಯಡ್’ ಅನ್ವಯವಾಗಲಿದೆ. ಅಂದರೆ, ನೀವು ಕಳುಹಿಸಿದ ದೊಡ್ಡ ಮೊತ್ತದ ಹಣ ಒಂದು ಗಂಟೆಯ ನಂತರವಷ್ಟೇ ಸ್ವೀಕೃತಿದಾರರ ಖಾತೆಗೆ ಜಮೆಯಾಗಲಿದ್ದು, ಈ ಅವಧಿಯಲ್ಲಿ ತಪ್ಪಾದ ಅಥವಾ ವಂಚನೆಯ ಪಾವತಿಗಳನ್ನು ರದ್ದುಗೊಳಿಸಲು ಗ್ರಾಹಕರಿಗೆ ಅವಕಾಶ ಸಿಗಲಿದೆ.

ಹೌದು. ಡಿಜಿಟಲ್ ಪಾವತಿ ವಂಚನೆಗಳಿಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಯುಪಿಐ (UPI) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಉದ್ದೇಶಿಸಿದೆ ಡಿಜಿಟಲ್ ಪೇಮೆಂಟ್ ವಂಚನೆಗಳನ್ನು ತಡೆಗಟ್ಟಲು ಆರ್ಬಿಐ ಹೊಸ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಇನ್ಮುಂದೆ ಯುಪಿಐ ಮೂಲಕ 10,000 ರೂಪಾಯಿಗಿಂತ ಹೆಚ್ಚಿನ ಹಣ ವರ್ಗಾವಣೆ ಮಾಡಿದರೆ ಅದು ತಕ್ಷಣ ಕ್ರೆಡಿಟ್ ಆಗುವುದಿಲ್ಲ. ಬದಲಿಗೆ ಒಂದು ಗಂಟೆಯ ಕಾಲ ಬ್ಯಾಂಕ್ ಆ ಹಣವನ್ನು ತಡೆಹಿಡಿಯಲಿದ್ದು, ಗ್ರಾಹಕರಿಗೆ ತಪ್ಪಾದ ವರ್ಗಾವಣೆಗಳನ್ನು ರದ್ದುಗೊಳಿಸಲು ಈ ಸಮಯ ಸಹಕಾರಿಯಾಗಲಿದೆ.

1 ಗಂಟೆಯ ವಿಳಂಬ: ಇನ್ಮುಂದೆ 10,000 ರೂ.ಗಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳನ್ನು ಮಾಡಿದಾಗ, ಹಣವು ತಕ್ಷಣವೇ ಸ್ವೀಕೃತಿದಾರರ ಖಾತೆಗೆ ಜಮೆಯಾಗುವುದಿಲ್ಲ. ಬದಲಿಗೆ, ಬ್ಯಾಂಕ್ ಈ ಹಣವನ್ನು ಒಂದು ಗಂಟೆಯ ಕಾಲ ತಡೆಹಿಡಿಯುತ್ತದೆ (Hold).

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರದ್ದು ಮಾಡಲು ಅವಕಾಶ: ಒಂದು ವೇಳೆ ತಪ್ಪಾಗಿ ಅಥವಾ ಗೊತ್ತಿಲ್ಲದೆ ಹಣ ವರ್ಗಾವಣೆಯಾಗಿದ್ದರೆ, ಆ ಒಂದು ಗಂಟೆಯ ಕಾಲಾವಕಾಶದೊಳಗೆ ಗ್ರಾಹಕರು ಪಾವತಿಯನ್ನು ರದ್ದುಗೊಳಿಸಲು ಅವಕಾಶವಿರುತ್ತದೆ.

ವಂಚನೆ ತಡೆ: ಕಳೆದ ವರ್ಷ ದೇಶದಲ್ಲಿ ಸುಮಾರು 22,931 ಕೋಟಿ ರೂ.ಗಳಷ್ಟು ಡಿಜಿಟಲ್ ವಂಚನೆ ಪ್ರಕರಣಗಳು ನಡೆದಿವೆ. ಅದರಲ್ಲೂ ವಿಶೇಷವಾಗಿ 10 ಸಾವಿರ ರೂ. ಮೇಲ್ಪಟ್ಟ ವರ್ಗಾವಣೆಗಳಲ್ಲಿ ಹೆಚ್ಚು ವಂಚನೆಗಳು ವರದಿಯಾಗುತ್ತಿರುವುದರಿಂದ ಆರ್ಬಿಐ ಈ ಕ್ರಮಕ್ಕೆ ಮುಂದಾಗಿದೆ.

ಯಾವುದಕ್ಕೆ ಅನ್ವಯಿಸುವುದಿಲ್ಲ? ಈ ನಿಯಮವು ದೈನಂದಿನ ಅಗತ್ಯ ಪಾವತಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ:
• ಅಂಗಡಿಗಳಲ್ಲಿನ ಸಾಮಾನ್ಯ ಖರೀದಿ ಪಾವತಿಗಳು.
• EMI ಪಾವತಿಗಳು.
• ಮ್ಯೂಚುವಲ್ ಫಂಡ್ SIP ಗಳು.
• LIC ಪ್ರೀಮಿಯಂ ಮತ್ತು ಇತರ ಸಬ್ಸ್ಕ್ರಿಪ್ಷನ್ಗಳು.

ಬಳಕೆದಾರರು ತಾವು ನಿಯಮಿತವಾಗಿ ಹಣ ವರ್ಗಾವಣೆ ಮಾಡುವ ವ್ಯಕ್ತಿಗಳನ್ನು ‘ವಿಶ್ವಾಸಾರ್ಹ ಪಟ್ಟಿ’ಗೆ (Trusted List) ಸೇರಿಸುವ ಮೂಲಕ ಅವರಿಗೆ ಯಾವುದೇ ಅಡೆತಡೆ ಇಲ್ಲದೆ ಹಣ ಕಳುಹಿಸಲು ಅವಕಾಶವಿರುತ್ತದೆ. ಈ ಹೊಸ ನಿಯಮವು ಮುಖ್ಯವಾಗಿ ಅನುಮಾನಾಸ್ಪದ ಮತ್ತು ಅಪರಿಚಿತ ಖಾತೆಗಳಿಗೆ ಮಾಡುವ ದೊಡ್ಡ ಮೊತ್ತದ ವರ್ಗಾವಣೆಗಳಿಗೆ ಅನ್ವಯವಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular