HomeLatest News"ಸಿಕ್ಸ್ಟೀನ್.. ಎಫ್ಸ್ಟೀನ್.." ಮೋದಿ ವೀಕ್ ಮಾತು ಕೇಳಿ ದಿನಾಂಕ ನೋಡಿದ್ರೆ 16, ಅದರಲ್ಲೇ ಎಲ್ಲ ಅಡಗಿದೆ...

“ಸಿಕ್ಸ್ಟೀನ್.. ಎಫ್ಸ್ಟೀನ್..” ಮೋದಿ ವೀಕ್ ಮಾತು ಕೇಳಿ ದಿನಾಂಕ ನೋಡಿದ್ರೆ 16, ಅದರಲ್ಲೇ ಎಲ್ಲ ಅಡಗಿದೆ ಎಂದು ತಲೆಗೆ ಹುಳ ಬಿಟ್ಟ ರಾಗಾ!

ನಿನ್ನೆ ( ಏಪ್ರಿಲ್ 17 ) ಕೇಂದ್ರ ಸರ್ಕಾರ ಮಂಡಿಸಲು ಮುಂದಾಗಿದ್ದ ಮೂರು ಮಸೂದೆಗಳು ವಿಫಲವಾದವು. ಇದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆದ ಮೊದಲ ಮಸೂದೆ ಸೋಲು.

ಹೀಗೆ ಎನ್‌ಡಿಎ ಮಸೂದೆ ವಿರುದ್ಧ ಜಯ ಗಳಿಸಿದ ಬಳಿಕ ಸದನದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸದನದಲ್ಲಿದ್ದ ಸಂಸದರು ಹಾಗೂ ದೇಶದ ಜನತೆ ತಲೆಗೆ ನಂಬರ್ 16 ಎಂಬ ಹುಳವನ್ನು ಬಿಟ್ಟಿದ್ದಾರೆ.

‘ನಿನ್ನೆ ಪ್ರಧಾನಮಂತ್ರಿ ಮಾತನಾಡುವುದನ್ನು ನಾನು ನೋಡುತ್ತಿದ್ದೆ. ಕಡಿಮೆ ಶಕ್ತಿ ಜತೆಗೆ ಭಗ್ನರಾಗಿದ್ದರು. ಮೋದಿ ತಮ್ಮ ಹೇಳಿಕೆಯಲ್ಲಿ ತೊಡಗಿಸಿಕೊಳ್ಳಲು ಆಗಲೇ ಇಲ್ಲ. ಏಕೆಂದರೆ ಅವರು ಈ ಮಸೂದೆಯನ್ನು ಪಾಸ್ ಮಾಡುವ ಯೋಚನೆಯಲ್ಲಿದ್ದರು ಹಾಗೂ ಇದು ಪಾಸ್ ಆಗುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಹಾಗಾಗಿಯೇ ಆತಂಕದ ಪ್ರತಿಕ್ರಿಯೆ ಕಾಣುತ್ತಿತ್ತು’ ಎಂದು ರಾಹುಲ್ ಗಾಂಧಿ ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೂ ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ ‘ಹೀಗಾಗಿ ನಾನು ಅವರನ್ನೇ ನೋಡುತ್ತಾ ನನ್ನ ಮೊಬೈಲ್‌ನಲ್ಲಿ ದಿನಾಂಕ ನೋಡಿದೆ, ಅಲ್ಲಿ ಏಪ್ರಿಲ್ 16 ಎಂದಿತ್ತು. ಆಗ ನನಗೆ ಓ ದೇವರೇ, ಏನಿದು? ನಂಬರ್ 16! ಈ 16ರಲ್ಲೇ ಒಗಟಿಗೆ ಎಲ್ಲ ಉತ್ತರವೂ ಅಡಗಿದೆ. ಎಲ್ಲವೂ ನಂಬರ್ 16ರಲ್ಲಿದೆ’ ಎಂದು ಸದನದಲ್ಲಿದ್ದವರು ಹಾಗೂ ವೀಕ್ಷಕರಲ್ಲಿ ಕುತೂಹಲ ಹಾಗೂ ಆಶ್ಚರ್ಯ ಮೂಡಿಸಿದರು.

ಅಲ್ಲದೇ ‘ನಿಮ್ಮಲ್ಲಿ ನಾನು ಹೇಳುತ್ತಿರುವುದು ಯಾರಿಗಾದರೂ ಅರ್ಥವಾದರೆ ನನಗೆ ಮೆಸೇಜ್ ಮಾಡಬಹುದು ಅಥವಾ ಟ್ವಿಟರ್‌ನಲ್ಲಿ ತಿಳಿಸಬಹುದು. ನಿಮ್ಮ ಸಮಸ್ಯೆಗಳಿಗೆ ಅದೇ ಉತ್ತರ ಹಾಗೂ ಅದನ್ನು ನೀವು ಶೀಘ್ರದಲ್ಲೇ ಪತ್ತೆಹಚ್ಚುತ್ತೀರ. ಅದು ನಂಬರ್ 16ರಲ್ಲಿ ಅಡಗಿದೆ’ ಎಂದೂ ಸಹ ರಾಗಾ ತಿಳಿಸಿದರು.

ಈ ಹೇಳಿಕೆ ಹೊರಬೀಳುತ್ತಿದ್ದಂತೆ ಇಂಡಿಯಾ ಮೈತ್ರಿಕೂಟದ ಸಂಸದರು ಟೇಬಲ್ ಕುಟ್ಟಿ ಕೂಗಾಡಿದರೆ, ಎನ್‌ಡಿಎ ಸಂಸದರು ಮೌನಕ್ಕೆ ಶರಣಾದರು. ಇತ್ತ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಾವಿರಾರು ಟ್ವೀಟ್‌ಗಳು ಹರಿದಾಡಿದ್ದು, ಇಂಡಿಯಾ ನ್ಯಾಷನಲ್ ಕಾಂಗ್ರೆಸ್ ಸಹ ತನ್ನ ಅಧಿಕೃತ ಖಾತೆಯಲ್ಲಿ ಈ ಟ್ವೀಟ್ ಹಂಚಿಕೊಂಡು, ರಾಗಾ ನೀಡಿದ ಒಗಟನ್ನು ಉಲ್ಲೇಖಿಸಿ ಸಿಕ್ಸ್ಟೀನ್ ಎಫ್ಸ್ಟೀನ್ ರೀತಿ ಕೇಳಿಸುತ್ತಿದೆ ಅಲ್ಲವೇ? ಎಂದು ಬರೆದುಕೊಂಡು ಚರ್ಚೆ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.

ಇನ್ನು ನೆಟ್ಟಿಗರು ಹಲವಾರು ಊಹೆಗಳನ್ನು ತಮ್ಮ ಖಾತೆಗಳಲ್ಲಿ ಬರೆದುಕೊಳ್ಳುತ್ತಿದ್ದು, ಒಗಟು ಬಿಡಿಸುವ ಯತ್ನದಲ್ಲಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular