ಬೆಂಗಳೂರು: ಕಳೆದ ಮೂರು ದಿನಗಳಿಂದ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಚಿನ್ನದ ಬೆಲೆ ಓಟಕ್ಕೆ ಶುಕ್ರವಾರ ಬ್ರೇಕ್ ಬಿದ್ದಿದೆ. ಇರಾನ್ ಯುದ್ಧದ ಆತಂಕ ತುಸು ತಗ್ಗಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತದ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ದರ ಇಳಿಕೆಯಾಗಿದೆ.ಇಂದು ಚಿನ್ನದ ಬೆಲೆ ಪ್ರತಿ ಗ್ರಾಂಗೆ 125 ರೂ. ಗಳಷ್ಟು ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲೂ ಭಾರಿ ಇಳಿಕೆ ಕಂಡುಬಂದಿದೆ.
ಇಂದಿನ ಚಿನ್ನದ ದರ (10 ಗ್ರಾಂ):
22 ಕ್ಯಾರಟ್ (ಆಭರಣ ಚಿನ್ನ): ₹1,41,350
24 ಕ್ಯಾರಟ್ (ಅಪರಂಜಿ ಚಿನ್ನ): ₹1,54,200
ಬೆಳ್ಳಿ ಬೆಲೆ ಎಷ್ಟು?
ಬಂಗಾರದ ಹಾದಿಯಲ್ಲೇ ಸಾಗಿರುವ ಬೆಳ್ಳಿ ಕೂಡ ಇಂದು ಅಗ್ಗವಾಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 5,000 ರೂಪಾಯಿ ಇಳಿಕೆಯಾಗಿದ್ದು, ಗ್ರಾಹಕರಿಗೆ ದೊಡ್ಡ ಮಟ್ಟದ ನಿರಾಳ ತಂದಿದೆ
ಇಳಿಕೆಗೆ ಕಾರಣವೇನು?
ಸತತ ಮೂರು ದಿನಗಳಲ್ಲಿ ಸುಮಾರು 300 ರೂ.ಗಳಷ್ಟು ಏರಿಕೆ ಕಂಡಿದ್ದ ಚಿನ್ನ, ಅಂತರಾಷ್ಟ್ರೀಯ ಮಟ್ಟದಲ್ಲಿ ಇರಾನ್-ಇಸ್ರೇಲ್ ಸಂಘರ್ಷ ತಿಳಿಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆ ಕುಸಿತ ಕಂಡಿದೆ. ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಗಿಂತ ಮಾರುಕಟ್ಟೆಯ ಸ್ಥಿರತೆಯತ್ತ ಗಮನ ಹರಿಸುತ್ತಿರುವುದು ಬೆಲೆ ಇಳಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,54,200
ನಾಗ್ಪುರ ₹1,54,200
ಮುಂಬೈ ₹1,54,200
ಚೆನ್ನೈ ₹1,55,020
ಕೋಲ್ಕತ್ತಾ ₹1,54,200
ಪಾಟ್ನಾ ₹1,54,250
ಸೂರತ್ ₹1,54,250
ಚಂಡೀಗಢ ₹1,54,350
ಲಕ್ನೋ ₹1,54,350

