HomeEntertainmentಮಾನುಷಿ ಚಿಲ್ಲರ್ ಗ್ಲಾಮರ್ ಅವತಾರ: ಫ್ಯಾನ್ಸ್ ನಿದ್ದೆ ಕದ್ದ ಹೊಸ ಲುಕ್

ಮಾನುಷಿ ಚಿಲ್ಲರ್ ಗ್ಲಾಮರ್ ಅವತಾರ: ಫ್ಯಾನ್ಸ್ ನಿದ್ದೆ ಕದ್ದ ಹೊಸ ಲುಕ್

ವಿಶ್ವ ಸುಂದರಿ ಪಟ್ಟ ಗೆದ್ದ ಮಾನುಷಿ ಚಿಲ್ಲರ್ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಸದ್ಯ ಭಾರಿ ಕಸರತ್ತು ನಡೆಸುತ್ತಿದ್ದಾರೆ. ಐಶ್ವರ್ಯಾ ರೈ ಮತ್ತು ಪ್ರಿಯಾಂಕಾ ಚೋಪ್ರಾ ಅವರಂತೆ ಮಾನುಷಿ ಕೂಡ ಬೆಳ್ಳಿತೆರೆಯ ಮೇಲೆ ಮಿಂಚುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಈ ಬೆಡಗಿಗೆ ಸಿನಿಮಾದಲ್ಲಿ ಮಾತ್ರ ಹೇಳಿಕೊಳ್ಳುವಂತಹ ಯಶಸ್ಸು ಸಿಗುತ್ತಿಲ್ಲ.

ಮಾನುಷಿ ಚಿಲ್ಲರ್ ನಟಿಸಿದ ಆರಂಭಿಕ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿವೆ. ಬಹುನಿರೀಕ್ಷೆಯೊಂದಿಗೆ ತೆಲುಗಿನಲ್ಲಿ ತೆರೆಕಂಡಿದ್ದ ಆಪರೇಷನ್ ವ್ಯಾಲೆಂಟೈನ್ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಹಿಂದಿಯಲ್ಲಿ ನಟಿಸಿದ ಬಡೇ ಮಿಯಾ ಚೋಟೆ ಮಿಯಾ ಚಿತ್ರ ಕೂಡ ಇವರಿಗೆ ಅದೃಷ್ಟ ತಂದುಕೊಡಲಿಲ್ಲ. ಸದ್ಯ 2026ರಲ್ಲಿ ಮಾನುಷಿ ಕೈಯಲ್ಲಿ ದೊಡ್ಡ ಪ್ರಾಜೆಕ್ಟ್ ಗಳಿಲ್ಲದ ಕಾರಣ ಅವರು ಜಾಹೀರಾತು ಮತ್ತು ಬ್ರ್ಯಾಂಡ್ ಪ್ರಮೋಷನ್ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ.

ಚಿತ್ರಗಳಲ್ಲಿ ಅವಕಾಶಗಳ ಕೊರತೆ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಮಾನುಷಿ ಸದಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಈ ಸುಂದರಿ ಹಂಚಿಕೊಂಡಿರುವ ಫೋಟೋಗಳು ಅಂತರ್ಜಾಲದಲ್ಲಿ ಬೆಂಕಿ ಹಚ್ಚಿವೆ. ಈ ಹಿಂದೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾನುಷಿ ಈಗ ತಮ್ಮ ಪಥ ಬದಲಿಸಿದ್ದಾರೆ. ನೀಲಿ ಬಣ್ಣದ ಬಿಹಿನಿ ತೊಟ್ಟು ಪೋಸ್ ನೀಡಿರುವ ಅವರು ಗ್ಲಾಮರ್ ಮಿತಿ ಮೀರಿಸಿದ್ದಾರೆ. ತಮ್ಮ ಬೋಲ್ಡ್ ಲುಕ್ ಮೂಲಕ ಯುವಕರ ನಿದ್ದೆ ಕೆಡಿಸಿರುವ ಮಾನುಷಿ ಚಿತ್ರರಂಗದ ನಿರ್ಮಾಪಕರ ಗಮನ ಸೆಳೆಯಲು ಈ ಹೊಸ ತಂತ್ರ ಅನುಸರಿಸುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇವಲ ಸೌಂದರ್ಯವಿದ್ದರೆ ಚಿತ್ರರಂಗದಲ್ಲಿ ಗೆಲುವು ಸಾಧ್ಯವಿಲ್ಲ ಎಂಬುದು ಮಾನುಷಿ ಅವರಿಗೆ ಈಗಾಗಲೇ ಮನವರಿಕೆಯಾಗಿದೆ. ಹೀಗಾಗಿ ಅವರು ಗ್ಲಾಮರ್ ಜೊತೆಗೆ ತಮಗೆ ಬೇಕಾದ ಒಂದು ಭರ್ಜರಿ ಹಿಟ್ ಗಾಗಿ ಕಾಯುತ್ತಿದ್ದಾರೆ. ಸದ್ಯದ ಈ ಹಾಟ್ ಫೋಟೋ ಶೂಟ್ ಗಳು ಅವರಿಗೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅವಕಾಶಗಳನ್ನು ತಂದುಕೊಡುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular