HomeKarnatakaರಾಜ್ಯ ನ್ಯಾಯಾಂಗದಲ್ಲಿ ಮಹಾ ಸರ್ಜರಿ: 114 ಜಿಲ್ಲಾ ನ್ಯಾಯಾಧೀಶರು ಸೇರಿ 368 ಜಡ್ಜ್‌ಗಳ ಬೃಹತ್ ವರ್ಗಾವಣೆ...

ರಾಜ್ಯ ನ್ಯಾಯಾಂಗದಲ್ಲಿ ಮಹಾ ಸರ್ಜರಿ: 114 ಜಿಲ್ಲಾ ನ್ಯಾಯಾಧೀಶರು ಸೇರಿ 368 ಜಡ್ಜ್‌ಗಳ ಬೃಹತ್ ವರ್ಗಾವಣೆ ಆದೇಶ

ಬೆಂಗಳೂರು: ಸಾರ್ವಜನಿಕ ಹಿತದೃಷ್ಟಿ ಹಾಗೂ ಆಡಳಿತಾತ್ಮಕ ಸುಧಾರಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯದಾದ್ಯಂತ ಬೃಹತ್ ಪ್ರಮಾಣದಲ್ಲಿ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಏಕಕಾಲಕ್ಕೆ ಒಟ್ಟು 368 ನ್ಯಾಯಾಧೀಶರನ್ನು ವರ್ಗಾಯಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲಾಗಿದೆ. ಈ ಎಲ್ಲಾ ವರ್ಗಾವಣೆಗಳು ಜೂನ್ 1, 2026 ರಿಂದ ಜಾರಿಗೆ ಬರಲಿವೆ.

ಯಾರೆಲ್ಲಾ ವರ್ಗಾವಣೆ?

ಜಿಲ್ಲಾ ನ್ಯಾಯಾಧೀಶರು: 114

ಹಿರಿಯ ಸಿವಿಲ್ ನ್ಯಾಯಾಧೀಶರು: 115

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿವಿಲ್ ನ್ಯಾಯಾಧೀಶರು: 139

ಒಟ್ಟು: 368

ಗಮನ ಸೆಳೆದ ಸಂತೋಷ್ ಗಜಾನನ ಭಟ್ ವರ್ಗಾವಣೆ:


ವಿಜಯಪುರದ ವಿನಯ್ ಕುಲಕರ್ಣಿ ಮತ್ತು ಇತ್ತೀಚಿನ ಪ್ರಜ್ವಲ್ ರೇವಣ್ಣ ಪ್ರಕರಣದಂತಹ ಹಲವು ಹೈಪ್ರೋಫೈಲ್ ಕೇಸ್‌ಗಳಲ್ಲಿ ದಿಟ್ಟತನದಿಂದ ತೀರ್ಪು ನೀಡಿ ಅಪರಾಧಿಗಳನ್ನು ಜೈಲಿಗಟ್ಟಿದ್ದ ಸಂತೋಷ್ ಗಜಾನನ ಭಟ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರು ಪ್ರಸ್ತುತ ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರಾಗಿ (OOD) ನೇಮಕಗೊಂಡಿದ್ದಾರೆ.

ಕರ್ನಾಟಕ ನ್ಯಾಯಾಧೀಶರ ಪ್ರಮುಖ ವರ್ಗಾವಣೆ ಪಟ್ಟಿ – 2026

ನ್ಯಾಯಾಧೀಶರ ಹೆಸರುಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳವರ್ಗಾವಣೆಗೊಂಡ ಸ್ಥಳ
ಕೆ.ಎಸ್. ಭರತ್ ಕುಮಾರ್ಒಒಡಿ, ರಿಜಿಸ್ಟ್ರಾರ್ ಜನರಲ್, ಹೈಕೋರ್ಟ್, ಬೆಂಗಳೂರುಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು
ನೇರಳೆ ವೀರಭದ್ರಯ್ಯ ವಿಜಯ್ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಾಗಲಕೋಟೆಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ
ಮಾರುತಿ ಬಗಡೆಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ರಾಯಚೂರುಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಡಗು-ಮಡಿಕೇರಿ
ಸಂತೋಷ್ ಗಜಾನನ ಭಟ್81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರುಒಒಡಿ, ನಿರ್ದೇಶಕರು, ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಬೆಂಗಳೂರು
ಶಿವಪ್ರಸಾದ್ ಕೆ.ಬಿ.1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಮಂಡ್ಯ81ನೇ ಹೆಚ್ಚುವರಿ ಸಿಟಿ ಸಿವಿಲ್ (MP/MLA ವಿಶೇಷ ನ್ಯಾಯಾಲಯ), ಬೆಂಗಳೂರು
ಸುಧೀಂದ್ರನಾಥ್ ಎಸ್.ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಬೆಂಗಳೂರುಒಒಡಿ, ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್, ಹೈಕೋರ್ಟ್ ಪೀಠ, ಧಾರವಾಡ

ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿ ಕೆ.ಎಸ್. ಭರತ್ ಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಗೆಯೇ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ (MP/MLA Court) ಶಿವಪ್ರಸಾದ್ ಕೆ.ಬಿ. ಅವರನ್ನು ನೇಮಿಸಲಾಗಿದೆ. ಇನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಆಗಿ ಎಂ. ಚಂದ್ರಶೇಖರ್ ರೆಡ್ಡಿ ಕಾರ್ಯನಿರ್ವಹಿಸಲಿದ್ದಾರೆ.ಈ ಎಲ್ಲಾ ವರ್ಗಾವಣೆ ಆದೇಶಗಳು 2026ರ ಜೂನ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ. ಅಲ್ಲಿಯವರೆಗೆ ಪ್ರಸ್ತುತ ನ್ಯಾಯಾಧೀಶರೇ ಆಯಾ ಪೀಠಗಳಲ್ಲಿ ವಿಚಾರಣೆ ಮುಂದುವರಿಸಲಿದ್ದಾರೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular