ಯುವಕನೊಬ್ಬ ಪಾರ್ಕ್ನಲ್ಲಿ ತನ್ನ ಪ್ರೇಯಸಿಯೊಂದಿಗೆ ಏಕಾಂತವಾಗಿ ಸಮಯ ಕಳೆಯುತ್ತಿದ್ದ. ಕೈಗಳನ್ನು ಜೇಬಿನಲ್ಲಿಟ್ಟುಕೊಂಡು ಸ್ಟೈಲ್ ಆಗಿ ಮಾತನಾಡುತ್ತಿದ್ದ. ಸರಿ ಅದೇ ಹೊತ್ತಿಗೆ ಅಲ್ಲಿಗೆ ಆತನ ಪತ್ನಿ ಎಂಟ್ರಿ ಕೊಟ್ಟಿದ್ದಾಳೆ.
ಅಲ್ಲಿ ಕೇವಲ ಮಾತಿನ ಚಕಮಕಿ ಮಾತ್ರ ನಡೆಯಲಿಲ್ಲ, ಬದಲಿಗೆ ಪತ್ನಿಯು ತನ್ನ ಪತಿಯ ಪ್ರೇಯಸಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಯುವಕ ತನ್ನ ಪ್ರೇಯಸಿಯನ್ನು ಉಳಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇಂತಹದೊಂದು ರೋಚಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಏನಿದು ಘಟನೆ? ವೈರಲ್ ವಿಡಿಯೋದಲ್ಲಿ, ಹುಡುಗ ಮತ್ತು ಹುಡುಗಿ ಪಾರ್ಕ್ ಸಮೀಪದ ಖಾಲಿ ಜಾಗದಲ್ಲಿ ಏಕಾಂತವಾಗಿ ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಮತ್ತೊಬ್ಬ ಮಹಿಳೆ ಅಲ್ಲಿಗೆ ಆಗಮಿಸುತ್ತಾಳೆ. ಇಬ್ಬರನ್ನು ಜೊತೆಯಲ್ಲಿ ನೋಡಿ ಆಕೆ ಕೋಪಗೊಂಡು ಜಗಳ ಆರಂಭಿಸುತ್ತಾಳೆ. ನಂತರ ತನ್ನ ಪಾದರಕ್ಷೆಯನ್ನು (ಶೂ) ತೆಗೆದು ಹುಡುಗಿಯ ಮೇಲೆ ದಾಳಿ ಮಾಡುತ್ತಾಳೆ. ಹುಡುಗ ಅದನ್ನು ತಡೆಯಲು ಹೋದಾಗ ಆತನಿಗೂ ಏಟು ಬೀಳುತ್ತದೆ. ವಿಡಿಯೋದಲ್ಲಿರುವ ಯುವಕ ವಿವಾಹಿತನಾಗಿದ್ದು, ಜೊತೆಗಿದ್ದಾಕೆ ಆತನ ಪ್ರೇಯಸಿ ಹಾಗೂ ಅಲ್ಲಿಗೆ ಬಂದು ದಾಳಿ ಮಾಡಿದಾಕೆ ಆತನ ಪತ್ನಿ ಎಂದು ವರದಿಯಾಗಿದೆ. ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದು ಪತ್ನಿ ಈ ರೀತಿ ಆಕ್ರೋಶ ಹೊರಹಾಕಿದ್ದಾಳೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್: ‘ಘರ್ ಕೆ ಕಲೇಶ್’ (Ghar Ka Kalesh) ಎಂಬ ಎಕ್ಸ್ (X) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. “ಈ ದಿನಗಳಲ್ಲಿ ಅಕ್ರಮ ಸಂಬಂಧಗಳು ಎಲ್ಲೆಡೆ ಹೆಚ್ಚಾಗಿವೆ, ಸೋಶಿಯಲ್ ಮೀಡಿಯಾ ತೆರೆಯುವುದೇ ಕಷ್ಟವಾಗಿದೆ” ಎಂದು ಒಬ್ಬರು ಬರೆದರೆ, “ಪಾಕಿಸ್ತಾನಿ ಯುವಕ ಅಕ್ರಮ ಸಂಬಂಧದ ಪರಿಣಾಮ ಎದುರಿಸಬೇಕಾಯಿತು” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

