HomeLatest Newsಪ್ರಯಾಣಿಕರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಪಶ್ಚಿಮ ಬಂಗಾಳದ ಅಲಿಪುರ್​ ದ್ವಾರ್ ನಡುವೆ ವಿಶೇಷ ಎಕ್ಸ್​ಪ್ರೆಸ್ ರೈಲು ಸಂಚಾರ

ಪ್ರಯಾಣಿಕರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಪಶ್ಚಿಮ ಬಂಗಾಳದ ಅಲಿಪುರ್​ ದ್ವಾರ್ ನಡುವೆ ವಿಶೇಷ ಎಕ್ಸ್​ಪ್ರೆಸ್ ರೈಲು ಸಂಚಾರ

ಹುಬ್ಬಳ್ಳಿ: ಪ್ರಯಾಣಿಕರಿಗೆ ಗುಡ್ ನೈಋತ್ಯ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಬೇಸಿಗೆ ರಜಾ ಹಿನ್ನೆಲೆಯಲ್ಲಿ ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಪಶ್ಚಿಮ ಬಂಗಾಳದ ಅಲಿಪುರ್​ ದ್ವಾರ್ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚರಿಸಲಿದೆ.

ಹುಬ್ಬಳ್ಳಿ-ಅಲಿಪುರ್ ದ್ವಾರ್ ನಡುವೆ ಬೆಂಗಳೂರಿನ ಎಸ್ಎಂವಿಟಿ ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಒಂದು ಟ್ರಿಪ್ ವಿಶೇಷ ಎಕ್ಸ್​ಪ್ರೆಸ್ ರೈಲು ಕಾರ್ಯಾಚರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಸಂಖ್ಯೆ 07323 ಹುಬ್ಬಳ್ಳಿ – ಅಲಿಪುರ್ ದ್ವಾರ್ ವಿಶೇಷ ಎಕ್ಸ್ ಪ್ರೆಸ್ ರೈಲು 2026ರ ಏಪ್ರಿಲ್ 15ರ ಬುಧವಾರ ರಾತ್ರಿ 11:15ಕ್ಕೆ ಹುಬ್ಬಳ್ಳಿಯಿಂದ ಹೊರಟು, ಶನಿವಾರ ಮಧ್ಯಾಹ್ನ 01:50ಕ್ಕೆ ಅಲಿಪುರ್ ದ್ವಾರ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ಸಂಖ್ಯೆ 07324 ಅಲಿಪುರ್ ದ್ವಾರ್ – ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 19ರ ಭಾನುವಾರ ಸಂಜೆ 04:25ಕ್ಕೆ ಅಲಿಪುರ್ ದ್ವಾರ್​ದಿಂದ ಹೊರಟು, ಬುಧವಾರ ಬೆಳಗ್ಗೆ 09:45ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ಸೇರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ರೈಲು ಎರಡೂ ಮಾರ್ಗಗಳಲ್ಲಿ ದಾವಣಗೆರೆ, ಅರಸೀಕೆರೆ, ತುಮಕೂರು, ಎಸ್ಎಂವಿಟಿ ಬೆಂಗಳೂರು, ಯಲಹಂಕ, ಧರ್ಮಾವರಂ, ಡೋನ್, ನಂದ್ಯಾಲ, ಗುಂಟೂರು, ವಿಜಯವಾಡ, ರಾಜಮಂಡ್ರಿ, ಕೊಟ್ಟವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಾಕ್, ಖರಗ್ಪುರ, ಅಂದುಲ್, ದನಕುಣಿ, ಬರ್ದ್ಧಮಾನ್, ಬೋಲ್ಪುರ್ (ಶಾಂತಿನಿಕೇತನ), ರಾಂಪುರ್ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಬರಸೋಯಿ, ಕಿಶನ್ ಗಂಜ್, ನ್ಯೂ ಜಲ್ಪೈಗುರಿ, ಸಿಲಿಗುರಿ, ಬಿನ್ನಗುರಿ ಮತ್ತು ಹಸಿಮಾರಾ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

20 ಎಲ್.ಹೆಚ್.ಬಿ ಬೋಗಿಗಳನ್ನು ಹೊಂದಿರುವ ಈ ರೈಲು, ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಕ್ಲಾಸ್, ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ಲಗೇಜ್ ಮತ್ತು ಬ್ರೇಕ್ ವ್ಯಾನ್ ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular