HomeLatest Newsನಟ ವಿಜಯ್’ಗೆ ಹೂಚೆಂಡು ಎಸೆದ ಅಭಿಮಾನಿ ; 'ಅಯ್ಯೋ ಬಾಂಬ್' ಎಂದು ಭಯಬಿದ್ದ ದಳಪತಿ |WATCH...

ನಟ ವಿಜಯ್’ಗೆ ಹೂಚೆಂಡು ಎಸೆದ ಅಭಿಮಾನಿ ; ‘ಅಯ್ಯೋ ಬಾಂಬ್’ ಎಂದು ಭಯಬಿದ್ದ ದಳಪತಿ |WATCH VIDEO

ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಪ್ರಚಾರದ ಭಾಗವಾಗಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಅವರು ನಡೆಸುತ್ತಿದ್ದ ಸೈಕಲ್ ರ್ಯಾಲಿ  ವೇಳೆ ಆತಂಕಕಾರಿ ಘಟನೆಯೊಂದು ನಡೆದಿದೆ.

ಕನ್ಯಾಕುಮಾರಿಯಲ್ಲಿ ವಿಜಯ್ ಅವರು  ಸೈಕಲ್ ರ್ಯಾಲಿ   ನಡೆಸುತ್ತಿದ್ದಾಗ, ರಸ್ತೆಯ ಬದಿಯಲ್ಲಿದ್ದ ಅಭಿಮಾನಿಯೊಬ್ಬರು ವಿಜಯ್ ಅವರತ್ತ ಹೂವಿನ ಚೆಂಡನ್ನು (Flower Bomb) ಎಸೆದಿದ್ದಾರೆ.ಹಠಾತ್ತಾಗಿ ತನ್ನತ್ತ ಯಾವುದೋ ವಸ್ತು ಬರುವುದನ್ನು ಕಂಡ ವಿಜಯ್, ಅದು ಬಾಂಬ್ ಇರಬಹುದೇನೋ ಎಂದು ಗಾಬರಿಗೊಂಡು ತಮ್ಮ ಸೈಕಲ್ ಸಮತೋಲನ ಕಳೆದುಕೊಂಡರು. ಕ್ಷಣಕಾಲ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ತಮ್ಮ ಸೈಕಲ್ ಪ್ರಚಾರದ ಸಮಯದಲ್ಲಿ, ಅಭಿಮಾನಿಯೊಬ್ಬರು ಹೂಮಳೆ ಸುರಿಸಲು ಬಂದಾಗ ವಿಜಯ್ ಅವರು ಇದ್ದಕ್ಕಿದ್ದಂತೆ ತಮ್ಮ ಸೈಕಲ್ ಅನ್ನು ಎಸೆದು, ಅದು ಬಾಂಬ್ ಎಂಬಂತೆ ಅಲ್ಲಿಂದ ಹಿಂದಕ್ಕೆ ಓಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರ್ಯಾಲಿಯಲ್ಲಿ ವಿಪರೀತ ಜನಸಂದಣಿ ಸೇರಿದ್ದರಿಂದ ಮತ್ತು ಈ ಆತಂಕಕಾರಿ ಘಟನೆಯಿಂದಾಗಿ, ವಿಜಯ್ ಅವರು ಸೈಕಲ್ ಸವಾರಿಯನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ಪ್ರಚಾರದ ವಾಹನಕ್ಕೆ ಮರಳಿದರು.2026ರ ತಮಿಳುನಾಡು ಚುನಾವಣೆಗೆ ವಿಜಯ್ ಭರ್ಜರಿ ತಯಾರಿ ನಡೆಸುತ್ತಿದ್ದು, ಜನರೊಂದಿಗೆ ನೇರವಾಗಿ ಬೆರೆಯಲು ಸೈಕಲ್ ರ್ಯಾಲಿ  ಹಮ್ಮಿಕೊಂಡಿದ್ದರು. ಆದರೆ ಭದ್ರತಾ ದೃಷ್ಟಿಯಿಂದ ಮತ್ತು ಅನಿಯಂತ್ರಿತ ಜನಸಂದಣಿಯಿಂದಾಗಿ ರ್ಯಾಯನ್ನು ಮೊಟಕುಗೊಳಿಸಬೇಕಾಯಿತು. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular