HomeLatest NewsIPL 2026: ಬ್ಯಾಟ್ ಮಾಡಲು ಹೆದರುವಂತಹ ಬೌನ್ಸರ್ ಹಾಕಿ ಹಾರ್ದಿಕ್‌ಗೆ ಖಡಕ್ ಲುಕ್ ಕೊಟ್ಟ ಕೃನಾಲ್;...

IPL 2026: ಬ್ಯಾಟ್ ಮಾಡಲು ಹೆದರುವಂತಹ ಬೌನ್ಸರ್ ಹಾಕಿ ಹಾರ್ದಿಕ್‌ಗೆ ಖಡಕ್ ಲುಕ್ ಕೊಟ್ಟ ಕೃನಾಲ್; ಅಣ್ತಮ್ಮರ ನಡುವೆ ಎಲ್ಲವೂ ಸರಿ ಇಲ್ಲ?

ನಿನ್ನೆ ( ಏಪ್ರಿಲ್ 12 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಲೀಗ್ ಹಂತದ 20ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಹಾಗೂ ನಾಯಕ ರಜತ್ ಪಾಟಿದರ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅತಿಥೇಯ ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್‌ಗಳಿಂದ ಮಣಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದರ್ ಹಾಗೂ ಫಿಲ್ ಸಾಲ್ಟ್ ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 240 ರನ್ ಕಲೆಹಾಕಿತು. ಈ ಬೃಹತ್ ಮೊತ್ತ ಬೆನ್ನತ್ತುವಲ್ಲಿ ವಿಫಲವಾದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 222 ರನ್ ಗಳಿಸಲಷ್ಟೆ ಶಕ್ತವಾಯಿತು.

ಇನ್ನು ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆದು ತಂಡವನ್ನು ಗೆಲುವಿನತ್ತ ಒಂದು ಹೆಜ್ಜೆ ಸಾಗುವ ಹಾಗೆ ಮಾಡಿದ ಕೃನಾಲ್ ಪಾಂಡ್ಯ ಕುರಿತು ಪಂದ್ಯದ ಮುಕ್ತಾಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಕೃನಾಲ್ ಪಾಂಡ್ಯ ತನ್ನ ಸಹೋದರ ಹಾರ್ದಿಕ್ ಪಾಂಡ್ಯಗೆ ಬೌಲಿಂಗ್ ಮಾಡುವಾಗ ಓವರ್‌ನ ಕೊನೆಯ ಎಸೆತವನ್ನು ಬೌನ್ಸರ್ ಎಸೆದು ಹಾರ್ದಿಕ್ ಕಂಗಾಲಾಗುವಂತಹ ಡೆಲಿವರಿ ಮಾಡಿದರು. ಬಳಿಕ ಕೃನಾಲ್ ಹಾರ್ದಿಕ್‌ರತ್ತ ಗಂಭೀರವಾಗಿ ನೋಡುತ್ತಾ ಅಂಪೈರ್‌ನಿಂದ ರಭಸವಾಗಿ ಕ್ಯಾಪ್ ಕಸಿದುಕೊಂಡು ನಡೆದುಹೋಗಿದ್ದಾರೆ.

ಅಲ್ಲದೇ ಹಾರ್ದಿಕ್ ಪಾಂಡ್ಯ ಜೇಕಬ್ ಡಫಿಗೆ ವಿಕೆಟ್ ಒಪ್ಪಿಸಿದಾಗ ಕೃನಾಲ್ ಪಾಂಡ್ಯ ಎಂದಿಗಿಂತ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಈ ದೃಶ್ಯವೂ ಸಹ ಇದೇ ವಿಷಯದಡಿ ವೈರಲ್ ಆಗಿದೆ.

ಈ ದೃಶ್ಯವನ್ನು ಹಂಚಿಕೊಂಡಿರುವ ಹಲವಾರು ನೆಟ್ಟಿಗರು ಅಣ್ಣ ಹಾಗೂ ತಮ್ಮನ ನಡುವೆ ಏನೋ ಸರಿ ಇಲ್ಲ ಎನಿಸುತ್ತೆ ಎಂದು ಬರೆದುಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು ಈ ಇಬ್ಬರ ನಡುವೆ ಬಿರುಕಿದ್ದರೆ ಎಲ್ಲವೂ ಸರಿಹೋಗಲಿ ಎಂದು ಆಶಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular