ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ನಿಧನಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಸಂತಾಪ ಸೂಚಿಸಿದ್ದಾರೆ.
ಆಶಾ ಭೋಸ್ಲೆ ಅವರ ನಿಧನದ ಸುದ್ದಿ ತೀವ್ರ ದುಃಖ ಉಂಟುಮಾಡಿದೆ. ಎಂಟು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಂಗೀತದ ಜೀವನಾಡಿಯಾಗಿದ್ದ ಅವರ ಧ್ವನಿ ಬಾಲಿವುಡ್ ಸೇರಿದಂತೆ ಸಂಗೀತ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ ಎಂದು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೂ ಅವರ ಕೊಡುಗೆ ಅವಿಸ್ಮರಣೀಯ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(1967) ಚಿತ್ರದ “ಯಾಕೋ ಏನೋ”, ದೂರದ ಬೆಟ್ಟ ಚಿತ್ರದ “ಸವಾಲು ಹಾಕಿ ಸೋಲಿಸಿ” ಹಾಗೂ ಮತ್ತೆ ಮುಂಗಾರು ಚಿತ್ರದ “ಹೇಳದೆ ಕಾರಣ” ದಂತಹ ಮರೆಯಲಾಗದ ಗೀತೆಗಳನ್ನು ಅವರು ಕರುನಾಡಿಗೆ ನೀಡಿದ್ದಾರೆ. ಅವರ ಈ ಕೊಡುಗೆಯನ್ನು ಕರ್ನಾಟಕ ಸದಾ ಸ್ಮರಿಸುತ್ತದೆ.
ಅವರ ಸಂಗೀತವು ತಲೆಮಾರುಗಳನ್ನು ಮೀರಿ ನಿಂತಿದ್ದು, ಮುಂಬರುವ ಪೀಳಿಗೆಗೂ ಸ್ಫೂರ್ತಿಯಾಗಲಿದೆ. ಅವರ ಕುಟುಂಬ, ಅಪಾರ ಅಭಿಮಾನಿಗಳು ಹಾಗೂ ಸಂಗೀತ ಲೋಕಕ್ಕೆ ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಮಧು ಬಂಗಾರಪ್ಪ ತಿಳಿಸಿದ್ದಾರೆ.

