ರಾತ್ರಿ ಎಂಟು ಗಂಟೆಗಳ ಕಾಲ ಸುದೀರ್ಘವಾಗಿ ನಿದ್ದೆ ಮಾಡಿದರೂ, ಮರುದಿನ ನಿಮಗೆ ನೀರಸ ಅಥವಾ ಸುಸ್ತು ಎನಿಸುತ್ತಿದ್ದರೆ ಅದು ಕೇವಲ ಆಯಾಸವಲ್ಲ; ಬದಲಿಗೆ ಕಬ್ಬಿಣಾಂಶದ (Iron) ಕೊರತೆ, ಥೈರಾಯ್ಡ್ ಸಮಸ್ಯೆ ಅಥವಾ ಸ್ಲೀಪ್ ಅಪ್ನಿಯಾ (Sleep Apnea) ಲಕ್ಷಣವೂ ಇರಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಹೌದು. ರಾತ್ರಿ ಪೂರ್ತಿ ನಿದ್ದೆ ಮಾಡಿದರೂ ಮರುದಿನ ವಿಪರೀತ ಸುಸ್ತು ಮತ್ತು ಆಲಸ್ಯ ಉಂಟಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ದೇಹದಲ್ಲಿನ ಕಬ್ಬಿಣಾಂಶದ ಕೊರತೆ, ಥೈರಾಯ್ಡ್ ಅಥವಾ ‘ಸ್ಲೀಪ್ ಅಪ್ನಿಯಾ’ದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಲಕ್ಷಣವಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಉತ್ತಮ ನಿದ್ದೆಗಾಗಿ ಮಲಗುವ ಎರಡು ಗಂಟೆ ಮುಂಚಿತವಾಗಿಯೇ ಊಟ ಮುಗಿಸುವುದು ಮತ್ತು ಮಲಗುವ ಕೋಣೆಯಲ್ಲಿ ಮೊಬೈಲ್ ಬಳಕೆಯಿಂದ ದೂರವಿರುವುದು ಅವಶ್ಯಕವಾಗಿದೆ. ಒಂದು ವೇಳೆ ಸಮಸ್ಯೆ ಮುಂದುವರಿದರೆ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.
ಇದನ್ನು ತಡೆಗಟ್ಟಲು ಮತ್ತು ಉತ್ತಮ ನಿದ್ದೆ ಪಡೆಯಲು ತಜ್ಞರು ಈ ಕೆಳಗಿನ ಸಲಹೆಗಳನ್ನು ನೀಡಿದ್ದಾರೆ:
- ಊಟದ ಸಮಯ: ಮಲಗುವ ಕನಿಷ್ಠ ಎರಡು ಗಂಟೆಗಳ ಮೊದಲೇ ರಾತ್ರಿಯ ಭೊಜನವನ್ನು ಪೂರ್ಣಗೊಳಿಸಬೇಕು.
- ಫೋನ್ ಬಳಕೆ: ಬೆಡ್‌ರೂಮ್‌ನಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಕಡಿಮೆ ಮಾಡಬೇಕು.
- ಪರಿಸರ: ಮಲಗುವ ಕೋಣೆ ಕತ್ತಲೆಯಿಂದ ಕೂಡಿರಲಿ ಮತ್ತು ಪ್ರಶಾಂತವಾಗಿರುವಂತೆ ನೋಡಿಕೊಳ್ಳಿ.
ಒಂದು ವೇಳೆ ಈ ಬದಲಾವಣೆಗಳನ್ನು ಮಾಡಿಕೊಂಡ ನಂತರವೂ ನಿಮ್ಮ ಸುಸ್ತು ಅಥವಾ ನೀರಸ ಭಾವನೆ ಕಡಿಮೆಯಾಗದಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

